ಸುದ್ದಿಗಳು

ರಾಜಮೌಳಿಯ ಮಗ ಇಲ್ಲಿ ವಿವಾಹವಾಗಲಿದ್ದಾರಂತೆ!!

7 ಸ್ಟಾರ್ ಹೋಟೆಲ್ ನಲ್ಲಿ ಮದುವೆ

ಹೈದರಾಬಾದ್,ಡಿ.6:  ರಾಜಮೌಳಿಯ  ಮಗ ಕಾರ್ತಿಕೇಯ ಜಗಪತಿ ಬಾಬು ಅವರ ಸಹೋದರ ರಾಮ್ ಪ್ರಸಾದ್ ಪುತ್ರಿ ಪೂಜಾ ಪ್ರಸಾದ್ ಳನ್ನು ಪ್ರೀತಿಸಿ ವಿವಾಹವಾಗುತ್ತಿರುವುದು ಗೊತ್ತೇ ಇರುವ ವಿಷಯ.. ಸೆಪ್ಟಂಬರ್ ಸೆಪ್ಟಂಬರ್ ಮೊದಲ ವಾರದಲ್ಲಿ ಹೈದರಾಬಾದ್ನಲ್ಲಿ ಇವರಿಬ್ಬರ ನಿಶ್ಚಿತಾರ್ಥವಾಗಿತ್ತು. ಈಗ  ಈ ಜೋಡಿ ಹಸೆಮಣೆ ಏರಲು ರೆಡಿಯಾಗಿದ್ದಾರೆ..

ಡಿಸೆಂಬರ್ 30 ಮದುವೆ

ಡಿಸೆಂಬರ್ 30 ಮದುವೆಯ ನಿಗದಿತ ದಿನಾಂಕ ಎಂದು ಹೇಳಲಾಗಿದ್ದು ಮೂಲಗಳ ಪ್ರಕಾರ  ಇವರಿಬ್ಬರ ವಿವಾಹ ತೆಲುಗು ರಾಜ್ಯಗಳ ಹೊರಗೆ ನಡೆಯಲಿವೆ ಎಂದು ದೃಢಪಡಿಸಿದೆ. ರಾಜಮೌಳಿ ಹಾಗೂ ಅವರ ಕುಟುಂಬಸ್ಥರು ಮದುವೆಗೆ  ರಾಜಸ್ತಾನದ ರಾಜಧಾನಿ ಜೈಪುರವು ಅತ್ಯುತ್ತಮ ಸ್ಥಳವೆಂದು ಆಯ್ಕೆ ಮಾಡಿಕೊಂಡಿದ್ದಾರೆಯಂತೆ..

Image result for hotel fairmont rajasthan

ಮೊಘಲ್ ಶೈಲಿಯ ಅರಮನೆ

ಮೊಘಲ್ ಶೈಲಿಯ ಅರಮನೆಯಲ್ಲಿ, 250 ಎಕರೆ ಆಸ್ತಿಯ ಹೋಟೆಲ್ ಫೇರ್ಮಾಂಟ್ನಲ್ಲಿ ಕಾರ್ತಿಕೇಯ ಮತ್ತು ಪೂಜಾ ವಿವಾಹವಾಗಲಿದ್ದಾರೆ ಎಂದು ಮೂಲಗಳು ಬಹಿರಂಗಪಡಿಸಿದೆ. ಈ ಐಷಾರಾಮಿ 7 ಸ್ಟಾರ್ ಹೋಟೆಲ್ ಕೆಲವು  ಬಾಲಿವುಡ್ ನ ದೊಡ್ಡ  ಚಲನಚಿತ್ರಗಳ ಶೂಟಿಂಗ್ ಕೂಡ ನಡೆದಿತ್ತು  ರಾಜಮೌಳಿ ತನ್ನ ಮಗನಿಗೆ ಬಾಹುಬಲಿಯ ಸೆಟ್ ನಂತಿರುವ ಅರಮನೆಯನ್ನೇ  ಬುಕ್ ಮಾಡಿದಂತೆ ತೋರುತ್ತಿದೆ!

Tags