ಸುದ್ದಿಗಳು

ಮುಂದಿನ ಲೋಕಸಭಾ ಚುನಾವಣೆಗೆ ರಾಧಿಕಾ ಪಂಡಿತ್ ಸ್ಪರ್ಧೆ…!!?!!

ಸದ್ಯ ಸಿನಿಮಾ ರಂಗದವರು ಈಗಾಗಲೇ ರಾಜಕಾರಣಿಗಳಾಗಿ ಸಮಾಜದಲ್ಲಿ ಕೆಲಸ ಮಾಡುತ್ತಿದ್ದಾರೆ. ಇತ್ತೀಚೆಗೆ ನಟಿ ಸುಮಲತಾ ಕೂಡ ರಾಜಕೀಯಕ್ಕೆ ಧುಮುಕಿದ್ದಾರೆ. ಸಿನಿಮಾ ಕಲಾವಿದರು ಇದೀಗ ಸಂಸದರಾಗಿ, ಜನರಿಗಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಇದೀಗ ಸಿನಿಮಾ ಹಾಗೂ ರಾಜಕೀಯ ರಂಗದಲ್ಲಿ ಹೊಸದೊಂದು ಸುದ್ದಿ ಸಖತ್ ಸೌಂಡ್ ಮಾಡುತ್ತಿದೆ. ನಿಜಕ್ಕೂ ಈ ಸುದ್ದಿಗೆ ಜನ ಒಂದು ಕ್ಷಣ ಶಾಕ್ ಆಗಿದ್ದಾರೆ.

ಹಾಸನ ಗೌಡ್ತಿಯಂತೆ ರಾಧಿಕಾ

ಹೌದು, ನಟ ರಾಧಿಕಾ ಪಂಡಿತ್ ಅವರು ಹಾಸನಾ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತಾರೆ ಎಂಬ ಸುದ್ದಿಯನ್ನು ತೇಲಿ ಬಿಡಲಾಗಿದೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಕೆಲವೊಬ್ಬರು ಹೀಗೆ ಹೇಳಿದ್ದಾರೆ. ನಟಿ ರಾಧಿಕಾ ಪಂಡಿತ್ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಹಾಸನದ ಗೌಡ್ತಿ ಎಂದು ಹೇಳುತ್ತಿದ್ದಾರೆ. ಸುಮಲತಾ ಗೆದ್ದ ರೀತಿಯನ್ನು ಮುಂದಿಟ್ಟುಕೊಂಡು ರಾಧಿಕಾ ಚುನಾವಣೆಯಲ್ಲಿ ಸ್ಪರ್ಧೆ ಮಾಡ್ತಾರೆ ಎಂದು ಹೇಳಲಾಗುತ್ತಿದೆ.

ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್

ಸದ್ಯ ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಸಕ್ಕತ್ ವೈರಲ್ ಆಗುತ್ತಿದೆ. ಇನ್ನೂ ನಿಖಿಲ್ ಕುಮಾರಸ್ವಾಮಿ ಅವರ ಫಾಲೋವರ್ಸ್ ಇದಕ್ಕೆ ಟಾಂಗ್ ಕೂಡ ಕೊಟ್ಟಿದ್ದಾರೆ. ಇನ್ನೂ ಈ ವಿಚಾರ ಯಶ್ ಕುಟುಂಬಕ್ಕೆ ತಲುಪಿದೆಯೋ ಇಲ್ವೋ ಗೊತ್ತಿಲ್ಲ. ಇದನ್ನೇನಾದರೂ ರಾಧಿಕಾ ನೋಡಿದರೆ ಒಮ್ಮೆ ನಕ್ಕು ಸುಮ್ಮನಾಗ್ತಾರೇನೋ.. ಆದರೆ ಅಭಿಮಾನಿಗಳ ಆಸೆ ಮುಂದಿನ ಚುನಾವಣೆಗೆ ಈಗಲೇ ತೋರ್ಪಡಿಕೆಯಾಗಿದೆ. ಸದ್ಯ ನಟಿ ರಾಧಿಕಾ ಪಂಡಿತ್ ಮಗಳ ಆರೈಕೆಯಲ್ಲಿದ್ದಾರೆ. ಈ ವೇಳೆ ರಾಜಕೀಯಕ್ಕೆ ಇವರ ಹೆಸರು ತಗಲಾಕಿಕೊಂಡಿದೆ.

ರಣ್ ವೀರ್ ಬದಲಾಗಲಿಲ್ಲ, ಆದರೆ ದೀಪಿಕಾಳನ್ನು ಬದಲಾಯಿಸಿದರು ಎಂದ ಟ್ರೋಲಿಗರು

#radhikapandit #balkaninews #yash #yashandradhikapandit #sandalwood

Tags