ಸುದ್ದಿಗಳು

ವಿನೋದ್ ಪ್ರಭಾಕರ್ ಚಿತ್ರಕ್ಕೆ ಸಾಥ್ ನೀಡಿದ ದರ್ಶನ್

ಇದೇ 16 ಕ್ಕೆ ‘ರಗಡ್’ ಚಿತ್ರದ ಟ್ರೈಲರ್ ಬಿಡುಗಡೆ

ಬೆಂಗಳೂರು.ಮಾ.14: ವಿನೋದ್ ಪ್ರಭಾಕರ್ ನಟಿಸಿರುವ ‘ರಗಡ್’ ಚಿತ್ರವು ಬಿಡುಗಡೆಗೆ ಸಿದ್ದವಾಗಿದ್ದು, ಇದೇ ತಿಂಗಳ 16 ಕ್ಕೆ ಚಿತ್ರದ ಟ್ರೈಲರ್ ಬಿಡುಗಡೆಯಾಗುತ್ತಿದೆ. ವಿಶೇಷವೆಂದರೆ, ಈ ಟ್ರೈಲರ್ ಅನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಿಡುಗಡೆ ಮಾಡುತ್ತಿದ್ದಾರೆ.

ಈಗಾಗಲೇ ‘ರಗಡ್’ ಚಿತ್ರವು ಸಾಕಷ್ಟು ಕುತೂಹಲ ಮೂಡಿಸಿದ್ದು, ಹಾಡುಗಳು ಸಹ ಹಿಟ್ ಆಗಿವೆ. ಇನ್ನು ಈ ಚಿತ್ರದ ಮುಹೂರ್ತದ ದಿನಕ್ಕೂ ಸಹ ದರ್ಶನ್ ಕ್ಲಾಪ್ ಮಾಡುವ ಮೂಲಕ ಶುಭ ಹಾರೈಸಿದ್ದರು. ಈಗ ಚಿತ್ರದ ಟ್ರೈಲರ್ ಬಿಡುಗಡೆಗೂ ಸಾಥ್ ನೀಡುತ್ತಿದ್ದಾರೆ. ಈ ಮೂಲಕ ಅವರು ವಿನೋದ್ ರವರಿಗೆ ಜೊತೆಯಾಗಿದ್ದಾರೆ.

ಅಂದ ಹಾಗೆ ಇದೇ ಶನಿವಾರ ದಿನಾಂಕ 16 ರಂದು ‘ರಗಡ್’ ಚಿತ್ರದ ಆಡಿಯೋ ಬಿಡುಗಡೆ ಕಾರ್ಯಕ್ರಮ ನಡೆಯಲಿದ್ದು, ಡಿ ಬಾಸ್ ಮುಖ್ಯ ಅತಿಥಿಯಾಗಲಿದ್ದಾರೆ. ಅದಕ್ಕೂ ಒಂದು ದಿನ ಮುಂಚೆ ಅಂದರೆ ಶುಕ್ರವಾರ ಚಿರಂಜೀವಿ ಸರ್ಜಾ ಅಭಿನಯದ ‘ಸಿಂಗ’ ಚಿತ್ರದ ಟ್ರೈಲರ್ ರಿಲೀಸ್ ಮಾಡಲಿದ್ದಾರೆ ದರ್ಶನ್.

ಇನ್ನು ಚಿತ್ರದ ಹೆಸರು ಕೇಳುತ್ತಿದ್ದಂತೆಯೇ ಇದೊಂದು ಆ್ಯಕ್ಷನ್ ಸಿನಿಮಾವೆಂದು ಮೇಲ್ನೋಟಕ್ಕೆ ಅನಿಸುತ್ತದೆ. ಆದರೆ ಇದೊಂದು ಪಕ್ಕಾ ಕೌಟುಂಬಿಕ ಸಿನಿಮಾವಾಗಿದೆ. ಚಿತ್ರಕ್ಕೆ ನಾಯಕಿಯಾಗಿ ಚೈತ್ರಾ ರೆಡ್ಡಿ ಕಾಣಿಸಿಕೊಂಡಿದ್ದು, ಶ್ರೀ ಮಹೇಶ್ ಗೌಡ ನಿರ್ದೇಶನ ಮಾಡಿದ್ದಾರೆ.

ಇನ್ನು ವಿನೋದ್ ಪ್ರಭಾಕರ್ ಸಹ ಈ ವರ್ಷಪೂರ್ತಿ ಬ್ಯುಸಿಯಾಗಿದ್ದು, ‘ಸಿ.ಎಂ’, ಪೈಟರ್’, ‘ಶ್ಯಾಡೋ’ ಸೇರಿದಂತೆ ಮತ್ತೆರೆಡು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಸದ್ಯ ‘ರಗಡ್’ ರಿಲೀಸ್ ಗೆ ರೆಡಿಯಾಗುತ್ತಿದೆ.

ನಿರ್ದೇಶನದತ್ತ ಪುಟ್ಟ ಗೌರಿಯ ರಂಜನಿ

#ragada, #trailorrealsed, #balkaninews #kannadasuddigalu, #filmnews #vinodprabhakar, #chaitrareddy

Tags

Related Articles