ಸುದ್ದಿಗಳು

‘ಇನ್ಸ್ ಪೆಕ್ಟರ್ ವಿಕ್ರಂ’ ಗೆ ಸಿಕ್ಕ ಖಳ ನಾಯಕ ರಘು!!

ಬೆಂಗಳೂರು,ಫೆ.11:

ಜಾಕೋಬ್ ವರ್ಘೀಸ್ ಅವರ ‘ಸವಾರಿ’ ಚಿತ್ರದ ಮೂಲಕ ಮಾಡೆಲ್ ನಿಂದ ಪರಿಪೂರ್ಣ  ನಾಯಕನಾಗಿ ತೆರೆ ಮೇಲೆ ಮಿಂಚಿದ್ದ ರಘು ಮುಖರ್ಜಿ ಬಹುದೊಡ್ಡ ಬ್ರೇಕ್ ನಂತರ ಮತ್ತೆ ತೆರೆ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ..

 ಶ್ರೀ ನರಸಿಂಹ ನಿರ್ದೇಶನದ ಇನ್ಸ್ ಪೆಕ್ಟರ್ ವಿಕ್ರಂ!!

ಹೌದು, ಶ್ರೀ ನರಸಿಂಹ ನಿರ್ದೇಶನದ, ವಿಖ್ಯಾತ್ ಪ್ರೊಡಕ್ಷನ್ಸ್ ನಲ್ಲಿ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಅಭಿನಯದ “ಇನ್ಸ್ ಪೆಕ್ಟರ್ ವಿಕ್ರಂ” ಚಿತ್ರ ಈಗಾಗಲೇ ಸಿಕ್ಕಾಪಟ್ಟೆ ಸೌಂಡ್ ಮಾಡುತ್ತಿದೆ..  2019 ರ ಬಹುದೊಡ್ಡ ಬಜೆಟ್ ಚಿತ್ರವೂ ಹೌದು.. ಪ್ರಜ್ವಲ್ ದೇವರಾಜ್ ಕೂಡ ದೊಡ್ಡ ಬ್ರೇಕ್ ಗಾಗಿ ಕಾಯುತ್ತಿದ್ದು ಈ ಚಿತ್ರ ಪ್ರಜ್ವಲ್ ಕೈ ಹಿಡಿಯಲಿದೆ ಎಂದು ಗಾಂಧೀ ನಗರ ಮಾತನಾಡಿಕೊಳ್ಳುತ್ತಿದೆ…

Image result for prajwal devraj inspector vikram

 

ಮೊದಲ ಬಾರಿಗೆ ಖಳನಾಯಕನಾದ ರಘು..

ಈಗಿರುವ ಬ್ರೇಕಿಂಗ್ ಸುದ್ದಿ ಏನೆಂದರೆ, ಈ ಚಿತ್ರದಲ್ಲಿ ಇದೇ ಮೊದಲ ಬಾರಿಗೆ ರಘು ಮುಖರ್ಜಿ ಅವರು ವಿಲನ್ ಆಗಿ ಮಿಂಚಲಿದ್ದಾರೆ.. ವಿಖ್ಯಾತ್ ಪ್ರೊಡಕ್ಷನ್ ಅಡಿಯಲ್ಲಿ ತಯಾರಿಸಲ್ಪಟ್ಟ ಈ ಚಿತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ರಘು ಅವರು ತಮ್ಮ ಪಾತ್ರಕ್ಕಾಗಿ ಸರಿಹೊಂದುವಂತೆ ಮೀಸೆ ಕೂಡ ಬೆಳೆಸಿದ್ದಾರಂತೆ..

ರೀತಿಯ ಪಾತ್ರವನ್ನು ನಾನು ನಿರೀಕ್ಷಿಸಲಿಲ್ಲ”

