ಸುದ್ದಿಗಳು

ಕುತೂಹಲ ಮೂಡಿಸುವಂತಿದೆ ರಾಧಿಕಾ ಪಂಡಿತ್ ಈ ಪೋಸ್ಟ್

ಬೆಂಗಳೂರು, ಏ.12:

ಸದ್ಯ ತಾಯ್ತನವನ್ನು ಅನುಭವಿಸುತ್ತಿರುವ ಸ್ಯಾಂಡಲ್ ವುಡ್ ಸಿಂಡ್ರೆಲಾ ರಾಧಿಕಾ, ಮುದ್ದಾದ ತಮ್ಮ ಮಗಳ ಜೊತೆ ಕಾಲ ಕಳೆಯುತ್ತಿದ್ದಾರೆ.‌ ಇದರ ಜೊತೆಗೆ  ಹೊರಗಿನ ಕಾರ್ಯಗಳನ್ನು ಅಟೆಂಡ್ ಮಾಡ್ತಾ ಇದ್ದಾರೆ. ಇವೆಲ್ಲದರ ನಡುವೆ ಈ ನಟಿ ಸಾಮಾಜಿಕ ಜಾಲತಾಣದಲ್ಲೂ ಕೂಡ ಅಭಿಮಾನಿಗಳನ್ನು ಮೀಟ್ ಮಾಡುತ್ತಾಇದ್ದಾರೆ. ಅವರಿಗಾಗಿ ಪೋಸ್ಟ್ ಗಳನ್ನು ಮಾಡ್ತಾ ಇರ್ತಾರೆ. ಇದೀಗ ಈ ನಟಿ ತಮ್ಮದೊಂದು ಫೋಟೋ ಹಾಕುವ ಮೂಲಕ ಗಮನ ಸೆಳೆದಿದ್ದಾರೆ.

ಕಣ್ಣುಗಳು ಆತ್ಮದ ಕನ್ನಡಿ

ಹೌದು, ನಟಿ ರಾಧಿಕಾ ಕನ್ನಡಿ ಮುಂದೆ ನಿಂತಿರುವ ಫೋಟೋವೊಂದನ್ನು ತಮ್ಮ ಇನ್ ಸ್ಟಾಗ್ರಾಂ ಮತ್ತು ಫೇಸ್‍ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋದ ಜೊತೆಗೆ ಕಣ್ಣುಗಳು ಆತ್ಮದ ಕನ್ನಡಿಯಾಗಿವೆ. ಎಂದು ಬರೆದುಕೊಂಡಿದ್ದಾರೆ. ಪ್ರತಿಯೊಬ್ಬರ ಆತ್ಮದಲ್ಲಿರುವ ವಿಚಾರ, ಭಾವನೆಯನ್ನು ಕಣ್ಣುಗಳೇ ತಿಳಿಸುತ್ತವೆ ಎಂಬುದು ಅವರ ಟ್ಯಾಗ್ ಲೈನ್ ನ ಅರ್ಥವಾಗಿದೆ

ಮಗಳ ಆಟಿಕೆ ಫೋಟೋ ಹಾಕಿದ ನಟಿ

ಇತ್ತೀಚೆಗಷ್ಟೆ ತಮ್ಮ ಮಗಳ ಆಟಿಕೆ ಫೋಟೋವೊಂದನ್ನು ಅಪ್ ಲೋಡ್ ಮಾಡುವ ಮೂಲಕ ನನ್ನ ಮಗಳಂತೆ ಅವಳ ಆಟಿಕೆ ಕೂಡ ಇಷ್ಟ ಎನ್ನುವ ಪೋಸ್ಟ್ ಮಾಡಿದ್ದರು. ಇದೀಗ ಈ‌ ನಟಿ ಕಣ್ಣುಗಳ ಬಗ್ಗೆ ಪೋಸ್ಟ್ ಮಾಡುವ ಮೂಲಕ ಮತ್ತೆ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಾರೆ.

 

View this post on Instagram

 

Eyes are the mirror of the soul 😊 #radhikapandit #nimmaRP

A post shared by Radhika Pandit (@iamradhikapandit) on

#balkaninews #nimmarp #rp #radhikapandit #radhikapanditmovies #radhikapanditandyash

Tags