ಸುದ್ದಿಗಳು

ಬಿ.ಜೆ.ಪಿ ಪಕ್ಷ ಸೇರಿದ ರಾಗಿಣಿ ದ್ವಿವೇದಿ

ಬೆಂಗಳೂರು.ಏ.14: ನಗರದ ಖಾಸಗಿ ಹೊಟೇಲ್ ನಲ್ಲಿ ಅರವಿಂದ ಲಿಂಬಾವಳಿ ನೇತೃತ್ವದಲ್ಲಿ ನಟಿ ರಾಗಿಣಿ ಭಾರತೀಯ ಜನತಾ ಪಕ್ಷ ಸೇರ್ತಾ ಇದ್ದಾರೆ. ಅವರು ಸ್ಯಾಂಡಲ್ವುಡ್ ನ ತುಪ್ಪದ ಹುಡ್ಗಿ ಅಂತ್ಲೇ ಫೇಮಸ್.

ನಟನೆಗಿಂತ ತನ್ನ ಮೈಮಾಟದಿಂದಲೇ ಚಿತ್ರರಂಗದಲ್ಲಿ ಖ್ಯಾತಿಗೆ ಬಂದ ರಾಗಿಣಿಗೆ ಕನ್ನಡ ಚಿತ್ರರಂಗದ ಉಳಿದ ನಟಿಯರಿಗೆ ಸಿಕ್ಕಿರೋ ಸ್ಥಾನಮಾನ ಸಿಕಿಲ್ಲ ಎನ್ನುವುದು ಗೊತ್ತಿರೋ ವಿಷ್ಯ.

ಪಾರ್ಟಿ, ಬಾಯ್ ಫ್ರೆಂಡ್ ಅಂತ ಸುತ್ತಾಡುವ ರಾಗಿಣಿ ಮೊನ್ನೆ ಮೊನ್ನೆ ಹಳೆ ಬಾಯ್ ಫ್ರೆಂಡ್ ಬಿಟ್ಟು ಹೊಸ ಬಾಯ್ ಫ್ರೆಂಡ್ ಜೊತೆ ಸುತ್ತಾಡಿ ಇಬ್ಬರ ಹೊಡೆದಾಡುವುದಕ್ಕೂ ಕಾರಣವಾಗಿದ್ದರು.

ಹೀಗೆ ರಾಗಿಣಿ ಸಿನಿಮಾಕ್ಕಿಂತ ಹೆಚ್ಚಾಗಿ ವಿವಾದಗಳಿಂದ್ಲೇ ಸದ್ದು ಮಾಡಿದ ನಟಿ. ಆದ್ರೆ ಬಿಜಿಪಿಗೆ ಇಂಥ ಯೋಚನೆ ಯಾಕೆ ಹೊಳೆಯಿತೋ ಗೊತ್ತಿಲ್ಲ..? ಆಕೆಯನ್ನು ನೋಡಿ ಒಂದು ವೋಟ್ ಕೂಡ ಪಕ್ಷಕ್ಕೆ ಬೀಳಲ್ಲ ಅನ್ನೋದು ಗ್ಯಾರಂಟಿ.

ಅಂಥದ್ರಲ್ಲಿ ಸಂಸ್ಕೃತಿ ರಕ್ಷಕರು, ನೈತಿಕತೆ ಬಗ್ಗೆ ಮಾತನಾಡುವ ಬಿಜೆಪಿಗೆ ರಾಗಿಣಿ ಬೇಕಿತ್ತಾ ಅನ್ನೋದು ಸದ್ಯ ಪಕ್ಷದಲ್ಲಿ ಆಂತರಿಕವಾಗಿ ಮೂಡ್ತಿರೋ ಪ್ರಶ್ನೆ. ಮತ್ತೊಂದೆಡೆ ಬಿಜೆಪಿಯಲ್ಲೇ ಆಕೆಯನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ಬಗ್ಗೆ ಒಮ್ಮತ ಇಲ್ಲ. ಈಗಾಗ್ಲೇ ಪಕ್ಷದಲ್ಲಿ ಈ ಬಗ್ಗೆ ಆಕ್ರೋಶ ಭುಗಿಲೆದ್ದಿದೆಯಂತೆ..

ಅಡುಗೆಗೂ ಸೈ, ಆರೋಗ್ಯಕ್ಕೂ ಸೈ ಈ ಇಂಗು

#raginidwivedi, #joined, #tobjp, #balkaninews #filmnews, #politicalnews, #kannadasuddigalu

Tags