ಸುದ್ದಿಗಳು

ವೈರಲ್ ಆಯ್ತು ರಾಘವ ಲಾರೆನ್ಸ್ ಅಭಿಮಾನಿಯ ಹುಚ್ಚಾಟದ ಪೋಟೊ

ಚೆನೈ, ಏ.22:

ರಾಘವ ಲಾರೆನ್ಸ್ ಹಲವಾರು ಸಿನಿಮಾಗಳು, ಸಾಮಾಜಿಕ‌ ಕಾರ್ಯಗಳ ಮೂಲಕವೇ ಸದ್ದು ಮಾಡಿದ ನಟ. ಬಹಳಷ್ಟು ಮಂದಿ ಇವರನ್ನು ನೋಡಿ ಪ್ರೇರಣೆ ಹೊಂದಿದ್ದಾರೆ. ಅದೆಷ್ಟೋ ಮಂದಿಗೆ ಈ ನಟ ಮಾದರಿಯಾಗಿದ್ದಾರೆ. ಈ ನಟನ ಕಾಂಚನ 3 ಸಿನಿಮಾ ಇತ್ತೀಚೆಗೆ ಅದ್ದೂರಿಯಾಗಿ ತೆರೆ ಕಂಡು ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಇಲ್ಲೊಬ್ಬರು ಲಾರೆನ್ಸ್ ಅಭಿಮಾನಿ ತಮ್ಮ ನೆಚ್ಚಿನ ನಟನಿಗೆ ಜೀವದ ಅಂಗು ತೊರೆದು ಹಾಲಿನ ಅಭಿಷೇಕ ಮಾಡಿದ್ದಾರೆ.

ವಿಭಿನ್ನವಾಗಿ ಅಭಿಮಾನ ತೋರಿದ ಅಭಿಮಾನಿ

ಸಾಮಾನ್ಯವಾಗಿ ಅಭಿಮಾನಿಗಳಿಗೆ ತಮ್ಮ ನೆಚ್ಚಿನ ನಟರನ್ನು ನೋಡುವಂತದ್ದು, ಮಾತನಾಡಿಸುವಂತದ್ದು, ಅವರ ಜೊತೆ ಸೆಲ್ಫಿ ತೆಗದುಕೊಳ್ಳುವುದು, ಅವರ ಸಿನಿಮಾ ಬಿಡುಗಡೆಯಾದಾಗ ಪೋಸ್ಟರ್, ಕಟೌಟ್ ಗಳಿಗೆ ಹಾಲಿನ ಅಭಿಷೇಕ‌ ಮಾಡುವುದು ಸಾಮಾನ್ಯವಾಗಿ ಬಿಟ್ಟಿವೆ. ಆದರೆ ಲಾರೆನ್ಸ್‌ ನ ಅಭಿಮಾನಿಯೊಬ್ಬರು ವಿಭಿನ್ನವಾಗಿ ಅಭಿಮಾನ ತೋರಿದ್ದಾರೆ. ಆದರೆ ಇದು ಟೀಕೆಗೆ ಗುರಿಯಾಗಿದೆ. ಅಷ್ಟೇ ಅಲ್ಲ ಅಭಿಮಾನಿಯ ಈ ಹುಚ್ಚಾಟಕ್ಕೆ ನಟ ಕೂಡ ಬೇಸರ ವ್ಯಕ್ತ ಪಡಿಸಿದ್ದಾರೆ.

