ಸುದ್ದಿಗಳು

ಮಹಿಳಾ ಪ್ರಧಾನ ಸಿನಿಮಾ ನಿರ್ಮಿಸುತ್ತಿರುವ ಪುನೀತ್ ರಾಜ್ ಕುಮಾರ್

ಪಿ.ಆರ್.ಕೆ ಸಂಸ್ಥೆಯ ಸಿನಿಮಾ

ಬೆಂಗಳೂರು,ಜ.12: ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಪತ್ನಿ ರಾಗಿಣಿ ಚಂದ್ರನ್ ಅಭಿನಯದಲ್ಲಿ ಶುರುವಾಗಿದ್ದ ‘ವಿಜಯದಶಮಿ’ ಸಿನಿಮಾ ಶುರುವಾಗಿ ನಿಂತು ಬಿಟ್ಟಿತ್ತು. ಇನ್ನೇನು ಸಿನಿಮಾ ಸಂಫೂರ್ಣವಾಗಿ ನಿಂತೇ ಹೋಯಿತು ಎಂಬ ಮಾತುಗಳು ಕೇಳಿ ಬರುತ್ತಿರುವಾಗಲೇ ಈ ಚಿತ್ರವನ್ನು ಪುನೀತ್ ರಾಜ್ ಕುಮಾರ್ ಟೇಕಾಫ್ ಮಾಡಿದ್ದಾರೆ.

ಚಿತ್ರದ ಬಗ್ಗೆ

‘ವಿಜಯದಶಮಿ’ ಈ ಚಿತ್ರವನ್ನು ರಘು ಸಮರ್ಥ್ ನಿರ್ದೇಶನ ಮಾಡುತ್ತಿದ್ದು, ರಾಗಿಣಿ ಚಂದ್ರನ್ ಮುಖ್ಯ ಭೂಮಿಕೆ ನಿಭಾಯಿಸುತ್ತಿದ್ದಾರೆ. ಆದರೆ ಪುನೀತ್ ರಾಜ್ ಕುಮಾರ್ ನಿರ್ಮಾಣ ಮಾಡುತ್ತಿರುವ ಈ ಚಿತ್ರದ ಹೆಸರು ಬದಲಾಗಲಿದೆ. ಇದು ಇವರ ನಾಲ್ಕನೆಯ ನಿರ್ಮಾಣದ ಸಿನಿಮಾವಾಗಿದೆ.

ಪಿ.ಆರ್.ಕೆ ಬ್ಯಾನರ್ ಚಿತ್ರಗಳು

ಸದ್ಯ ಅಪ್ಪು ನಿರ್ಮಾಣ ಮಾಡುತ್ತಿರುವ ಈ ಮಹಿಳಾ ಪ್ರಧಾನ ಚಿತ್ರದ ಚಿತ್ರೀಕರಣ ಶುರುವಾಗಿದ್ದು, ಇದು ಇವರ ನಿರ್ಮಾಣದ ನಾಲ್ಕನೆಯ ಸಿನಿಮಾವಾಗಿದೆ. ಈಗಾಗಲೇ ಇವರು ಹೇಮಂತ್ ನಿರ್ದೇಶನದಲ್ಲಿ ‘ಕವಲುದಾರಿ’, ರಾಜ್ ಬಿ ಶೆಟ್ಟಿ ನಟನೆಯ ‘ಮಾಯಾಬಜಾರ್’ ಹಾಗೂ ಪನ್ನಗಭರಣ ನಿರ್ದೇಶನದ, ಡ್ಯಾನೀಶ್ ಸೇಠ್ ಅಭಿನಯದ ಚಿತ್ರಗಳು ಶುರುವಾಗಿವೆ. ಯಾವ ಚಿತ್ರವೂ ಇನ್ನೂ ಬಿಡುಗಡೆಯಾಗಿಲ್ಲ. ಆದರೆ, ಈ ಸಾಲಿಗೆ ಈಗ ರಾಗಿಣಿ ಚಂದ್ರನ್ ಸಿನಿಮಾ ಸೇರಿಕೊಂಡಿದೆ.

#raginichadran #balakninews #filmnews, #kannadasuddigalu

Tags