ಸುದ್ದಿಗಳು

ರಾಧಿಕಾ ಪಂಡಿತ್ ಅದ್ದೂರಿ ಸೀಮಂತ ಕಾರ್ಯಕ್ರಮ

ತಾಜ್ ವೆಸ್ಟ್ಂಡ್ ಹೋಟೆಲ್ ನಲ್ಲಿ ರಾಧಿಕಾ ಸೀಮಂತ ಕಾರ್ಯಕ್ರಮ

ಬೆಂಗಳೂರು, ನ.18: ಇಂದು ರಾಧಿಕಾ ಪಂಡಿತ್ ಅವರ ಸೀಮಂತ ಕಾರ್ಯ ಅದ್ಧೂರಿಯಾಗಿಯೇ ನಡೆಯಿತು‌. ಈ ಸೀಮಂತ ಕಾರ್ಯಕ್ಕೆ ಸಿನಿಮಾ ಗಣ್ಯರು, ಸಂಬಂಧಿಕರು ಸಾಕ್ಷಿಯಾದರು.

ಡಿಸೆಂಬರ್ ೯ ರಂದು ಸಪ್ತಪದಿ ತುಳಿದಿದ್ದ ಜೋಡಿ

ಡಿಸೆಂಬರ್ ೯ ರಂದು ಜೋಡಿಯಾಗಿ ಸಪ್ತ ಪದಿ ತುಳಿದ ರಾಧಿಕಾ ಯಶ್ ಎವರ್ ಗ್ರೀನ್ ಜೋಡಿ ಎಂದು ಹೆಸರು ಪಡೆದವರು. ಮಗುವಿನ ನಿರೀಕ್ಷೆಯಲ್ಲಿರುವ ಈ ಜೋಡಿ ಇದೀಗ ಅದ್ಧೂರಿಯಾಗಿ ಸೀಮಂತ ಮಾಡಲಾಗಿದೆ. ನಗರದ ತಾಜ್ ವೆಸ್ಟೆಂಡ್ ಹೋಟೆಲ್ ನಲ್ಲಿ ಸೀಮಂತ ಕಾರ್ಯ ಮಾಡಲಾಗಿದ್ದು ಸಿನಿಮಾ ಗಣ್ಯರು ಹಾಗೂ ಸಂಬಂಧಿಕರು ಸಾಕ್ಷಿಯಾದರು.ಗೌಡ್ರ ಸಂಪ್ರದಾಯದಂತೆ ಸೀಮಂತ

ರಾಧಿಕಾ ಹಾಗೂ ಯಶ್ ಮದುವೆಯಾದ ಸ್ಥಳವೇ ಈ ತಾಜ್ ವೆಸ್ಟ್ ಎಂಡ್ ಹೋಟೆಲ್. ಇಲ್ಲಿಯೇ ಸೀಮಂತ ಕಾರ್ಯ ನಡೆಯಿತು. ಇದು ಈ ಜೋಡಿಯ ಫೇವರೇಟ್ ಸ್ಥಳ ಅಂತ ಇಲ್ಲಿಯೇ ಈ ಕಾರ್ಯ ಮಾಡಲಾಗಿದೆ. ಇನ್ನು ಗೌಡ್ರ ಸಂಪ್ರದಾಯದಂತೆ ಈ ಸೀಮಂತ ಕಾರ್ಯ ನಡೆದಿದೆ‌. ಅದ್ದೂರಿಯಾಗಿ ಹೂವಿನಿಂದ ಅಲಂಕಾರ ಗೊಂಡಿದ್ದ ಮಂಟಪದಲ್ಲಿ ರಾಧಿಕಾ ಮಿಂಚಿದರು.ಗಣ್ಯರ ಸಮ್ಮುಖದಲ್ಲಿ ನಡೀತು ಸೀಮಂತ ಕಾರ್ಯ

ಇನ್ನು ಇಂದು ನಡೆದ ಕಾರ್ಯಕ್ರಮಕ್ಕೆ ಅಂಬಿ ಪ್ಯಾಮಿಲಿ, ಪುನೀತ್ ಕುಟುಂಬ ಸೇರಿದಂತೆ ಹಲವಾರು ಮಂದಿ ಭಾಗಿಯಾಗಿದ್ದರು. ಇನ್ನು ಭಿನ್ನ ವಿಭಿನ್ನ ಖಾದ್ಯಗಳು ಸೀಮಂತ ಕಾರ್ಯದಲ್ಲಿ ಘಮಘಮಿಸಿದವು. ಇನ್ನು, ಹಸಿರು ಹಾಗೂ ಮೆರೂನ್ ಬಣ್ಣದ ಸೀರೆಯಲ್ಲಿ ನಟಿ ರಾಧಿಕಾ ಪಂಡಿತ್ ಮುದ್ದು ಮುದ್ದಾಗಿ ಕಾಣಿಸಿಕೊಂಡರು. ಇನ್ನು ಯಶ್ ಕೂಡ ಪತ್ನಿಯ ಸೀಮಂತ ಕಾರ್ಯದಲ್ಲಿ ಮಿಂಚಿದರು.

Tags

Related Articles