ಸುದ್ದಿಗಳು

ಮೂರೇ ನಿಮಿಷದಲ್ಲಿ ಮೂರು ರಾಗಿ ಮುದ್ದೆ ಗುಳುಂ..!

ಮೈಸೂರು ದಸರಾ ವಿಶೇಷ

ಮೈಸೂರು, ಅ.13: ಜಗತ್‍ ಪ್ರಸಿದ್ಧ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ನಿಮಿತ್ತರಾಗಿ ಮುದ್ದೆ, ನಾಟಿ ಕೋಳಿ ತಿನ್ನುವ ಸ್ಪರ್ಧೆ ಹಮ್ಮಿಕೊಳ್ಳಲಾಗಿತ್ತು. ಜನರು ಉತ್ಸಾಹದಿಂದ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು. ಹಿರಿಯರನ್ನೇ ಹಿಮ್ಮೆಟ್ಟಿಸಿ ಯುವಕನೊಬ್ಬ ಬೇಗನೆ ತಿಂದು ವಿಜೇತನಾಗಿದ್ದಾನೆ.

ಮೈಸೂರಿನಲ್ಲಿನ ಸ್ಕೌಟ್ಸ್ ಅಂಡ್ ಗೈಡ್ಸ್ ಮೈದಾನದಲ್ಲಿ ನಡೆದ ರಾಗಿ ಮುದ್ದೆ ತಿನ್ನುವ ಸ್ಪರ್ಧೆಯಲ್ಲಿ ಪ್ರತಿಯೊಬ್ಬ ಸ್ಪರ್ಧಿಗೂ ಮೂರು ರಾಗಿ ಮುದ್ದೆ ಹಾಗೂ ಮೂರು ಮಾಂಸದ ತುಂಡುಗಳನ್ನು ನೀಡಲಾಗಿತ್ತು.ರಾಗಿ ಮುದ್ದೆ ತಿನ್ನುವ ಸ್ಪರ್ಧೆಯಲ್ಲಿ ಮೊದಲ ಸ್ಥಾನ ಪಡೆದ ಕೌಶಿಕ್

ಇದರಲ್ಲಿ ಶ್ರೀರಂಗಪಟ್ಟಣದ ಕೌಶಿಕ್ ಮೂರೇ ನಿಮಿಷದಲ್ಲಿ ಮೂರು ರಾಗಿ ಮುದ್ದೆ ನಾಟಿ ಕೋಳಿ ತಿನ್ನುವ ಮೂಲಕ ಮೊದಲ ಸ್ಥಾನ ಪಡೆದಿದ್ದಾರೆ. ಇನ್ನು ಮೂರುವರೆ ನಿಮಿಷದಲ್ಲಿ ತಿನ್ನುವ ಮೂಲಕ ಮೈಸೂರಿನ ಶಿವಾನಂದ್ ಎರಡನೇ ಸ್ಥಾನ ಪಡೆದಿದ್ದಾರೆ

ಜನನಿ ಟ್ರಸ್ಟ್ನಿಂದ ನಾಡಹಬ್ಬ ದಸರಾ ಮಹೋತ್ಸವ ಹಾಗೂ 804ನೇ ಜಂಬೂಸವಾರಿ ಅಂಗವಾಗಿ ಮನೆಗಳಲ್ಲಿ ಬೊಂಬೆ ಪ್ರದರ್ಶಿಸುವವರು. ಅ.17ರೊಳಗೆ ಮನೆ ವಿಳಾಸ, ದೂರವಾಣಿ  ಸಂಖ್ಯೆ ನೋಂದಾಯಿಸಿಕೊಳ್ಳುವುದು. ಅ.15ರೊಳಗೆ ಶ್ರೀ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ ಬಹುಮಾನ ಮತ್ತು ಪ್ರಶಸ್ತಿ ನೀಡಲಾಗುವುದು. ನಾಗರಿಕರು ಈ ಸ್ಪರ್ಧೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಟ್ರಸ್ಟ್‍ ನ ಅಧ್ಯಕ್ಷ ಡಾ. ಎಂ.ಕೆ. ಅಶೋಕ್ ತಿಳಿಸಿದ್ದಾರೆ.

Tags