ಸುದ್ದಿಗಳು

ನಟಿ ರಾಗಿಣಿ ಬಿಜೆಪಿಗೆ..?

ಬೆಂಗಳೂರು,ಏ.15: ನಟಿ ರಾಗಿಣಿ ಬಿಜೆಪಿ ಸೇರ್ಪಡೆಯಾಗಲಿದ್ದಾರೆ ಎನ್ನುವ ಮಾತುಗಳು ರಾಜಕೀಯ ರಂಗದಲ್ಲಿ ಕೇಳಿ ಬರುತ್ತಿವೆ.

ಸದ್ಯ ನಟಿ ರಾಗಿಣಿ ೧೦ ವರ್ಷ ಸಿನಿಮಾ ರಂಗದಲ್ಲಿ ತಮ್ಮದೇ ಆದ ಸ್ಥಾನ ಪಡೆದುಕೊಂಡು ಹಲವಾರು ಸಿನಿಮಾಗಳ ಮೂಲಕ ಮನೆ ಮಾತಾದ ತುಪ್ಪದ ಬೆಡಗಿ ಬಿಜೆಪಿ ಪಕ್ಷ ಸೇರುತ್ತಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.

Image result for ragini dwivedi

  ಇಂದು ನಡೆಯಬೇಕಿತ್ತಾ ಕಾರ್ಯಕ್ರಮ..?

ಎಸ್ ನಟಿ ರಾಗಿಣಿ ಲೋಕಸಭಾ ಚುನಾವಣೆ ಹೊತ್ತಿನಲ್ಲಿಯೇ ಬಿಜೆಪಿ ಸೇರುತ್ತಾರೆ ಎನ್ನಲಾಗಿದೆ. ಇಂದು ಈ ಸೇರ್ಪಡೆ ಕಾರ್ಯಕ್ರಮ ನಡೆಯಬೇಕಿತ್ತು ಆದರೆ ಕಾರಣಾಂತರಗಳಿಂದ ಅದು ಸಾಧ್ಯವಾಗಿಲ್ಲ ಎನ್ನಲಾಗಿದೆ.

ಬಿಜೆಪಿ ಪರ ಪ್ರಚಾರ..?

ಇತ್ತೀಚೆಗೆ ಈ ನಟಿ ಮುರುಳೀದರ್ ರಾವ್ ಅವರನ್ನು ಭೇಟಿ ಮಾಡಿದ್ದರಂತೆ. ಆಗಲೇ ಈ ವಿಚಾರವಾಗಿ ಮಾತುಕಥೆ ಕೂಡ ನಡೆದಿದೆ ಎನ್ನಲಾಗಿದೆ. ಚುನಾವಣಾ ವೇಳೆಯಲ್ಲಿ ಪಕ್ಷ ಸೇರ್ಪಡೆಯಾಗಿ, ಪ್ರಚಾರಕ್ಕೀಳಿಯಲಿದ್ದಾರಂತೆ. ಇನ್ನು ಈ ವಿಚಾರವಾಗಿ ನಟಿ  ಯಾವುದೇ ಮಾಹಿತಿ ಬಹಿರಂಗಪಡಿಸಿಲ್ಲ..

‘ಕವಲು ದಾರಿ’ಯಲ್ಲಿ ರೋಚಕ ಪಯಣ

 

Tags