ಸುದ್ದಿಗಳು

‘ಅಮ್ಮನ ಮನೆ’ ಚಿತ್ರದ ಟೀಸರ್ ಬಿಡುಗಡೆ ಸಮಾರಂಭ

ಇದೇ ಶನಿವಾರ ಕಲಾವಿದರ ಸಂಘದಲ್ಲಿ ನಡೆಯಲಿರುವ ಕಾರ್ಯಕ್ರಮ

ಬೆಂಗಳೂರು.ಜ.11: ಸುಮಾರು ವರ್ಷಗಳ ನಂತರ ರಾಘವೇಂದ್ರ ರಾಜ್ ಕುಮಾರ್ ಅಭಿನಯಿಸುತ್ತಿರುವ ‘ಅಮ್ಮನ ಮನೆ’ ಸಿನಿಮಾ ಬಿಡುಗಡೆಗೆ ಸಿದ್ದವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಚಿತ್ರದ ಟೀಸರ್ ಅನ್ನು ಚಿತ್ರತಂಡ ರಿಲೀಸ್ ಮಾಡುತ್ತಿದೆ.

ಇದೇ ಶನಿವಾರ ನಡೆಯಲಿರುವ ಕಾರ್ಯಕ್ರಮ

ನಾಳೆ ಶನಿವಾರ, ದಿನಾಂಕ 12 ರಂದು ಸಂಜೆ 4 ಘಂಟೆಗೆ ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಕಲಾವಿದರ ಸಂಘದಲ್ಲಿ “ಅಮ್ಮನ ಮನೆ ” ಚಿತ್ರದ ಟೀಸರ್ ಬಿಡುಗಡೆ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ. ಇವರ ಸಹೋದರ ಪುನೀತ್ ರಾಜ್ ಕುಮಾರ್ ಟೀಸರ್ ಬಿಡುಗಡೆ ಮಾಡಲಿದ್ದಾರೆ.

ಚಿತ್ರದ ಬಗ್ಗೆ

‘ಹಜ್’, ‘ರಿಸರ್ವೇಶನ್’, ‘ಗೆರೆಗಳು’ ಸೇರಿದಂತೆ ಮುಂತಾದ ಗಂಭೀರ ಕಥಾವಸ್ತುವಿನ ಚಿತ್ರಗಳ ಮೂಲಕ ಗುರುತಿಸಿಕೊಂಡಿರುವ ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ನಿಖಿಲ್ ಮಂಜು ‘ಅಮ್ಮನ ಮನೆ’ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ.

ದಯಮಾಡಿ ಬನ್ನಿ

“ಬಹಳ ವರ್ಷಗಳ ನಂತರ ನಾನು ಮತ್ತೆ ‘ಅಮ್ಮನ ಮನೆ’ ಮೂಲಕ ಬೆಳ್ಳಿತೆರೆಗೆ ವಾಪಸ್ಸಾಗಿದ್ದೇನೆ. ಈಗ ಚಿತ್ರದ ಟೀಸರ್ ಬಿಡುಗಡೆ ಸಮಾರಂಭ ನಡೆಯುತ್ತಿದ್ದು, ತಾವುಗಳೆಲ್ಲವೂ ಹೆಚ್ಚಿನ ಸಂಖ್ಯೆಯಲ್ಲಿ ಬಂದು ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಚಿತ್ರತಂಡದ ಪರವಾಗಿ ಈ ಮೂಲಕ ವಿನಂತಿಸಿಕೊಳ್ಳುತ್ತಿದ್ದೇನೆ” ಎಂದು ರಾಘವೇಂದ್ರ ರಾಜ್ ಕುಮಾರ್ ವಿನಂತಿಸಿಕೊಂಡಿದ್ದಾರೆ.

#raghavendrabalakninews #ammanamane, #filmnews, #kannadasuddigalu

Tags