ಸುದ್ದಿಗಳು

ಸೌತೆಕಾಯಿ ಮಾರಿದ ತುಪ್ಪದ ಬೆಡಗಿ

ಚಂದನವನದ ಬೆಡಗಿ ರಾಗಿಣಿ

ಬೆಂಗಳೂರು, ಅ.11: ಕಳೆದ ವಾರದ ‘ಸದಾ ನಿಮ್ಮೊಂದಿಗೆ’ ಸಂಚಿಕೆಯಲ್ಲಿ ನಮ್ಮ ಪ್ರೀತಿಯ ಅಧ್ಯಕ್ಷ ಶರಣ್ ಅವರು ಲವಣ್ ಎಂಬ 9 ವರ್ಷದ ಹುಡುಗನಿಗೋಸ್ಕರ ರಸ್ತೆ ರಸ್ತೆಗಳಲ್ಲಿ, ಸಿಗ್ನಲ್ ಗಳಲ್ಲಿ ಸೊಳ್ಳೆಬ್ಯಾಟ್, ಪೆನ್ ಇತರ ವಸ್ತುಗಳನ್ನು ಮಾರಾಟ ಮಾಡಿ ಸಹಾಯ ಮಾಡಿದ್ದರು.

ಅದೇ ರೀತಿ ಈ ವಾರದ ನಮ್ಮ ಸದಾ ನಿಮ್ಮೊಂದಿಗೆ ಕಾರ್ಯಕ್ರಮದಲ್ಲಿ ತುಪ್ಪದ ಬೆಡಗಿ ರಾಗಿಣಿ ಅವರು ಭಾಗವಹಿಸಲಿದ್ದಾರೆ. ರಾಗಿಣಿ ಅವರು ವಿನೋದ್ ಎನ್ನುವ ಅಂಧರಿಗೋಸ್ಕರ ನಮ್ಮ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ. ವಿನೋದ್ ಹುಟ್ಟಿದಾಗ ಕಣ್ಣಿನ ಯಾವುದೇ ತೊಂದರೆ ಇರಲಿಲ್ಲಾ. ಬೆಳವಣಿಗೆ ಆಗುತ್ತಾ ಕಣ್ಣಿನ ಸಮಸ್ಯೆಯಾಗಿ ಚಿಕಿತ್ಸೆ ಫಲಕಾರಿಯಾಗದೇ ಎರಡು ಕಣ್ಣಿನ ದೃಷ್ಠಿಯನ್ನು ಕಳೆದುಕೊಂಡಿದ್ದಾನೆ.ವಿನೋದ್ ನೆರವಿಗೆ ಮುಂದಾದ ರಾಗಿಣಿ

ಇಷ್ಟಾದರೂ ಆ ಮನುಷ್ಯನಲ್ಲಿ ಛಲ ಮಾತ್ರ ಕಡಿಮೆಯಾಗಿಲ್ಲ. ನರ್ಸರಿಯನ್ನು ಪ್ರಾರಂಭಿಸಿ ಅದರಿಂದ ಬಹಳಷ್ಟು ನಷ್ಟವನ್ನು ಹೊಂದಿದ್ದಾನೆ. ಆ ಸಾಲವನ್ನು ವಾಪಾಸ್ ಮಾಡಲು ರಾಗಿಣಿ ಅವನ ಬೆಂಬಲವಾಗಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ರಾಗಿಣಿ ಮಾವಿನಕಾಯಿ, ಸೌತೆಕಾಯಿ ಗಳನ್ನು ತಳ್ಳುವ ಗಾಡಿಯಲ್ಲಿ ಮಾರಿದ್ದಾಳೆ.

ರಾಗಿಣಿಯು ಒಟ್ಟು ಎಷ್ಟು ಹಣವನ್ನು ಸಂಗ್ರಹಿಸಿದ್ದಾರೆ .ಎಂಬುದನ್ನು ಈ ವಾರದ ಸಂಚಿಕೆಯಲ್ಲಿ ನೋಡಬಹುದು. ಸದಾ ನಿಮ್ಮೊಂದಿಗೆ ಇದೇ ಭಾನುವಾರ ರಾತ್ರಿ 9 ಗಂಟೆಗೆ ಉದಯ ಟಿವಿಯಲ್ಲಿ ಪ್ರಸಾರವಾಗುತ್ತದೆ.

Tags