ಸುದ್ದಿಗಳು

‘ರಗಡ್’ ಚಿತ್ರದ ನಿರ್ದೇಶಕ ಮಹೇಶ್ ಗೌಡ ಅವರಿಗೆ ಹುಟ್ಟುಹಬ್ಬದ ಸಂಭ್ರಮ….

ಬೆಂಗಳೂರು,ಫೆ.11:

ಮೂಲತಃ ಹಾಸನದವರಾದ ಮಹೇಶ್ ಗೌಡ ಕಳೆದ 15 ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ.. 28ಕ್ಕೂ ಹೆಚ್ಚಿನ ಸಿನಿಮಾಗಳಲ್ಲಿ ಸಹಾಯಕ ನಿರ್ದೇಶಕ ಹಾಗೂ ಸಹ   ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ.. ಇದೀಗ ‘ರಗಡ್’ ಎನ್ನುವ ಚಿತ್ರದ ಮೂಲಕ ಪೂರ್ಣ ಪ್ರಮಾಣದ ನಿರ್ದೇಶಕರಾಗುತ್ತಿದ್ದಾರೆ.. ಮಹೇಶ್ ಗೌಡ ಅವರಿಗೆ ಇಂದು ಹುಟ್ಟು ಹಬ್ಬದ ಸಂಭ್ರಮ..

ಹಲವಾರು ನಿರ್ದೇಶಕರೊಂದಿಗೆ ಕೆಲಸ ಮಾಡಿದ ಅನುಭವ

ಯೋಗರಾಜ್ ಭಟ್, ಸಾಯಿಪ್ರಕಾಶ್ ,ಹೀಗೆ ಹಲವಾರು ನಿರ್ದೇಶಕರೊಂದಿಗೆ ಕೆಲಸ ಮಾಡಿದ ಅನುಭವ ಇವರಿಗಿದೆ.. ‘ರಗಡ್’ ಎಂದರೆ ಉತ್ತರ ಕರ್ನಾಟಕದ ಶೈಲಿಯ ಮಾತಾಗಿದ್ದು,ಇದು ಯೂತ್ ಗೆ ಇಷ್ಟವಾಗುವಂತಹ ಚಿತ್ರ… ಹೊಸತರಹ, ವಿಭಿನ್ನ ಕಥಯನ್ನು ಇಟ್ಟುಕೊಂಡು ಮಹೇಶ್ ಗೌಡ ಚಿತ್ರವನ್ನು ಮಾಡಿದ್ದಾರೆ

Image may contain: 6 people, people standing

‘ರಗಡ್’ ಚಿತ್ರ

ಸ್ಯಾಂಡಲ್ ವುಡ್ ನ ಮರಿ ಟೈಗರ್ ವಿನೋದ್ ಪ್ರಭಾಕರ್ ಅಭಿನಯದ “ರಗಡ್” ಚಿತ್ರ  ಈಗ ಭಾರಿ ಸದ್ದು ಮಾಡುತ್ತಿದೆ.. ವಿನೋದ್ ಪ್ರಭಾಕರ್ ಗೆ ಜೋಡಿಯಾಗಿ ಚೈತ್ರ ರೆಡಿ ಅಭಿನಯಿಸುತ್ತಿದ್ದು , ಈ ಚಿತ್ರವನ್ನು  ಮಹೇಶ್ ಗೌಡ ನಿರ್ದೇಶನ ಮಾಡಿದ್ದಾರೆ. ಮರಿ ಟೈಗರ್ ವಿನೋದ್ ಪ್ರಭಾಕರ್ ರವರ ಶ್ರಮ ಹಾಗೂ ಸಿನಿಮಾ ಪ್ರೀತಿ “ರಗಡ್” ಚಿತ್ರದಲ್ಲಿ ಕಾಣಲಿದೆ.

Image result for ragad movie kannada

‘ರಗಡ್’ ಚಿತ್ರದ ಮೂಲಕ ನಿರ್ದೇಶನಕ್ಕೆ ಪಾದಾರ್ಪಣೆ

ಚಿತ್ರಕ್ಕಾಗಿ ದೇಹವನ್ನು ದಂಡಿಸಿ, 8 ಪ್ಯಾಕ್ ಪಡೆಯಲು ಸಾಕಷ್ಟು ಬೆವರು ಹರಿಸಿದ್ದಾರೆ.  ‘ರಗಡ್’ ಚಿತ್ರದ ಮೂಲಕ ನಿರ್ದೇಶನಕ್ಕೆ ಪಾದಾರ್ಪಣೆ ಮಾಡಿರುವ ಮಹೇಶ್ ಗೌಡ ಅವರ ಸಿನಿ ಪಯಣ ಹೀಗೆ ಮುಂದುವರೆಯಲಿ, ಇನ್ನಷ್ಟು ಉತ್ತಮ ಚಿತ್ರಗಳನ್ನು ನೀಡುತ್ತಾ ಬರಲಿ ಎಂದು ಮತ್ತೊಮ್ಮೆ ಬಾಲ್ಕನಿ ನ್ಯೂಸ್ ವತಿಯಿಂದ  ಮಹೇಶ್ ಗೌಡ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು..

ಶಿವಣ್ಣ ಮೆಚ್ಚಿಕೊಂಡ ‘ಮಜ್ಜಿಗೆ ಹುಳಿ’ ಚಿತ್ರದ ‘ಮಚ್ಚಾ ಮಚ್ಚಿ’ ಸಾಂಗ್ ರಿಲೀಸ್

#balkaninews #ragadmoive #maheshgowdabirthday

Tags