ಸುದ್ದಿಗಳು

‘ದಮಯಂತಿ’ ಚಿತ್ರಕ್ಕಾಗಿ 1 ಕೋಟಿ ರೂಪಾಯಿ ಸಂಭಾವನೆ ಪಡೆದ ರಾಧಿಕಾ..!!!

ಸಂಭಾವನೆಯ ವಿಚಾರದಲ್ಲಿಯೂ ಮತ್ತೆ ಸದ್ದು ಮಾಡಿದ ಮಂಗಳೂರು ಮೀನು

ಬೆಂಗಳೂರು, ಡಿ.7: ಚಂದನವನದಲ್ಲಿ ನಟಿ ರಾಧಿಕಾ ಕುಮಾರಸ್ವಾಮಿ ಅವರು ತಮ್ಮ ಮುಂದಿನ ‘ದಮಯಂತಿ’ ಚಿತ್ರಕ್ಕಾಗಿ ತೆಗೆದುಕೊಂಡ ಸಂಭಾವನೆ ಸಖತ್ ಸುದ್ದಿ ಮಾಡುತ್ತಿದೆ.

ಸದ್ಯ ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ನಿರ್ಮಾಣಗೊಳ್ಳುತ್ತಿರುವ ಬಹುಕೋಟಿ ವೆಚ್ಚದ ಬಜೆಟ್ ಚಿತ್ರದ ‘ದಮಯಂತಿ’ಯಲ್ಲಿ ರಾಧಿಕಾ ನಟಿಸುತ್ತಿದ್ದು, ಚಿತ್ರದ ಫಸ್ಟ್ ಲುಕ್ ಈಗಾಗಲೇ ಬಿಡುಗಡೆಯಾಗಿದೆ.1 ಕೋಟಿ ಸಂಭಾವನೆ

ಇನ್ನು ಈ ಚಿತ್ರಕ್ಕಾಗಿ ರಾಧಿಕಾ ಬರೋಬ್ಬರಿ 1 ಕೋಟಿ ರೂ ಸಂಭಾವನೆ ಪಡೆದಿದ್ದಾರೆ. ಈ ಮೂಲಕ ಅವರು ಚಂದನವನದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆದ ನಟಿಯರ ಲಿಸ್ಟ್ ನಲ್ಲಿ ಮೊದಲ ಸ್ಥಾನದಲ್ಲಿದ್ದಾರೆ.

ಚಿತ್ರದ ಬಗ್ಗೆ

ನವರಸನ್ ಎಂಬುವವರು ನಿರ್ಮಾಣ ಮತ್ತು ನಿರ್ದೇಶನ ಮಾಡುತ್ತಿರುವ ‘ದಮಯಂತಿ’ ಚಿತ್ರವು ನಾಯಕಿ ಪ್ರಧಾನ ಚಿತ್ರವಾಗಿದ್ದು ತೆಲುಗಿನ ‘ಅರುಂಧತಿ’, ‘ಭಾಗಮತಿ’ ರೇಂಜ್ ನಲ್ಲಿಯೇ ಈ ಚಿತ್ರವೂ ಸಹ ತಯಾರಾಗುತ್ತಿದೆ.

ಈಗಾಗಲೇ ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದ್ದು, ರಾಧಿಕಾ ಈ ಚಿತ್ರಕ್ಕಾಗಿ ಬರೋಬ್ಬರಿ 10ಕೆ.ಜಿ ತೂಕವನ್ನು ಕಡಿಮೆ ಮಾಡಿಕೊಂಡಿದ್ದಾರೆ. ಇನ್ನು ಈ ಹಿಂದೆ ರಮ್ಯಾ ‘ಆರ್ಯನ್’ ಚಿತ್ರಕ್ಕಾಗಿ 66 ಲಕ್ಷ ರೂಪಾಯಿ, ರಶ್ಮಿಕಾ ಮಂದಣ್ಣ ‘ಪೊಗರು’ ಚಿತ್ರಕ್ಕಾಗಿ 60 ಲಕ್ಷ ರೂಪಾಯಿಯನ್ನು ಸಂಭಾವನೆಯಾಗಿ ಪಡೆದಿದ್ದಾರೆ. ಇವರುಗಳ ದಾಖಲೆಯನ್ನು ಇದೀಗ ರಾಧಿಕಾ ಮುರಿದಿದ್ದಾರೆ.

Tags

Related Articles