ಸುದ್ದಿಗಳು

‘ಆರ್..’ ಎಂದು ಪೋಸ್ಟ್ ಹಾಕಿದ ರಾಧಿಕಾ ಪಂಡಿತ್: ಸ್ಪಷ್ಟನೆ ನೀಡಿದ ಯಶ್

“R stands for.. let see”

ಬೆಂಗಳೂರು.ಮಾ.20: ನಟಿ ರಾಧಿಕಾ ಪಂಡಿತ್ ‘ಆರ್’ ಅಕ್ಷರವನ್ನು ಹಿಡಿದು ತಮ್ಮ ಇನ್ ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಹಾಕಿ ‘ಆರ್.. ಸ್ಟಾಂಡ್ಸ್ ಫಾರ್.. ಲೆಟ್ಸ್ ಸೀ’ ಎಂದ ಬರೆದುಕೊಂಡಿದ್ದರು. ಈ ಪೋಸ್ಟ್ ನೋಡಿದ ಅಭಿಮಾನಿಗಳು ಮಗಳ ಹೆಸರು ಆರ್ ಅಕ್ಷರದಿಂದ ಪ್ರಾರಂಭವಾಗುತ್ತದೆ ಎಂದು ತಿಳಿದು, ಅನೇಕ ಹೆಸರುಗಳನ್ನು ಗೆಸ್ ಮಾಡಿ ಕಮೆಂಟ್ ಮಾಡುತ್ತಿದ್ದಾರೆ. ಆದರೆ ಈ ಬಗ್ಗೆ ಯಶ್ ಸ್ಪಷ್ಟನೆ ಕೊಟ್ಟಿದ್ದಾರೆ.

‘ನೀವು ಅಂದುಕೊಂಡಿದ್ದು ನಿಜಾ, ಆದರೆ ಮಗಳಿಗೆ ಇನ್ನು ಯಾವ ಹೆಸರನ್ನು ಅಂತಿಮ ಮಾಡಿಲ್ಲ. ಅಭಿಮಾನಿಗಳು ಕೆಲವು ಹೆಸರುಗಳನ್ನು ಸೂಚಿಸುತ್ತಿರುವುದು ನಿಜಕ್ಕೂ ಖುಷಿ ಕೊಟ್ಟಿದೆ. ಸದ್ಯದಲ್ಲಿಯೇ ಸಂಪ್ರದಾಯವಾಗಿ ಒಂದು ಹೆಸರಿಡುತ್ತೇವೆ. ಆಮೇಲೆ ಬೇಕಾದರೆ, ನಮಗೆ ಇಷ್ಟ ಬಂದಂತೆ ಕರೆಯೋಣಾ” ಎಂದು ಯಶ್ ಹೇಳಿದ್ದಾರೆ.

ಈ ವಿಷಯವನ್ನು ಯಶ್ ನಿನ್ನೆ ‘ಪಂಚತಂತ್ರ’ ಚಿತ್ರದ ಪತ್ರಿಕಾಗೋಷ್ಟಿಯಲ್ಲಿ ಹೇಳಿದ್ದಾರೆ. ಸದ್ಯ ಮಂಡ್ಯದಲ್ಲಿ ಸುಮಲತಾ ಅಂಬರೀಶ್ ಪರ ಪ್ರಚಾರ ಮಾಡಲು ತಯಾರಾಗಿದ್ದು, ‘ಕೆ.ಜಿ.ಎಫ್-2’ ಚಿತ್ರದಲ್ಲಿ ನಟಿಸುತ್ತಿದ್ದಾರೆ.

Image result for radhika pandith yash

“ಇನ್ನು ಅಭಿಮಾನಿಗಳು ನೀವು ಮತ್ತು ರಾಧಿಕಾ ಒಟ್ಟಿಗೆ ನಟಿಸಿ ಎನ್ನುತ್ತಿದ್ದಾರೆ. ಅವರು ಇಷ್ಟೊಂದು ಪ್ರೀತಿ ತೋರಿಸುತ್ತಿರುವುದಕ್ಕೆ ತುಂಬಾ ಧನ್ಯವಾದಗಳು. ಒಳ್ಳೆಯ ಸಿನಿಮಾ ಆಫರ್ ಬಂದರೆ ರಾಧಿಕಾ ನಾನು ಒಟ್ಟಿಗೆ ಸಿನಿಮಾ ಮಾಡುತ್ತೇವೆ. ರಾಧಿಕಾ ನನ್ನ ಪತ್ನಿ ಎನ್ನುವುದಕ್ಕಿಂದ ಅವರೊಬ್ಬರು ಉತ್ತಮ ನಟಿ, ಅವರ ಜೊತೆ ನಟನೆ ಮಾಡುವುದು ಎಂದರೆ ಖುಷಿಯಾಗುತ್ತದೆ” ಎಂದು ಯಶ್ ಹೇಳಿದ್ದಾರೆ.

ಯಶ್ ಹಾಗೂ ರಾಧಿಕಾ ಒಟ್ಟಿಗೆ ‘ಮೊಗ್ಗಿನ ಮನಸು’, ‘ಡ್ರಾಮಾ’, ‘ಮಿಸ್ಟರ್ ಆ್ಯಂಡ್ ಮಿಸೆಸ್ ರಾಮಾಚಾರಿ’, ಮತ್ತು ‘ಸಂತು’ ಚಿತ್ರದಲ್ಲಿ ನಟಿಸಿದ್ದರು. ನಂತರ ಈ ಜೋಡಿ ಮದುವೆಯಾದರು. ಈ ಜೋಡಿ ಮತ್ತೆ ಒಟ್ಟಿಗೆ ನಟಿಸಲಿ.

‘ಬ್ರಹ್ಮಸ್ತ್ರ ಚಿತ್ರದಲ್ಲಿ ಮೌನಿ ಪಾತ್ರ ರಿವೀಲ್!!

#radhikapandith, #Rpost, #balkaninews #kannadasuddigalu, #yash, #radhikapandith

Tags