ಸುದ್ದಿಗಳು

ದಾಂಪತ್ಯ ಜೀವನಕ್ಕೆ ಎಳ್ಳು ನೀರು ಬಿಟ್ಟ ರಘು ದೀಕ್ಷಿತ್ ಹಾಗೂ ಮಯೂರಿ

ಸಂಗೀತ ಲೋಕದಲ್ಲಿ ಪ್ರಸಿದ್ದಿಯಾಗಿದ್ದ ರಘು ದೀಕ್ಷಿತ್

ಬೆಂಗಳೂರು, ಅ.11:  ಸಂಗೀತ ನಿರ್ದೇಶಕ ಹಾಗೂ ಗಾಯಕನಾಗಿರುವ ರಘು ದೀಕ್ಷಿತ್ ಹಾಗೂ ಮಯೂರಿ ತಮ್ಮ ದಾಂಪತ್ಯ ಜೀವನಕ್ಕೆ ಎಳ್ಳು ನೀರು ಬಿಡಲು ನಿರ್ಧಾರ ಮಾಡಿದ್ದಾರೆ.  ರಘು ದೀಕ್ಷಿತ್ ಸಂಗೀತ ಲೋಕದಲ್ಲಿ ಗುರುತಿಸಿಕೊಂಡಿದ್ದರೆ, ಪತ್ನಿ ಮಯೂರಿ ನಾಟ್ಯ ಲೋಕದಲ್ಲಿ ಗುರ್ತಿಸಿಕೊಂಡಿದ್ದರು. ಅಂತಾರಾಷ್ಟ್ರೀಯ ಮಟ್ಟದಲ್ಲಿ ನೃತ್ಯ ನಿರ್ದೇಶಕಿಯಾಗಿ ಹೆಸರು ಹಾಗೂ ಖ್ಯಾತಿಯನ್ನು ಪಡೆದುಕೊಂಡಿದ್ದಾರೆ .

ವಿಚ್ಛೇದನ ಪಡೆಯಲು ಮುಂದಾದ ದಂಪತಿ

ರಘು ದೀಕ್ಷಿತ್ ಹಾಗೂ ಮಯೂರಿ ಅವರ ದಂಪತಿಯ ಜೀವನದಲ್ಲಿ ಎಲ್ಲವೂ ಸರಿಯಿಲ್ಲ ಎಂಬುದರ ಬಗ್ಗೆ ಸ್ವತಃ ರಘು ದೀಕ್ಷಿತ್ ಅವರೇ ತಮ್ಮ ಟ್ವಿಟ್ಟರ್ ಮೂಲಕ ತಿಳಿಸಿದ್ದಾರೆ. ಲೈಂಗಿಕ ಕಿರುಕುಳ ಆರೋಪ ಬಂದ ನಂತರವೇ ದೀಕ್ಷಿತ್ ನಾನು ಒಳ್ಳೆಯ ಪತಿಯಲ್ಲ ನನ್ನ ಹೆಂಡತಿ ತುಂಬಾ ಒಳ್ಳೆಯವಳು ಅದ್ಭುತವಾದ ಮನಸ್ಸನ್ನು ಹೊಂದಿರುವಳೂ. ನಾವು ಈಗಾಗಲೇ ಮೂರು ವರ್ಷಗಳಿಂದ ದೂರ ಇದ್ದೇವೆ .ನಮ್ಮ ವಿಚ್ಛೇದನ ಪ್ರಕ್ರಿಯೆ ಜಾರಿಯಲ್ಲಿದ್ದು, ಆದಷ್ಟು ಬೇಗ ನಾವಿಬ್ಬರೂ ವಿಚ್ಛೇದನ ಪಡೆಯತ್ತಿದ್ದೇವೆ ಎಂಬುದನ್ನು ತಿಳಿಸಿದ್ದಾರೆ .ಪ್ರೀತಿಸಿ ಮದುವೆಯಾಗಿದ್ದ ಜೋಡಿ

ನೃತ್ಯ ನಿರ್ದೇಶಕಿ ಮಯೂರಿ ಹಾಗೂ ಸಂಗೀತ ನಿರ್ದೇಶಕ ರಘು ದೀಕ್ಷಿತ್ ಇಬ್ಬರು ಪರಸ್ಪರ ಪ್ರೀತಿ ಮಾಡಿ ಮದುವೆಯಾಗಿದ್ದರೂ ಇಬ್ಬರ ಕಾರ್ಯಕ್ಷೇತ್ರವು ಒಂದೇ ಆಗಿರುವುದರಿಂದ ಮುಂದಿನ ದಿನಗಳಲ್ಲಿ ಜೀವನ ಚೆನ್ನಾಗಿರುತ್ತದೆ ಎನ್ನುವ ಉದ್ದೇಶದಿಂದಲೇ ಇಬ್ಬರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು ಆದರೆ ಕೆಲವು ವರ್ಷಗಳಿಂದ ಇಬ್ಬರು ಪರಸ್ಪರ ಹೊಂದಾಣಿಕೆ ಕಾಣದ ಹಿನ್ನೆಲೆಯಲ್ಲಿ ಈಗ ವಿಚ್ಛೇದನ ಪಡೆಯಲು ಮುಂದಾಗಿದ್ದಾರೆ

 

Tags