ಸುದ್ದಿಗಳು

ರಜನಿಗಾಗಿ ತ್ರಿಶಾ ಹೊಸ ಅವತಾರ!!

ಕೂದಲಿಗೆ ಕತ್ತರಿ ಹಾಕಿಸಿದ ತ್ರಿಶಾ!!

ನಿರ್ದೇಶಕ ಕಾರ್ತಿಕ್ ಸುಬ್ಬರಾಜು ನಿರ್ದೇಶನದಲ್ಲಿ ಬರಲಿರೋ ಚಿತ್ರ ಆ್ಯಕ್ಷನ್ ಡ್ರಾಮಾ ಆಗಿರಲಿದ್ದು, ನಾಯಕಿಯಾಗಿರೋ ತ್ರಿಶಾ ತಮ್ಮ ಪಾತ್ರಕ್ಕಾಗಿಯೇ ಶಾರ್ಟ್ ಹೇರ್ ಕಟ್ ಮಾಡಿಸಿ ಹೊಸ ಅವತಾರದಲ್ಲಿ ಕಾಣಿಸುತ್ತಿದ್ದಾಳೆ.

ಚೆನೈ,ಆ.27: ಕಾಲಿವುಡ್‌ನ ಹೆಸರಾಂತ  ನಟಿ ತ್ರಿಶಾ ಚಿತ್ರರಂಗಕ್ಕೆ ಬಂದು ಅದೆಷ್ಟೋ ವರ್ಷಗಳು ಕಳೆದಿವೆ ಅದೆಷ್ಟೋ ಸಿನಿಮಾಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡಿದ್ದಾಗಿದೆ.  ಎಲ್ಲಾ ಸ್ಟಾರ್ ನಟರೊಂದಿಗೆ ನಟಿಸಿದ ಹೆಗ್ಗಳಿಕೆ ಈಕೆಗಿದ್ದರೂ ಒಂದು ಕೊರಗು ಆಕೆಯನ್ನು ಕಾಡುತ್ತಿದೆ. ಏನೆಂದರೆ ಅದು ತಾನಿನ್ನೂ ಸೂಪರ್‌ ಸ್ಟಾರ್ ರಜನಿಕಾಂತ್ ಜೊತೆ ಇನ್ನೂ ಒಂದೇ ಒಂದು ಸಿನಿಮಾದಲ್ಲಿ ಅಭಿನಿಯಿಸಿಲ್ಲ ಅನ್ನೋದು. ಆದರೆ ಈಗ ಆಕೆಯ ಕನಸು ನನಸಾಗಿದೆ. ತ್ರಿಷಾ ಆಸೆಯಂತೆ ‘ತಲೈವಾ 162’ನೇ ಸಿನಿಮಾ ತ್ರಿಶಾ ನಟಿಸುತ್ತಾ ಇದ್ದಾರೆ. ಈ ಸಿನಿಮಾಗಾಗಿ ತ್ರಿಶಾ ಏನು ಮಾಡಿದ್ದಾರೆ ಗೊತ್ತಾ? ತಮ್ಮ ಕೇಶರಾಶಿಗೆ ಕತ್ತರಿ ಹಾಕಿಸಿದ್ದಾರೆ.   ನಿರ್ದೇಶಕ ಕಾರ್ತಿಕ್ ಸುಬ್ಬರಾಜು ನಿರ್ದೇಶನದಲ್ಲಿ ಬರಲಿರೋ ಈ ಚಿತ್ರ ಆ್ಯಕ್ಷನ್ ಡ್ರಾಮಾ ಆಗಿರಲಿದ್ದು, ನಾಯಕಿಯಾಗಿರೋ ತ್ರಿಶಾ ತಮ್ಮ ಪಾತ್ರಕ್ಕಾಗಿಯೇ ಶಾರ್ಟ್ ಹೇರ್ ಕಟ್ ಮಾಡಿಸಿ ಹೊಸ ಅವತಾರದಲ್ಲಿ ಕಾಣಿಸುತ್ತಿದ್ದಾಳೆ.

Image result for trisha

ಕೂದಲಿಗೆ ಕತ್ತರಿ

ಕೂದಲು ಕತ್ತರಿಸಿರುವ ಫೋಟೋವನ್ನು ತಮ್ಮ ಟ್ವಿಟರ್‌ ಖಾತೆಯಲ್ಲಿ ಹಂಚಿ, ಒಂದು ಹೆಣ್ಣು ತನ್ನ ಕೇಶರಾಶಿಗೆ ಕತ್ತರಿ ಹಾಕಿ ಹೊಸ ಲುಕ್ ಪಡೀತಾಳೆ ಅಂದರೆ, ಅದು ತನ್ನ ಜೀವನದಲ್ಲಾಗಲಿರೋ ಬದಲಾವಣೆಯಾಗೋಸ್ಕರ ಅಂತಾ ಬರೆದು ಟ್ವೀಟ್ ಮಾಡಿದ್ದಾರೆ. ಅವರ ಈ ಮಾತೇ ತಮ್ಮ ಜೀವನದಲ್ಲಿ ದೊಡ್ಡ ಬದಲಾವಣೆಯಾಗುತ್ತಿದೆ, 15 ವರ್ಷದ ಸಿನಿಪಯಣದಲ್ಲಿ ನನ್ನಾಸೆಯಂತೆ ಈಗ ಸೂಪರ್‌ಸ್ಟಾರ್‌ ಗೆ ನಾಯಕಿಯಾಗೋ ಯೋಗ ಬಂದಿದೆ ಅನ್ನೋದನ್ನು ