ಸುದ್ದಿಗಳು

ಕೊಪ್ಪಳದ ಕನಕ ದುರ್ಗ ದೇವಸ್ಥಾನಕ್ಕೆ ಭೇಟಿ ನೀಡಿದ ರಾಘಣ್ಣ

ಬೆಂಗಳೂರು, ಫೆ.11:

ನಟ ರಾಘವೇಂದ್ರ ರಾಜ್ ಕುಮಾರ್ ಕೊಪ್ಪಳದ ಕನಕ ದುರ್ಗ ದೇವಸ್ಥಾನಕ್ಕೆ ಇಂದು ಭೇಟಿ ನೀಡಿ ದೇವರ ದರ್ಶನ ಪಡೆದಿದ್ದಾರೆ. ಇವರ ಅಭಿನಯದ ಸಿನಿಮಾ ‘ಅಮ್ಮನೆ ಮನೆ’ ಪ್ರೊಮೋಷನ್‌ ಗೆ ತೆರೆಳಿದ್ದ ರಾಘವೇಂದ್ರ ರಾಜ್‌ಕುಮಾರ್ ಇದೀಗ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದು ದೇವರ ಕೃಪೆಗೆ ಪಾತ್ರರಾಗಿದ್ದಾರೆ.

ಕನಕದುರ್ಗ ದೇವಸ್ಥಾನಕ್ಕೆ ಭೇಟಿ ನೀಡಿದ ರಾಘಣ್ಣ

ಸದ್ಯ ‘ಅಮ್ಮನ ಮನೆ’ ಸಿನಿಮಾ ಬಿಡುಗಡೆಗೆ ರೆಡಿಯಾಗಿದೆ. ಹೊರ ದೇಶಗಳಲ್ಲಿ ಈ ಸಿನಿಮಾ ಪ್ರೀಮಿಯರ್ ಶೋ ಕಾಣಲಿದೆ. ಇನ್ನು ಮಾರ್ಚ್ ಒಂದರಂದು ಈ ಸಿನಿಮಾ ರಾಜ್ಯಾದ್ಯಂತ ತೆರೆ ಕಾಣೋದಿಕ್ಕೆ ರೆಡಿಯಾಗಿದೆ. ಇದರ ಬೆನ್ನಲ್ಲೇ ಸಿನಿಮಾ ಪ್ರಮೋಷನ್ ಕಾರ್ಯ ಕೂಡ ಭರ್ಜರಿಯಾಗಿ ನಡೆಯುತ್ತಿದೆ. ಈ ಬೆನ್ನಲ್ಲೇ ರಾಘವೇಂದ್ರ ರಾಜ್‌ಕುಮಾರ್ ಅಭಿಮಾನಿಗಳನ್ನು ಭೇಟಿ ಮಾಡುವುದರ ಜೊತೆಗೆ ದೇವರ ದರ್ಶನ ಪಡೆಯುತ್ತಿದ್ದಾರೆ.

ಸುಮಾರು ವರ್ಷಗಳ ನಂತರ ಮತ್ತೆ ಸಿನಿಮಾಗೆ

ಬಳ್ಳಾರಿಗೂ ಹಾಗೂ ಅಣ್ಣಾವ್ರ ಕುಟುಂಬಕ್ಕೂ ನಂಟಿದೆ ಅನ್ನೋದು ಹಲವರ ಮಾತು. ಬಹು ಕಾಲದಿಂದಲೂ ಕೂಡ ಅಣ್ಣಾವ್ರ ಕುಟುಂಬದ ಸಿನಿಮಾಗಳು ಮೊದಲು ಇಲ್ಲಿಂದಲೇ ಪ್ರಾರಂಭವಾಗಿವೆ. ಹಾಗಾಗಿ ರಾಘಣ್ಣ ಕೂಡ ಮೊದಲು ಇಲ್ಲಿಂದಲೇ ಪ್ರಮೋಷನ್ ಪ್ರಾರಂಭ ಮಾಡಿದ್ದಾರೆ. ಸುಮಾರು ವರ್ಷಗಳ ನಂತರ ರಾಘಣ್ಣ ಮತ್ತೆ ಬಣ್ಣ ಹಚ್ಚಿರುವುದು ಈ ಸಿನಿಮಾದಲ್ಲಿ. ವಿಭಿನ್ನ ಪಾತ್ರದ ಮೂಲಕ ಮತ್ತೆ ಅಭಿಮಾನಿಗಳ ಮುಂದೆ ರಾಘವೇಂದ್ರ ರಾಜ್‌ಕುಮಾರ್ ರಂಜಿಸೋದಕ್ಕೆ ರೆಡಿಯಾಗಿದ್ದಾರೆ.

‘ಪೊಗರು’ ಬಳಗಕ್ಕೆ ರಾಘಣ್ಣ ಎಂಟ್ರಿ..!!!

#raghavendrarajkumar #ammanamane #raghavendrarajkumarmovies #balkaninews #ammanamanekannadamovie

Tags