ಸುದ್ದಿಗಳು

‘ಮೈಸೂರು ಮಸಾಲಾ’ಗಾಗಿ ರಘು ದೀಕ್ಷಿತ್ ಇಂಪಾದ ಗಾನ

ಅಜಯ್ ಸರ್ಪೇಶ್ವರ್ ನಿರ್ದೇಶನದ ‘ಮೈಸೂರ ಮಸಾಲಾ’ ಚಿತ್ರವು ಒಂದಲ್ಲಾ ಒಂದು ಕಾರಣಗಳಿಂದ ಸಾಕಷ್ಟು ಗಮನ ಸೆಳೆಯುತ್ತಿದೆ. ವಿಶೇಷವೆಂದರೆ, ಈ ಚಿತ್ರದ ಒಂದು ಹಾಡಿಗೆ ರಘು ದೀಕ್ಷಿತ್ ಧ್ವನಿಯಾಗಲಿದ್ದಾರೆ.

‘ಇದೊಂದು ವಿಷಣ್ಣತೆಯ, ಕಾಡುವ ಮಧುರ ಗೀತೆಯಾಗಿದ್ದು, ಪ್ರೀತಿಪಾತ್ರರೊಂದಿಗಿನ ಭಾಂದವ್ಯದ ಆಳವನ್ನು ಪರಿಶೋಧಿಸುತ್ತದೆ. ಇಲ್ಲಿ ನಾಯಕ ತನ್ನ ಕಳೆದು ಹೋದ ಪ್ರೀತಿಯನ್ನು ಕಂಡುಕೊಳ್ಳುವ ಅನ್ವೇಷಣೆಯಲ್ಲಿ ನಾಯಕನ ಸಂಕಟವನ್ನು ಎತ್ತಿ ತೋರಿಸುವ ಹಾಡು ಮೂಡಿ ಬರುತ್ತದೆ. ಹೀಗಾಗಿ ಈ ಹಾಡನ್ನು ಹಾಡಲೆಂದೇ ರಘು ದೀಕ್ಷಿತ್ ರನ್ನು ಸಂಪರ್ಕಿಸಿದೆವು’ ಎನ್ನುತ್ತಾರೆ ನಿರ್ದೇಶಕರು.

‘ಈ ಹಾಡು ಅತ್ಯುತ್ತಮವಾಗಿದೆ. ಖಂಡಿತಾ ಎಲ್ಲರಿಗೂ ಇಷ್ಟವಾಗುತ್ತದೆ’ ಎನ್ನುವ ಚಿತ್ರತಂಡದವರು, ಈ ಹಾಡು ಒಟ್ಟು 5 ನಿಮಿಷದ್ದಾಗಿದ್ದು, ಸೆ.02 ರ ಗಣೇಶ್ ಚತುರ್ಥಿ ಸಂದರ್ಭದಲ್ಲಿ ಬಿಡುಗಡೆಯಾಗಲಿದೆ’ ಎಂದು ಚಿತ್ರತಂಡ ಹೇಳಿದ್ದಾರೆ.

ಈ ಚಿತ್ರದಲ್ಲಿ ಐಪಿಎಸ್ ಆಫೀಸರ್ ಪಾತ್ರದಲ್ಲಿ ಸಂಯುಕ್ತಾ ಹೊರನಾಡು ನಟಿಸಿದ್ದು, ಉಳಿದಂತೆ ಕಿರಣ್ ಶ್ರೀನಿವಾಸ್, ಶರ್ಮಿಳಾ ಮಾಂಡ್ರೆ, ಸುಧಾ ಬೆಳವಾಡಿ, ಮಂದೀಪ್ ರಾಯ್, ನೀನಾಸಮ್ ಅಶ್ವಥ್ ಸೇರಿದಂತೆ ಹಲವರು ನಟಿಸಿದ್ದಾರೆ.

“ಸೈರಾ” ಚಿತ್ರತಂಡದಿಂದ ಹೊರಬಿತ್ತು ಸಿಹಿ ಸುದ್ದಿ…!!!

#raghudixit #mysoremasala #mysoremasalamovie  #kannadafilm, #kannadamovie,

Tags