ಸುದ್ದಿಗಳು

ರಾಘವ ಲಾರೆನ್ಸ್ ಕೊಟ್ಟ ಸವಾಲನ್ನು ಸ್ವೀಕರಿಸಿದ ಶ್ರೀರೆಡ್ಡಿ!!

ಆಂಧ್ರ,ಜು.31: ಸಿನೆಮಾ ರಂಗದಲ್ಲಿ ಇತ್ತೀಚೆಗೆ ಹಲವು ತಿಂಗಳಿನಿಂದ ಕಾಸ್ಟಿಂಗ್ ಕೌಚ್ ವಿಷಯ ಸಾಕಷ್ಟು ವಿವಾದಗಳನ್ನು ಹುಟ್ಟು ಹಾಕಿದೆ. ಕಾಸ್ಟಿಂಗ್ ಕೌಚ್ ವಿಚಾರ ಕಾಲಿವುಡ್ ಮಂದಿಯನ್ನು ಬೆಚ್ಚಿ ಬೀಳಿಸುವಂತೆ ಮಾಡಿದೆ. ಕಾಸ್ಟಿಂಗ್ ಕೌಚ್ ಕುರಿತು ಹಲವು ನಟರು. ನಿರ್ದೇಶಕರು ಹಾಗೂ ನಿರ್ಮಾಪಕರು ಬೆಚ್ಚಿ ಬಿದ್ದಿದ್ದಾರೆ. ಕಾಲಿವುಡ್ ನಟಿ ಶ್ರೀರೆಡ್ಡಿ ಅವರು ಬೀದಿ ಬದಿಯಲ್ಲಿ ಮಾಡಿದ ಹಾದಿ ಬೀದಿ ರಂಪದ ಬಗ್ಗೆ ಗೊತ್ತೇ ಇದೆ. ಇದುವರೆಗೂ ಸಾಕಷ್ಟು ಬಾರಿ ಶ್ರೀರೆಡ್ಡಿ ಅವರು ಕಾಸ್ಟಿಂಗ್ ಕೌಚ್ ಕುರಿತಾದ ಆರೋಪ ಮಾಡಿದ್ದರು.

ಇತ್ತೀಚೆಗೆ ಶ್ರೀರೆಡ್ಡಿ ನಟ, ನಿರ್ದೇಶಕ, ಕೋರಿಯೊಗ್ರಾಫರ್​ ಹಾಗೂ ನಿರ್ಮಾಪಕ ರಾಘವ ಲಾರೆನ್ಸ್ ಅವರ ಮೇಲೂ ಆರೋಪ ಮಾಡಿದ್ದರು. ಇತ್ತೀಚಿಗೆ ಮಾಧ್ಯಮಗೋಷ್ಠಿಯಲ್ಲಿ ಶ್ರೀರೆಡ್ಡಿಗೆ ಸವಾಲೊಂದನ್ನು ಹಾಕಿದ್ದರು. ನೀವು ನಿಜವಾಗಿಯೂ ನಟಿಯಾಗಿದ್ದರೆ, ನಿಮ್ಮಲ್ಲಿ  ಅಭಿನಯಾ ಕೌಶಲ್ಯವಿದ್ದರೆ, ಅದನ್ನು ಸ್ವೀಕರಿಸಿ ಸಾಬೀತು ಪಡಿಸಿ. ನಿಮ್ಮ ಪ್ರತಿಭೆ ಮೂಲಕ ನಮ್ಮನ್ನು  ಮೆಚ್ಚುಗೆ ಪಡಿಸಿದರೆ ನನ್ನ ಮುಂದಿನ ಚಿತ್ರದಲ್ಲಿ ನಿಮಗೆ ಖಂಡಿತವಾಗಿಯೂ ಅವಕಾಶ ನೀಡುತ್ತೇನೆ ಎಂದಿದ್ದರು.

 

ಇದಾದ ನಂತರ ನಿರ್ದೇಶಕ ರಾಘವ ಲಾರೆನ್ಸ್ ಸವಾಲನ್ನು ಟಾಲಿವುಡ್​ ನಟಿ ಶ್ರೀರೆಡ್ಡಿ ಸ್ವೀಕರಿಸಿದ್ದು, ತಮ್ಮ ಫೇಸ್​ಬುಕ್​ನಲ್ಲಿ ಹಾಟ್​ ವಿಡಿಯೋವೊಂದನ್ನು ಶೇರ್​​ ಮಾಡಿದ್ದಾರೆ. ಇದರ ಜತೆಗೆ ‘ಇದು ನನ್ನ ಸಾಮಾನ್ಯ ಪ್ರತಿಭೆ, ದಯವಿಟ್ಟು ನೋಡಿ. ನಿಮಗಾಗಿಯೇ ಇದನ್ನು ಮಾಡಿದ್ದು’ ಎಂದು ಬರೆದುಕೊಂಡಿದ್ದಾರೆ.

 

Tags

Related Articles

Leave a Reply

Your email address will not be published. Required fields are marked *