ಸುದ್ದಿಗಳು

‘ರಹದಾರಿ’ಯಲ್ಲಿ ಬರುತ್ತಿರುವ ‘ಒಂದು ಕಥೆ ಹೇಳ್ಲಾ’ ನಿರ್ದೇಶಕರು

ಇತ್ತಿಚೆಗೆ ನಮ್ಮ ಸ್ಯಾಂಡಲ್ ವುಡ್ ದಿನದಿಂದ ದಿನಕ್ಕೆ ಹೊಸ ಹೊಸ ಪ್ರತಿಭಾವಂತರು, ಹೊಸ ಹೊಸ ಐಡಿಯಾಗಳೊಂದಿಗೆ ಚಿತ್ರರಂಗಕ್ಕೆ ಬರುತ್ತಿದ್ದಾರೆ. ಹಾಗೆಯೇ ಇಲ್ಲೊಂದು ಹೊಸಬರ ತಂಡದವರು ಚಿತ್ರರಂಗಕ್ಕೆ ಬಂದಿದ್ದಾರೆ.

ಹೌದು, ಚಂದವನದಲ್ಲೀಗ ಹೊಸಬರ ತಂಡದವರು ಕಾಣಿಸಿಕೊಂಡಿದ್ದಾರೆ. ಹಾಗಂತಾ ಇವರಿಗೆ ಅನುಭವವಿಲ್ಲವೆಂದಲ್ಲಾ, ಈ ಹಿಂದೆ ಸೌಂಡ್ ಮಾಡಿದ್ದ ‘ಒಂದ್ ಕಥೆ ಹೇಳ್ಲಾ’ ಚಿತ್ರದಲ್ಲಿ ಕೆಲಸ ಮಾಡಿದವರು. ಈ ಚಿತ್ರದ ನಿರ್ದೇಶಕರು ಮತ್ತೊಂದು ಸಿನಿಮಾಕ್ಕೆ ಕೈ ಹಾಕಿದ್ದಾರೆ.

ಮೊದಲ ಪ್ರಯತ್ನದಲ್ಲಿ ಸಾಕಷ್ಟು ಪ್ರಶಂಸೆಗೊಳಗಾಗಿದ್ದ ನಿರ್ದೇಶಕ ಗಿರೀಶ್ ಜಿ ಅವರೀಗ ಮತ್ತೊಂದು ದೊಡ್ಡ ಪ್ರಯತ್ನಕ್ಕೆ ಕೈ ಹಾಕಿದ್ದು, ಚಿತ್ರಕ್ಕೆ ‘ರಹದಾರಿ’ ಎಂಬ ಟೈಟಲ್ ಇಟ್ಟಿದ್ದಾರೆ. ಹೌದು, ‘ರಹದಾರಿ’ ಮೂಲಕ ರಾಬರಿ ಮಾಡುವ ಕಥೆಯೊಂದನ್ನು ಪರಿಚಯಿಸುತಿದ್ದಾರೆ.ಸದ್ಯದಲ್ಲಿಯೇ ಈ ಚಿತ್ರದ ಕೆಲಸಗಳು ಶುರುವಾಗಲಿದ್ದು, ಇವರು ಇವರ ಮೂರನೇಯ ಚಿತ್ರವಾಗಿದೆ. ಈಗಾಗಲೇ ಎರಡನೇ ಚಿತ್ರದ ಕೆಲಸಗಳು ಸಹ ಶುರುವಾಗಿವೆ. ಇದರ ನಡುವೆ ಮೂರನೇಯ ಚಿತ್ರದ ಕುರಿತಂತೆ ಹಂಚಿಕೊಂಡಿದ್ದಾರೆ.

ಸದ್ಯ ಈ ಚಿತ್ರದ ಪೋಸ್ಟರ್ ರಿಲೀಸ್ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದ್ದು, ಪೋಸ್ಟರ್ ನಲ್ಲಿಯೇ ಹೊಸತನದ ಪ್ರಯೋಗ ಎದ್ದು ಕಾಣುತ್ತಿದೆ. ಸದ್ಯ ಪ್ರೀ ಪ್ರೊಡಕ್ಷನ್ ನಲ್ಲಿರುವ ತಂಡ ಮುಂದಿನ ವರ್ಷದ ಮೊದಲಲ್ಲಿ ಶೂಟಿಂಗ್ ಸ್ಟಾರ್ಟ್ ಮಾಡುವ ಫ್ಲಾನ್ ಮಾಡಿಕೊಂಡಿದ್ದಾರೆ.

‘ಬಿಳಿಹೆಂಡ್ತಿ’ಯ ಜೊತೆಗೆ ‘ಗಾಳಿಪಟ’ ಹಾರಿಸುತ್ತಿರುವ ಕಿರುತೆರೆಯ ‘ಕಣ್ಮಣಿ’

#rahadaari, #movie, #news, #balkaninews #filmnews, #girishG, #kannadasuddigalu

Tags