“ಈ ರೀತಿಯ ಪಾತ್ರವನ್ನು ನಾನು ನಿರೀಕ್ಷಿಸಲಿಲ್ಲ. ವಿಲನ್ ಪಾತ್ರಕ್ಕಾಗಿ ನನ್ನನ್ನು ಯಾರದರೂ ಸಂಪರ್ಕಿಸಿಬಹುದು ಎಂದು ನಾನು ಎಂದೂ ಅಂದುಕೊಂಡಿರಲಿಲ್ಲ.” ಇನ್ಸ್ಪೆಕ್ಟರ್ ವಿಕ್ರಂ ಚಿತ್ರದಲ್ಲಿ ನನ್ನ ಪಾತ್ರವನ್ನು ನೀವು ವಿಲನ್ ಎಂದು ಕರೆಯಲು ಸಾಧ್ಯವಿಲ್ಲ. . ಇತರ ಪಾತ್ರವನ್ನು ಸವಾಲು ಮಾಡುವ ಪ್ರಬಲ ಪಾತ್ರಗಳಲ್ಲಿ ಇದೂ ಒಂದು.  ನಾನು ಇಲ್ಲಿ ಖಳನಾಯಕನಂತೆ ಕಾಣುವುದಿಲ್ಲ, ಈ ಚಿತ್ರದಲ್ಲಿ ನಾನು ತುಂಬಾ ಡಿಫರೆಂಟ್ ಆಗಿ ಕಾಣಿಸುತ್ತೇನೆ..” ಎಂದು ರಘು ಹೇಳಿದರು..

Related image

ಚಿತ್ರತಂಡ ಒಳ್ಳೆಯಕೆಲಸ ಮಾಡಿದೆ

‘ಇನ್ಸ್ ಪೆಕ್ಟರ್ ವಿಕ್ರಂ’ ಚಿತ್ರ ನಿರ್ಮಾಪಕರು ರಘು ಅವರನ್ನು  ವಿಭಿನ್ನ ಶೇಡ್ ನಲ್ಲಿ ತೋರಿಸಲು ಪ್ರಯತ್ನಿಸುತ್ತಿದ್ದಾರೆ..  ಚಿತ್ರತಂಡ “ಒಳ್ಳೆಯ” ಕೆಲಸ ಮಾಡಿದೆ. “ವಿಖ್ಯಾತ್  ಅವರು ನಿರ್ಮಾಪಕರಾಗಿದ್ದರೂ, ಅವರು ನಿರ್ದೇಶನವನ್ನು ಅರ್ಥಮಾಡಿಕೊಳ್ಳುತ್ತಾರೆ.. ಇಲ್ಲದಿದ್ದರೆ, ಈ ರೋಲ್ ಮಾಡಲು ನನಗೆ ಸಾಧ್ಯವೋ ಎಂಬ  ಸಂದೇಹವಿತ್ತು “ಎಂದು ರಘು ಅವರು ಹೇಳುತ್ತಾರೆ.

2019ರಲ್ಲಿ ಬಿಡುಗಡೆ

ರಘು ಅವರ ಕೊನೆಯ ಚಿತ್ರ ‘ದಯವಿಟ್ಟು ಗಮನಿಸಿ’, ಮತ್ತು ಇನ್ಸ್ ಪೆಕ್ಟರ್ ವಿಕ್ರಂ ಹೊರತುಪಡಿಸಿ, 2019 ಕ್ಕೆ  ರಘು ಕೈಯಲ್ಲಿ ಒಂದೆರಡು ಪ್ರಾಜೆಕ್ಟ್ ಗಳಿವೆ. ‘ಇನ್ಸ್ ಪೆಕ್ಟರ್ ವಿಕ್ರಂ’ ಚಿತ್ರದಲ್ಲಿ  ಪ್ರಜ್ವಲ್ ದೇವರಾಜ್ ಪೋಲಿಸ್ ಗೆಟಪ್ ನಲ್ಲಿ ಮಿಂಚಲಿದ್ದು, ಇವರಿಗೆ ಭಾವನಾ ಮೆನನ್ ನಾಯಕಿಯಾಗಿ ಅಭಿನಯಿಸಲಿದ್ದಾರೆ.. ಇನ್ನು ಈ ಚಿತ್ರವು 2019ರಲ್ಲಿ ಬಿಡುಗಡೆಯಾಗಲಿದ್ದು, ಬಿಡುಗಡೆ ದಿನಾಂಕ ಮಾತ್ರ ನಿಗಧಿಯಾಗಿಲ್ಲ …

ಭತ್ತದ ಪೈರಿನಲ್ಲಿ ರೆಬೆಲ್ ಸ್ಟಾರ್ ಅಂಬರೀಶ್ ಅಭಿಮಾನ..!!!

#balkaninews #inspectorvikram #sandalwood #prajwaldevraj #srinarsimha #arvikyath #bhavanamenon

Tags