ಸುದ್ದಿಗಳು

“ದ ಗ್ರೇಟ್ ವಾಲ್ ಕ್ರಿಕೆಟರ್” ಹುಟ್ಟುಹಬ್ಬಕ್ಕೆ ಕಿಚ್ಚನ ಸ್ಪೆಷಲ್ ವಿಶ್ ಏನು?

ಬೆಂಗಳೂರು,ಜ.10: ಭಾರತ ಕ್ರಿಕೆಟ್ ತಂಡದ ಆಟಗಾರರಲ್ಲೊಬ್ಬರು ಮತ್ತು ತಂಡದ ಮಾಜಿ ನಾಯಕ ರಾಹುಲ್ ದ್ರಾವಿಡ್ ಇಂದು 46ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಅನೇಕ ಗಣ್ಯರು ದ್ರಾವಿಡ್ ಗೆ ಶುಭಾಶಯ ತಿಳಿಸಿದ್ದಾರೆ.. ಇನ್ನು ರಾಹುಲ್ ಹುಟ್ಟುಹಬ್ಬದಂದು ಕಿಚ್ಚ ಸುದೀಪ್ ಕೂಡ ಶುಭಾಶಯ ತಿಳಿಸಿದ್ದಾರೆ..

ಕಿಚ್ಚನ ಟ್ವೀಟ್

“ಶಿಸ್ತು, ತತ್ವ, ಗುರಿ ಹೀಗೆ ಹೇಳುತ್ತಾ ಹೋದರೆ ದೊಡ್ಡ ಲಿಸ್ಟ್ ಆಗಿ ಬಿಡುತ್ತದೆ. ರಾಹುಲ್ ಅವರು  ಜಂಟಲ್ ಮ್ಯಾನ್.. ನಾನು ತುಂಬಾ ಇಷ್ಟಪಡುವ ವ್ಯಕ್ತಿ.. ಅದ್ಬುತ ಆಟಗಾರ.. ಅವರು ಪದಗಳಲ್ಲಿ ಕಡಿಮೆ ಮಾತನಾಡಿ ಆ್ಯಕ್ಷನ್ಗಳಲ್ಲಿ ಹೆಚ್ಚು ಮಾತನಾಡುತ್ತಾರೆ. ಈ ಮಹಾನ್ ಸಾಧಕನಿಗೆ ಹುಟ್ಟುಹಬ್ಬದ ಶುಭಾಶಯಗಳು, ಹಾಗೂ ಹೊಸ ವರ್ಷದ ಶುಭಾಶಯಗಳು”  ಎಂದು ಟ್ವೀಟ್ ಮಾಡಿದ್ದಾರೆ.

ಮಧ್ಯಪ್ರದೇಶ ಮೂಲದವರಾದ ದ್ರಾವಿಡ್

ಮಧ್ಯಪ್ರದೇಶ ಮೂಲದವರಾದ ದ್ರಾವಿಡ್ ಪೂರ್ಣ ಕನ್ನಡಿಗರು. ಟೆಸ್ಟ್ ಪಂದ್ಯಗಳಲ್ಲಿ ೧೦,೦೦೦ಕ್ಕೂ ಅಧಿಕ ರನ್ನುಗಳನ್ನು ಗಳಿಸುವುದರಲ್ಲಿ, ಸಚಿನ್ ತೆಂಡೂಲ್ಕರ್ ಮತ್ತು ಸುನಿಲ್ ಗವಾಸ್ಕರ್ ನಂತರ ಮೂರನೇಯ ಭಾರತೀಯ. ಫೆಬ್ರುವರಿ ೧೪, ೨೦೦೭ ರಂದು ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ೧೦,೦೦೦ಕ್ಕೂ ಅಧಿಕ ರನ್ನುಗಳನ್ನು ಗಳಿಸಿದ ವಿಶ್ವದಲ್ಲಿ ೬ನೇ ಆಟಗಾರ…

#rahuldravid #balkaninews #kicchasudeep

Tags