ಸುದ್ದಿಗಳು

ನಟಿ ರಾಗಿಣಿಗಾಗಿ ಹಳೆ-ಹೊಸ ಗೆಳೆಯರಿಂದ ಮಾರಾಮಾರಿ..!!!

ಈ ಘಟನೆಯ ಬಗ್ಗೆ ಪ್ರತಿಕ್ರಿಯಿಸದ ರಾಗಿಣಿ

ಬೆಂಗಳೂರು.ಮಾ.17: ಕನ್ನಡದ ನಟಿ ರಾಗಿಣಿ ದ್ವಿವೇದಿಗಾಗಿ ಹಳೆ ಬಾಯ್ ಫ್ರೆಂಡ್ ರಿಯಲ್ ಎಸ್ಟೇಟ್ ಉದ್ಯಮಿ ಹಾಗೂ ಹೊಸ ಬಾಯ್ ಫ್ರೆಂಡ್ ಸಾರಿಗೆ ಇಲಾಖೆ ಅಧಿಕಾರಿ ನಡುವೆ ಶುಕ್ರವಾರ ರಾತ್ರಿ ನಗರದ ಪಂಚತಾರಾ ಹೋಟೆಲ್ನಲ್ಲಿ ಮಾರಾಮಾರಿ ನಡೆದಿದೆ.

ಈ ಘಟನೆಯ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡದ ರಾಗಿಣಿ ದುಬೈಗೆ ಹಾರಿದ್ದಾರೆ ಎಂಬ ಊಹಾಪೋಹಗಳು ಸಹ ಹರಿದಾಡುತ್ತಿದ್ದು, ಸದ್ಯ ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ. ಆದರೆ, ರವಿ ಮತ್ತು ಶಿವಪ್ರಕಾಶ್ ಇವರಿಗಾಗಿಯೇ ಜಗಳವಾಡಿದ್ದಾರೆ ಎಂಬ ಸುದ್ದಿ ಕೇಳಿ ಬರುತ್ತಿದೆ.

ಸಾರಿಗೆ ಇಲಾಖೆ ಅಧೀಕ್ಷಕ ಬಿ.ಕೆ.ರವಿಶಂಕರ್ ಹಲ್ಲೆಗೊಳಗಾಗಿದ್ದು, ಈ ಗಲಾಟೆ ಸಂಬಂಧ ರಿಯಲ್ ಎಸ್ಟೇಟ್ ಉದ್ಯಮಿ ಶಿವಪ್ರಕಾಶ್ ವಿರುದ್ಧ ಅಶೋಕ ನಗರ ಠಾಣೆಯಲ್ಲಿ ಅವರು ಶನಿವಾರ ದೂರು ದಾಖಲಿಸಿದ್ದಾರೆ. ಪಂಚತಾರಾ ಹೋಟೆಲ್ಗೆ ರಾತ್ರಿ 11 ಗಂಟೆ ಸುಮಾರಿಗೆ ಊಟಕ್ಕೆ ನಟಿ ಜೊತೆಗೆ ರವಿಶಂಕರ್ ತೆರಳಿದ್ದಾಗ ಈ ಘಟನೆ ನಡೆದಿದೆ.

ಶಿವಪ್ರಕಾಶ್ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ‘ನಾನು ರವಿ ಶಂಕರ್ ಮೇಲೆ ಹಲ್ಲೆ ಮಾಡಿಲ್ಲ. ಪೊಲೀಸ್ ಸ್ಟೇಷನ್ನಲ್ಲಿ ನನ್ನ ವಿರುದ್ಧ ಯಾವುದೇ ಪ್ರಕರಣ ದಾಖಲಾಗಿಲ್ಲ. ಇನ್ನು ಈ ವಿಚಾರವಾಗಿ ಯಾವುದೇ ಕೇಸ್ ಆಗಿಲ್ಲ. ರಾಗಿಣಿ ಅಂದರೆ ನಟಿ ರಾಗಿಣಿ ವಿಚಾರ ಅಲ್ಲ. ರಾಗಿಣಿ ಎಂಬುವವಳು ನನ್ನ ಇನ್ನೊಬ್ಬ ಸ್ನೇಹಿತೆ. ಆದರೆ ಇದೀಗ ನಟಿ ರಾಗಿಣಿ ಎಂದು ಸುಳ್ಳು ಪ್ರಚಾರ ಮಾಡಿದ್ದಾರೆ. ನಾಳೆ ಬೆಳಗ್ಗೆ ನಾನು, ರವಿ ಮತ್ತು ರಾಗಿಣಿ ಒಟ್ಟಿಗೆ ಸುದ್ದಿಗೋಷ್ಠಿ ನಡೆಸುತ್ತೇವೆ’ ಎಂದು ಹೇಳಿದ್ದಾರೆ.

ಪುನೀತ್ ರಾಜ್ ಕುಮಾರ್ ಗೆ ಹುಟ್ಟಹಬ್ಬಕ್ಕೆ ಸಿಕ್ಕ ವಿಶೇಷ ಗಿಫ್ಟ್

#ragini, #friends, #fight, #balkaninews #kannadasuddigalu, #raviprakash, #shivaprakash

Tags