ಸುದ್ದಿಗಳು

ದೀಪಾವಳಿಗೆ ಸಿಕ್ತು ತುಪ್ಪದ ಬೆಡಗಿಗೆ ಅಭಿಮಾನಿಯಿಂದ ಸ್ಪೆಷಲ್ ಗಿಫ್ಟ್!!

ರಾಗಿಣಿಗೆ ಉಡುಗೊರೆ ಕೊಟ್ಟಿರುವ ಅಭಿಮಾನಿ ಯಾರು?

ಬೆಂಗಳೂರು,ನ.8: ದೀಪಾವಳಿ ಹಬ್ಬ ಎಲ್ಲೆಡೆಯೂ ಮನೆ ಮಾಡಿದೆ.. ಚಂದನವನದಲ್ಲಿ ಸ್ಯಾಂಡಲ್ ವುಡ್ ಸ್ಟಾರ್ ಗಳ  ಮೆನೆಯಲ್ಲಂತೂ ಬೆಳಕಿನ ಹಬ್ಬ ಕಳೆಗಟ್ಟಿದೆ.. ಇನ್ನು ‘ತುಪ್ಪದ  ಬೆಡಗಿ’ ಎಂದೇ ಖ್ಯಾತಿ ಪಡೆದಿರುವ ರಾಗಿಣಿ ದ್ವಿವೇದಿ ಈಗ ಬಳುಕುವ ಬಳ್ಳಿಯಂತಾಗಿದ್ದಾರೆ.  ಈ ತುಪ್ಪದ ಬೆಡಗಿಗೆ ದೀಪಾವಳಿ ಹಬ್ಬಕ್ಕೆ ಒಂದು ಭರ್ಜರಿ ಗಿಫ್ಟ್ ಸಿಕ್ಕಿದೆ..  ರಾಗಿಣಿಗೆ  ಬಹಳಷ್ಟು ಅಭಿಮಾನಿಗಳು ಇದ್ದಾರೆ.. ಬರೀ ಕನ್ನಡದಲ್ಲಷ್ಟೇ ಅಲ್ಲ, ಹೊರ ದೇಶದಲ್ಲೂ ರಾಗಿ ಅಭಿಮಾನಿಗಳಿದ್ದಾರೆ. ರಾಗಿಣಿ ಮನೆಯಲ್ಲಿ ದೀಪಾವಳಿ ಹಬ್ಬ ವಿಶೇಷ ರಿತಿಯಲ್ಲಿ ಆಚರಿಸುತ್ತಾರೆ.. ಹೀಗಿರುವಾಗಲೇ ರಾಗಿಣಿಗೆ ಉಡುಗೊರೆ ಕೊಟ್ಟಿರುವ ಅಭಿಮಾನಿ ಯಾರು ಗೊತ್ತೇ? ಮುಂದೆ ಓದಿ..

 ಸ್ಪೆಷಲ್ ಗಿಫ್ಟ್ ಕೊಟ್ಟ ಅಭಿಮಾನಿ

ರಾಗಿಣಿಗೆ ದೀಪಾವಳಿಯ ಪ್ರಯುಕ್ತ ಸ್ಪೆಷಲ್​ ಗಿಫ್ಟ್ ಕೊಟ್ಟ ಅಭಿಮಾನಿ ಹೆಸರು ಸಿದ್ಧಾರ್ಥ್​,. ತಮ್ಮ ಕುಂಚದಲ್ಲೇ ಅರಳಿದ ವಿಭಿನ್ನ ಪೇಂಟಿಂಗ್ ಅನ್ನು ರಾಗಿಣಿಗೆ ಉಡುಗೊರೆಯಾಗಿ ಕೊಟ್ಟಿದ್ದಾರೆ.. ಎರಡು ಪೇಟಿಂಗನ್ನು ರಾಗಿಣಿಗೆ ನೀಡಿದ್ದಾರೆ.. ಬಹಳ ಸುಂದರವಾಗಿ ಚಿತ್ರವನ್ನು ಬಿಡಿಸಿದ್ದಾರೆ ಸಿದ್ದಾರ್ಥ್.. ಇನ್ನು ಅಭಿಮಾನಿ ಕೊಟ್ಟ ಈ ಉಡುಗೊರೆಯನ್ನು ಮೆಚ್ಚಿ ಸಾಮಾಜಿಕ ಜಾಲಾತಾಣದಲ್ಲಿ ಹಂಚಿಕೊಂಡಿದ್ದಾರೆ ರಾಗಿಣಿ!!

 

Tags