ಚಿತ್ರ ವಿಮರ್ಶೆಗಳುಬಾಲ್ಕನಿಯಿಂದಸುದ್ದಿಗಳು

‘ರಗಡ್’ ಆಗಿ ಎಂಟ್ರಿ ಕೊಟ್ಟು ಪ್ರೇಕ್ಷಕರನ್ನು ರಂಜಿಸಿದ ವಿನೋದ್ ಪ್ರಭಾಕರ್

ಚಿತ್ರಕ್ಕೆ ಸಿಕ್ತು ಉತ್ತಮ ಪ್ರತಿಕ್ರಿಯೆ

ಬೆಂಗಳೂರು.ಮಾ.30: ಬಹಳ ದಿನಗಳ ನಂತರ ವಿನೋದ್ ಪ್ರಭಾಕರ್ ‘ರಗಡ್’ ಆಗಿ ಎಂಟ್ರಿ ಕೊಟ್ಟು ಪ್ರೇಕ್ಷಕರನ್ನು ರಂಜಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇವರಂತೆಯೇ ನವ ನಾಯಕಿ ಚೈತ್ರಾ ರೆಡ್ಡಿ ಅಭಿನಯ ಗಮನ ಸೆಳೆಯುವಂತಿದೆ.

ಇನ್ನು ಚಿತ್ರಕ್ಕಾಗಿ ಏಟ್ಸ್ ಪ್ಯಾಕ್ ಮಾಡಿಕೊಂಡ ವಿನೋದ್ ಪ್ರಭಾಕರ್ ಮಾಡುವ ಸಾಹಸ ಸನ್ನಿವೇಶಗಳು ರೋಚಕಕಾರಿಯಾಗಿದ್ದು, ಬಹುಶಃ ಈ ಸಿನಿಮಾ ಫ್ಯಾನ್ಸ್ ಗಾಗಿಯೇ ಮಾಡಲಾಗಿದೆ ಎಂದು ಅನಿಸುತ್ತದೆ. ಅವರಿಲ್ಲಿ ಲವರ್ ಬಾಯ್ ಆಗಿಯೂ ರಂಜಿಸುತ್ತಾರೆ. ಅಂದ ಹಾಗೆ ಇದೊಂದು ಕರ್ನಾಟಕದಲ್ಲೇ ನಡೆದ ಒಂದು ನೈಜ ಘಟನೆಯಧಾರಿತ ಸಿನಿಮಾ.

Image may contain: 2 people, people smiling, people standing

ಅರಣ್ಯವಾಸಿಗಳ ಎತ್ತಂಗಡಿ ಮೂಲಕ ಚಿತ್ರದ ಕತೆ ತೆರೆದುಕೊಳ್ಳುತ್ತದೆ. ಅರಣ್ಯ ಇಲಾಖೆ ಅಧಿಕಾರಿಗಳ ಕುತಂತ್ರದಿಂದ ಒಂದಷ್ಟು ಆದಿವಾಸಿ ಕುಟುಂಬಗಳು ಮೂಲ ನೆಲೆ ಕಳೆದುಕೊಂಡು ಬೀದಿಪಾಲು ಆಗುತ್ತವೆ. ಆ ಕುಟುಂಬಗಳಿಂದ ನಗರಕ್ಕೆ ಕೆಲಸ ಅರಸಿ ಬಂದ ನಾಲ್ಕೈದು ಯುವಕರ ಪೈಕಿ ಶಿವು ಕೂಡ ಒಬ್ಬ. ಮುಂದೆ ಆತ ರೌಡಿ ಗ್ಯಾಂಗ್ ಸೇರಿ, ದರೋಡೆ ಕೋರನಾಗಿ, ಕಳ್ಳನಾಗಿ ಕಾಣಿಸಿಕೊಳ್ಳುತ್ತಾನೆ. ಹೀಗೆ ಮುಂದಕ್ಕೆ ಆತನ ಕಥೆ ಏನಾಯಿತು ಎಂಬುದನ್ನು ತೆರೆಯ ಮೇಲೆ ನೋಡಿದರೇನೆ ಚಂದ.

Image may contain: 4 people, people smiling, people standing and outdoor

ಈ ಹಾದಿಯಲ್ಲಿ ಬರುವ ಎಲ್ಲರ ಪಾತ್ರಗಳು ಗಮನ ಸೆಳೆಯುತ್ತವೆ. ದೀಪಕ್ ಶೆಟ್ಟಿ, ಓಂ ಪ್ರಕಾಶ್ ರಾವ್, ರಾಜೇಶ್ ನಟರಂಗ, ಓಂ ಪ್ರಕಾಶ್ ರಾವ್, ನರೇಶ್ ಗೌಡ, ಡ್ಯಾನಿ ಕುಟ್ಟಪ್ಪ, ಮಾಲತಿ ಸರ್ ದೇಶಪಾಂಡೆ, ಸೇರಿದಂತೆ ಹಲವರು ತಮ್ಮ ನಟನೆಯಿಂದ ಪ್ರೇಕ್ಷಕರನ್ನು ರಂಜಿಸಿದರೆ, ಅಭಿಮನ್ ರಾಯ್ ಹಾಡುಗಳಿಂದ ಮನಸೂರೆಗೊಳ್ಳುತ್ತಾರೆ.

ಇದೊಂದು ಆಕ್ಷನ್ ಸಿನಿಮಾವಾದರೂ ಪ್ರೀತಿಗೆ ಹೆಚ್ಚು ಪ್ರಾಮುಖ್ಯತೆ ನೀಡಲಾಗಿದೆ. ಒಟ್ಟಾರೆಯಾಗಿ ಎಲ್ಲ ವರ್ಗದ ಪ್ರೇಕ್ಷಕರು ಹೋಗಿ ಈ ‘ರಗಡ್’ ಚಿತ್ರವನ್ನು ಒಮ್ಮೆ ನೋಡಬಹುದು. ಇನ್ನು ಇದೇ ಮೊದಲ ಬಾರಿಗೆ ಆ್ಯಕ್ಷನ್ ಕಟ್ ಹೇಳಿರುವ ಶ್ರೀ ಮಹೇಶ್ ಗೌಡ ಚೊಚ್ಚಲ ಚಿತ್ರದಲ್ಲೇ ಭರವಸೆ ಮೂಡಿಸಿದ್ದಾರೆ.

ಗಮ್ಯವೇ ಎಲ್ಲಿ ಎಲ್ಲಿ ನೀನು..?? ಮೋಡಿ ಮಾಡಿದ ‘99’ ಚಿತ್ರದ ಹಾಡು

#ragad, #filmreview, #balkaninews filmnews, #kannadasuddigalu, #kannadasuddigalu

Tags