ಸುದ್ದಿಗಳು

ಕುಕ್ಕೆ ಹಾಗೂ ಧರ್ಮಸ್ಥಳದಲ್ಲಿ ನಟ ರಾಘವೇಂದ್ರ ರಾಜ್ಕುಮಾರ್ ಕುಟುಂಬ

ಬೆಂಗಳೂರು, ಜ.17:

ಅಮ್ಮನ ಮನೆ ಸಿನಿಮಾದಲ್ಲಿ ನಟಿಸುತ್ತಿರುವ ರಾಘವೇಂದ್ರ ರಾಜ್‌ಕುಮಾರ್ ಇದೀಗ ಮತ್ತೆ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈ ಬ್ಯುಸಿ ನಡುವೆಯೂ ಈ ನಟ ಹಾಗೂ ಇವರ ಪತ್ನಿ ಮಂಗಳ ಕುಕ್ಕೆ ಸುಬ್ರಹ್ಮಣ್ಯ ಹಾಗೂ ಧರ್ಮಸ್ಥಳಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದಿದ್ದಾರೆ.

ಧರ್ಮಾಧಿಕಾರಿಗಳನ್ನು ಭೇಟಿ ಮಾಡಿದ ರಾಘಣ್ಣ

ಇನ್ನು ಇದೇ ವೇಳೆ ಧರ್ಮಸ್ಥಳದ ಧರ್ಮಾಧಿಕಾರಿಗಳನ್ನು ಭೇಟಿ ಮಾಡಿದ್ದಾರೆ ಈ ದಂಪತಿ. ಅಷ್ಟೆ ಅಲ್ಲ ವೀರೇಂದ್ರ ಹೆಗಡ್ಡೆಯವರಿಗೆ ಶಲ್ಯ ಪಂಚೆ ಹಾಗೂ ಇನ್ನಿತರ ವಸ್ತುಗಳನ್ನು ಕೊಟ್ಟು ಆಶೀರ್ವಾದ ಪಡೆದುಕೊಂಡಿದ್ದಾರೆ. ಇನ್ನು ಮಂಜುನಾಥ ಹಾಗೂ ಸುಬ್ರಹ್ಮಣ್ಯ ದೇವರ ದರ್ಶನ ಪಡೆದಿದ್ದಾರೆ.

ಸೆಲ್ಫಿ ವಿಡಿಯೋ ಮೂಲಕ ಸಂದೇಶ

ಇನ್ನು ಇದೇ ವೇಳೆ ಸೆಲ್ಫಿ ವಿಡಿಯೋ ಮಾಡಿರುವ ರಾಘಣ್ಣ ಈ ಕ್ಷೇತ್ರಗಳಿಗೆ ಏನಕ್ಕೆ ಹೋಗಿದ್ದು ಅನ್ನೋದನ್ನು ಹೇಳಿದ್ದಾರೆ. ನಾನು ಇವತ್ತು ಮಂಜುನಾಥ ಸ್ವಾಮಿಗೆ ಹಾಗೂ ಅಭಿಮಾನಿ ದೇವರುಗಳಿಗೆ ಧನ್ಯವಾದ ಹೇಳಲು ಮತ್ತು ಕೃತಜ್ಞತೆ ಸಲ್ಲಿಸಲು ಇಲ್ಲಿಗೆ ಬಂದಿದ್ದೇನೆ. ಯಾಕೆಂದರೆ ನನ್ನ ಮಗನ ಸಿನಿಮಾ ‘ಅನಂತು ವರ್ಸಸ್ ನುಸ್ರತ್’ ಸಿನಿಮಾವನ್ನು ಯಶಸ್ವಿ ಮಾಡಿದ್ದೀರಾ ಹಾಗೂ ನನ್ನ ಕಿರಿಯ ಮಗನ ಡಾನ್ಸ್ ನೋಡಿ ಮೆಚ್ಚಿದ್ದಿರಾ, ನಾನು ಮತ್ತೆ ಬಣ್ಣ ಹಚ್ಚೀದ್ದೇನೆ ತುಂಬಾ ಖುಷಿಯಾಗುತ್ತಿದೆ. ಅದರ ಸಲುವಾಗಿ ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡಿ ಆಶೀರ್ವಾದ ಪಡೆದುಕೊಂಡಿದ್ದೇವೆ. ನಿಮ್ಮ ಆಶೀರ್ವಾದ ಸದಾ ಕಾಲ ನಮ್ಮ ಕುಟುಂಬದ ಮೇಲಿರಲಿ ಎಂದು ಅಭಿಮಾನಿಗಳಿಗೆ ಕೃತಜ್ಞತೆಗಳನ್ನು ತಿಳಿಸಿದ್ದಾರೆ.

#raghavendrarajkumar #vinayrajkumar #yuvarajkumar #kannadamovies #balkaninews

Tags