ಸುದ್ದಿಗಳು

ಗರ್ಭಿಣಿ ರಾಧಿಕಾ ಬಯಕೆ ಈಡೇರಿಸಿದ ರಾಕಿಂಗ್ ಸ್ಟಾರ್..!

ನನ್ನ ಪತಿ ಎಲ್ಲದಕ್ಕೂ ಸೈ ಎಂದ ರಾಧಿಕಾ

ಬೆಂಗಳೂರು, ಅ.11: ತನ್ನ ಪತಿ ಎಲ್ಲದಕ್ಕೂ ಸೈ ಎಂದು ನಟಿ ರಾಧಿಕಾ ಪಂಡಿತ್ ರಾಕಿಂಗ್ ಸ್ಟಾರ್ ಯಶ್ ಕಾರ್ಯವನ್ನು ಶ್ಲಾಘಿಸಿದ್ದಾರೆ. ಯಾವ ಕೆಲಸಕ್ಕಾಗಿ ಈ ಪ್ರಶಂಸೆ ಅಂತೀರಾ..? ಗರ್ಭೀಣಿಯಾಗಿರುವ ರಾಧಿಕಾ ಪಂಡಿತ್ ಬಯಕೆಯನ್ನು ರಾಜಾಹುಲಿ ಈಡೇರಿಸಿದ್ದಾರೆ. ಅದೂ ಕೂಡಾ ಸ್ಪೆಷಲ್ ಅಡುಗೆ ತಯಾರಿಸುವ ಮೂಲಕ ಪತ್ನಿಯ ಪ್ರಶಂಸೆಗೆ ಪಾತ್ರರಾಗಿದ್ದಾರೆ ಯಶ್.

ಅಡುಗೆ ಮಾಡಿದ ಯಶ್

ಯಶ್ ಅಡುಗೆ ತಯಾರಿಸುತ್ತಿರುವ ಪಿಕ್ಸ್ ಗಳನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್‍ಲೋಡ್ ಮಾಡಿ ಖುಷಿಪಟ್ಟಿದ್ದಾರೆ ರಾಧಿಕಾ ಪಂಡಿತ್. ನನ್ನ ಪತಿ ಎಲ್ಲ ಕೆಲಸಕ್ಕೂ ಸೈ. ಅದು ನಟನೆಯಾಗಲೀ, ಅಡುಗೆ ತಯಾರಿಕೆಯಾಗಲೀ… ಮಿ. ರಾಕಿಂಗ್ ಸ್ಟಾರ್ ಮಾಸ್ಟರ್ ಶೆಫ್ ಎಂದು ಟ್ಯಾಗ್‍ಲೈನ್ ಜೊತೆ ಫೋಟೋವನ್ನು ಫೇಸ್‍ಬುಕ್‍ನಲ್ಲಿ ರಾಧಿಕಾ ಪೋಸ್ಟ್ ಮಾಡಿದ್ದಾರೆ.

ಇದಲ್ಲದೆ, ಕೆಲ ದಿನಗಳ ಹಿಂದೆ ಗೆಳತಿಯರಾದ ಪ್ರತಿಭಾ ಸುರೇಶ್, ಸಾನಿಯಾ ಸರ್ದರಿಯಾ ಮತ್ತು ವನಿತಾ ಉಮೇಶ್ ಗರ್ಭೀಣಿ  ಸ್ನೇಹಿತೆ ರಾಧಿಕಾಗಾಗಿ ವಿಭಿನ್ನ ಬಗೆಯ ತಿಂಡಿ-ತಿನಿಸುಗಳನ್ನು ತಯಾರಿಸಿ ತಂದಿದ್ದರು. ಗೆಳತಿಯರು ತಮಗಾಗಿ ತಂದ ತಿಂಡಿಗಳ ಫೋಟೋವನ್ನೂ ತೆಗೆದು ಸೋಷಿಯಲ್ ಮೀಡಿಯಾದಲ್ಲಿ ಹಾಕಿದ್ದರು.

ಈ ಹಿಂದೆ ರಾಧಿಕಾ ತಾವು ಆಹಾರ ಸೇವಿಸುತ್ತಿರುವ ಚಿತ್ರವನ್ನೂ ಕೂಡ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಬಳಿಕ ವಿಭಿನ್ನ ಫೋಟೋಗಳನ್ನು ಅಪ್ಲೋಡ್ ಮಾಡಿದ್ದರು. ಅಲ್ಲದೆ, ಗರ್ಭಿಣಿಯಾಗಿದ್ದರೂ ಸಹ ‘ಆದಿ ಲಕ್ಷ್ಮಿ ಪುರಾಣ’ ಚಿತ್ರ ಡಬ್ಬಿಂಗ್‍ ನಲ್ಲಿ ಪಾಲ್ಗೊಳ್ಳುವ ಮೂಲಕ ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದರು.

 

Tags