ಕ್ರೇನ್ ನಲ್ಲಿ ನೇತಾಡಿದ ಅಭಿಮಾನಿ

ಈ ಅಭಿಮಾನಿ ರಾಘವ ಲಾರೆನ್ಸ್ ಅವರ ಕಟ್ ಔಟ್ ಗೆ ಹಾಲಿನ ಅಭಿಷೇಕ ಮಾಡಲು ಕ್ರೇನ್ ಬಳಸಿದ್ದಾನೆ. ಈ ಕ್ರೇನ್ ನಲ್ಲಿ ಹಗ್ಗ ಕಟ್ಟಿಕೊಂಡು ಎತ್ತರದಲ್ಲಿ ನೇತಾಡುತ್ತ ಬಿಂದಿಗೆಯಲ್ಲಿ ಹಾಲಿನ ಅಭಿಷೇಕ ಮಾಡಿದ್ದಾನೆ. ಈ ವೇಳೆ ಸ್ವಲ್ಪ ಹೆಚ್ಚು ಕಡಿಮೆ ಆಗಿದ್ದರು ಆತನ ಪ್ರಾಣಕ್ಕೆ ಅಪಾಯ ಖಂಡಿತವಾಗಿತ್ತು.. ಆದರೆ ಅದೃಷ್ಟವಶಾತ್ ಯಾವುದೇ ದುರ್ಘಟನೆ ನಡೆದಿಲ್ಲ.

ಅಭಿಮಾನಿಯ ಆಟಕ್ಕೆ ನಟ ಬೇಸರ

ಇನ್ನೂ ಈ ಘಟನೆ ಸಂಬಂಧ ನಟ  ಪೋಸ್ಟ್ ಮಾಡಿದ್ದಾರೆ. ನನ್ನ ಪ್ರೀತಿಯ ಅಭಿಮಾನಿಗಳೇ, ಈ ವಿಡಿಯೋ‌ ನಾನು ನೋಡಿದ್ದೇನೆ. ಹೇಗೆ ಮಾಡಿದ್ದಾರೆ ಅಂತಾ. ಇಷ್ಟು ರಿಸ್ಕ್ ತೆಗೆದುಕೊಂಡು ಅಭಿಮಾನ ತೋರುವುದು ಅಗತ್ಯವಿಲ್ಲ. ಇಂಥಹ ಘಟನೆ ಮತ್ತೆ ನಡೆಯಬಾರದು. ಇಂಥಹ ಕೆಲಸ ಮಾಡುವ ಮುನ್ನ ನಿಮ್ಮ ಮನೆಯವರನ್ನು ಒಮ್ಮೆ ನೆನಪಿಸಿಕೊಳ್ಳಿ. ನೀವು ನಿಜವಾಗಿ ನನ್ನ ಅಭಿಮಾನಿಗಳಾಗಿದ್ದಲ್ಲಿ. ಅದನ್ನು ಎಂದು ಸಾಬೀತು ಮಾಡಬೇಕಿದ್ದರೆ, ಕಷ್ಟದಲ್ಲಿ ಇರುವವರಿಗೆ ಸಹಾಯ ಮಾಡಿ ಅಷ್ಟೆ ಸಾಕು. ಅದೇ ನನಗೆ ತೋರಿಸುವ ಗೌರವ. ಕಷ್ಟ ದಲ್ಲಿರುವ ಮಕ್ಕಳಿಗೆ, ಶುಲ್ಕಕ್ಕಾಗಿ ಕಷ್ಟ ಪಡುತ್ತಿರುವ ಮಕ್ಕಳಿಗೆ ನೆರವಾಗಿ. ಎಷ್ಟೋ ವೃದ್ಧರು ಆಹಾರವಿಲ್ಲದೆ ನೋವಿನಲ್ಲಿ ಇದ್ದಾರೆ. ಅಂತಹವರಿಗೆ ಆಹಾರ ನೀಡಿ ಎಂದು ಪೋಸ್ಟ್ ಮುಖಾಂತರ ಮನವಿ ಮಾಡಿದ್ದಾರೆ.

ವಿಜಯ್ ದೇವರಕೊಂಡ ಚಿತ್ರದಲ್ಲಿ ದೂದ್ ಪೇಡಾ ದಿಗಂತ್..!!!

 #raghavalawrence #kollywood #tamilmovies #raghavalawrencemovies

Tags