ಸುದ್ದಿಗಳು

ರುಚಿಕರವಾದ ಆಹಾರಕ್ಕಾಗಿ ಈ ಸುಂದರ ಬೀಚ್ ಗಾಗಿ ಇಲ್ಲಿಗೆ ಬೇಟಿ ನೀಡಿ ಎಂದ ಸಿಂಡ್ರೆಲಾ!!

ಬೆಂಗಳೂರು,ಮಾ.13: ಸ್ಯಾಂಡಲ್‌ ವುಡ್ ಸಿಂಡ್ರೆಲಾ ಸದ್ಯ ತಾಯ್ತನವನ್ನು ಅನುಭವಿಸುತ್ತಿದ್ದಾರೆ. ಪುಟ್ಟ ಮಗಳೊಂದಿಗೆ ದಿನ ಕಳೆಯುತ್ತಿರುವ ಈ ನಟಿ ಇತ್ತೀಚೆಗೆ ಬೇರೆ ಊರಿಗೆ ಪ್ರಯಾಣ ಬೆಳೆಸಿದ್ದರು… ಈ ಬಾರಿಯ ಹುಟ್ಟುಹಬ್ಬವನ್ನು ಈ ನಟಿ ಅಲ್ಲಿಯೇ ಆಚರಿಸಿಕೊಳ್ಳುವುದಕ್ಕೆ ತೀರ್ಮಾನ ಮಾಡಿದ್ದರು. ಹೀಗಂತ ವಿಡಿಯೋ ಮೂಲಕ ಹೇಳಿದ್ದರು..

ಗೋವಾದಲ್ಲಿ ಯಶ್ ಹಾಗೂ ತಮ್ಮ ಮುದ್ದಿನ ಮಗಳೊಂದಿಗೆ

ಈ ಬಾರಿ ರಾಧಿಕಾ ತಮ್ಮ ಹುಟ್ಟು ಹಬ್ಬವನ್ನು ಗೋವಾದಲ್ಲಿ ಯಶ್ ಹಾಗೂ ತಮ್ಮ ಮುದ್ದಿನ ಮಗಳೊಂದಿಗೆ ಆಚರಿಸಿಕೊಂಡಿದ್ದರು..  ಹಾಗಾಗಿ ತಮ್ಮ ಹುಟ್ಟು ಹಬ್ಬವನ್ನು ತಮ್ಮ ಅಭಿಮಾನಿಗಳೊಂದಿಗೆ ಆಚರಿಸಿಕೊಂಡಿಲ್ಲ. ಇದಾದ ನಂತರ ಸಾಮಾಜಿಕ ಮಾಧ್ಯಮದಲ್ಲಿ ಒಂದು ಪೋಸ್ಟ್ ಹಾಕಿದ್ದಾರೆ..

ಮೋಕ್ಟೇಲ್ ಗಳಿಗೆ  ಭೇಟಿ ಮಾಡಿ

“ಮುರಳಿ ಮತ್ತು ಟಾಯ್ ಟೀಮ್ ಗೆ ಧನ್ಯವಾದಗಳು..  ನಮ್ಮನ್ನು ಚೆನ್ನಾಗಿ ಆಥಿತ್ಯ ಮಾಡಿದ್ದೀರಿ.. ಮತ್ತು ನಮ್ಮ ಸಂಜೆಯನ್ನು ಇನ್ನಷ್ಟು ವಿಶೇಷವಾಗಿ ಮಾಡಿದ್ದೀರಿ..  ನಿಮ್ಮ ಆತಿಥ್ಯ ಕೇವಲ ಫ್ಯಾಬ್ ಆಗಿತ್ತು!! ಈಗ ಗೋವಾದಲ್ಲಿ ಟಾಯ್ ಗೆ ಭೇಟಿ ನೀಡಲೇಬೇಕಾದ ಸ್ಥಳವಾಗಿದೆ !! ನೀವು ಗೋವಾ ಪ್ರವಾಸವನ್ನು ಮಾಡುವ ಆಲೋಚನೆಯಿದ್ದರೆ, ರುಚಿಕರವಾದ ಆಹಾರಕ್ಕಾಗಿ ಈ ಸುಂದರ ಬೀಚ್ ಗಾಗಿ ಮತ್ತು ಅತ್ಯುತ್ತಮ ಮೋಕ್ಟೇಲ್ ಗಳಿಗೆ  ಭೇಟಿ ಮಾಡಿ! “ಎಂದು ಬರೆದಿದ್ದಾರೆ ರಾಧಿಕಾ…

ಚುನಾವಣೆಗಾಗಿ ತಯಾರಾಯ್ತು ಸುಮಲತ ಫೇಸ್ ಬುಕ್ ಪೇಜ್

Tags