ಸುದ್ದಿಗಳು

ರಾಹುಲ್ ಗಾಂಧಿ ಬಯೋಪಿಕ್ ನ ಟೀಸರ್ ಬಿಡುಗಡೆ

ಮುಂಬೈ, ಫೆ.11:

ಇತ್ತೀಚಿನ ದಿನಗಳಲ್ಲಿ ಬಯೋಪಿಕ್ ಸಿನಿಮಾಗಳಿಗೇನು ಕಡಿಮೆ ಇಲ್ಲ. ಅದರಲ್ಲೂ ರಾಜಕೀಯ ಮುಖಂಡರ ಸಿನಿಮಾಗಳು ತೆರೆ ಕಾಣುತ್ತಲೇ ಇವೆ. ಇತ್ತೀಚೆಗೆ ಮನ್ ಮೋಹನ್ ಸಿಂಗ್ ಅವರ ಬಯೋಪಿಕ್ ಸಿನಿಮಾ ತೆರೆ ಕಂಡಿದ್ದು, ಗೊತ್ತೇ ಇದೆ. ಈ ಸಿನಿಮಾ ಪ್ರೇಕ್ಷಕರ ಮನ ಮುಟ್ಟುವಲ್ಲಿ ಯಶಸ್ವಿಯಾಗಿತ್ತು. ಇದರ ಬೆನ್ನಲ್ಲೇ ನರೇಂದ್ರ ಮೋದಿಯವರ ಸಿನಿಮಾ ಕೂಡ ಭರ್ಜರಿಯಾಗಿ ಚಿತ್ರೀಕರಣ ನಡೆಯುತ್ತಿದೆ. ಇವೆಲ್ಲದರ ನಡುವೆ ರಾಹುಲ್ ಗಾಂಧಿಯವರ ಜೀವನ ಕಥೆ ತೆರೆ ಮೇಲೆ ಮೂಡಿಬಂದಿದೆ.

ರಾಹುಲ್ ಗಾಂಧಿ ಟ್ರೇಲರ್

ಹೌದು, ರಾಹುಲ್ ಗಾಂಧಿಯವರ ಜೀವನ ಚಿತ್ರಣವನ್ನು ತೆರೆ ಮೇಲೆ ತರುವ ಪ್ರಯತ್ನವಾಗಿದೆ. ಮೈ ನೇಮ್ ಈಸ್ ರಾಗ ಎನ್ನುವ ಟೈಟಲ್ ಮೂಲಕ ಸಿನಿಮಾ ತೆರೆ ಕಾಣುತ್ತಿದೆ. ಇದರ ಮೊದಲ ಹಂತ ಎನ್ನುವಂತೆ ಈ ಸಿನಿಮಾದ ಟೀಸರ್ ಬಿಡುಗಡೆಯಾಗಿದೆ. ಈ ಟ್ರೇಲರ್‌ ನಲ್ಲಿ ರಾಹುಲ್ ಗಾಂಧೀಯವರ ಬಾಲ್ಯ, ತುಂಟಾಟಗಳ ನಡುವೆ ಇಂದಿರಾಗಾಂಧಿಯವರ ಕೊಲೆ ರಾಹುಲ್ ನಿದ್ದೆಗೆಡಿಸುತ್ತೆ. ಊಟ ತಿಂಡಿ ಎಲ್ಲವನ್ನು ಬಿಟ್ಟು ತನ್ನ ಅಜ್ಜಿಯ ಬಗ್ಗೆಯ ಚಿಂತೆ ಅವರನ್ನು ಕಾಡುತ್ತಿರುತ್ತದೆ. ನಂತರ ಅವರ ರಾಜಕೀಯ ಪ್ರವೇಶ ಹೀಗೆ ಎಲ್ಲವನ್ನು ಎಳೆ ಎಳೆಯಾಗಿ ಬಿಚ್ಚಿಡುವ ಪ್ರಯತ್ನ ಮಾಡಲಾಗಿದೆ.

ಏಪ್ರಿಲ್‌ ನಲ್ಲಿ ಸಿನಿಮಾ ತೆರೆಗೆ ತರುವ ಸಾಧ್ಯತೆ

ಇನ್ನು ಈ ಸಿನಿಮಾವನ್ನು ರೂಪೇಶ್ ನಿರ್ದೇಶನ ಮಾಡಿದ್ದಾರೆ. ರಾಹುಲ್ ಗಾಂಧಿ ಪಾತ್ರದಲ್ಲಿ ಅಶ್ವಿನ್ ಕುಮಾರ್ ನಟಿಸಿದ್ರೆ, ಹಿಮಂತ್ ಕಪಾಡಿಯಾ ನರೇಂದ್ರ ಮೋದಿಯವರ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಸದ್ಯ ಈ ಸಿನಿಮಾ ಏಪ್ರಿಲ್‌ ನಲ್ಲಿ ತೆರೆ ಕಾಣುವ ಸಾಧ್ಯತೆ ಇದೆ.

‘ಪಿಎಂ ನರೇಂದ್ರ ಮೋದಿ’ ಬಯೋಪಿಕ್ ಫಸ್ಟ್ ಲುಕ್!!

#narendramodi #rahulgandhi #rahulgandhipolitics #balkaninews #mynameisraga #rahulgandhibiopic

Tags