ಸುದ್ದಿಗಳು

ನನಗೆ ಬೋರ್ ಆದಾಗ, ಅವಳ ಆಟಿಕೆಗಳ ಜೊತೆಗೆ ಆಗಾಗ ಹೀಗೆ ಕಾಲ ಕಳೆಯುತ್ತೇನೆ: ರಾಧಿಕಾ ಪಂಡಿತ್

ಮಗಳ ಕುರಿತಂತೆ ರಾಧಿಕಾ ಸಿಹಿ ಮಾತುಗಳು

ಬೆಂಗಳೂರು.ಮಾ.03: ನಟ ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್ ಮನೆಗೆ ಮುದ್ದು ಮುದ್ದಾಗಿರುವ ಮಗಳು ಬಂದಿರುವುದು ಅವರಿಗೆ ಸೇರಿದಂತೆ ಅಭಿಮಾನಿಗಳಿಗೂ ಸಂತಸ ತಂದಿದೆ. ಈ ನಡುವೆ ರಾಧಿಕಾ ಸಹ ‘ಆದಿ ಲಕ್ಷ್ಮಿ ಪುರಾಣ’ ಚಿತ್ರದಲ್ಲೂ ಬ್ಯುಸಿಯಾಗಿದ್ದು, ತಾಯ್ತನದ ಸುಖವನ್ನು ಅನುಭವಿಸುತ್ತಿದ್ದಾರೆ.

ಸದ್ಯ ಮಗಳ ಲಾಲನೆ ಪಾಲನೆಯಲ್ಲಿ ಸಖತ್ ಎಂಜಾಯ್ ಮಾಡುತ್ತಿರುವ ರಾಧಿಕಾ ಕೆಲವು ದಿನಗಳ ಹಿಂದೆಯಷ್ಟೇ ತಮ್ಮ ಮಗಳಿಗೆ ‘ಆರ್’ ಹೆಸರಿನಿಂದ ಶುರುವಾಗುವ ಹೆಸರನ್ನು ಇಡುವುದಾಗಿ ಹೇಳಿಕೊಂಡಿದ್ದರು. ಸದ್ಯ ಅವರೊಂದು ಮಗಳ ಆಟಿಕೆಯನ್ನು ಹಿಡಿದು ಅದನ್ನು ಇನ್ ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದು, ‘ನನಗೆ ಬೋರ್ ಆದಾಗ, ಅವಳ ಆಟಿಕೆಗಳ ಜೊತೆಗೆ ಆಗಾಗ ಹೀಗೆ ಕಾಲ ಕಳೆಯುತ್ತೇನೆ’ ಎಂದು ಬರೆದುಕೊಂಡಿದ್ದಾರೆ.

 

View this post on Instagram

 

When bored.. i entertain myself with her toys sometimes 😁 P.S : when she is sleeping of course!! #radhikapandit #nimmaRP

A post shared by Radhika Pandit (@iamradhikapandit) on

ಇನ್ನು ಮತ್ತೊಂದು ಕಡೆ ರಾಧಿಕಾ ಪತಿ ಯಶ್, ಮಂಡ್ಯದಲ್ಲಿ ಸುಮಲತಾ ಪರ ಪ್ರಚಾರದಲ್ಲಿ ಬಿಝಿಯಾಗಿದ್ದಾರೆ. ಹೀಗಾಗಿ ಅಮ್ಮ ಮಗಳು ಮನೆಯಲ್ಲಿ ನಮ್ಮ ಪ್ರಪಂಚನೇ ಬೇರೆ ಅಂತಿದ್ದಾರೆ. ಹೀಗಾಗಿ ತನ್ನ ಮಗಳೊಂದಿಗೆ ತಾಯ್ತಾನದ ಹೊಸ ಅನುಭವವನ್ನು ಖುಷಿಯಾಗಿ ಎಂಜಾಯ್ ಮಾಡುತ್ತಿರುವ ಅವರು, ಮಗಳು ನಿದ್ದೆ ಮಾಡುವಾಗ ತಾಯಿಯಾದರೂ ಏನು ಮಾಡುವುದಕ್ಕೆ ಆಗುತ್ತದೆ ಹೇಳಿ ಅಂತಾ, ಮಗಳು ಆಟವಾಡುವ ಬಳೆಯನ್ನು ಹಿಡಿದಿದ್ದಾರೆ.

ಅದೇನೇ ಇರಲಿ ರಾಧಿಕಾ ಆಗಾಗ ತಮಗೆ ಸಂಬಂಧಿಸಿ ಫೋಟೋಗಳನ್ನು ಹಂಚಿಕೊಳ್ಳುತ್ತಾ ಅಭಿಮಾನಿಗಳಿಗೆ ಇನ್ನಷ್ಟು ಹತ್ತಿರವಾಗುತ್ತಿದ್ದಾರೆ. ಹಾಗೆಯೇ ಮಗುವಿಗೆ ಐದು ತಿಂಗಳು ತುಂಬಿದ ಬಳಿಕ ನಾಮಕರಣ ಮಾಡಲಿದ್ದಾರೆ.

ಗುಳಿಕೆನ್ನೆಯ ಚೆಲುವೆ ವೈಷ್ಣವಿ

#radhikapandith, #doughterpost, #balkaninews #yash, #adilakshmipurana, #filmnews, #kannadasuddigalu

Tags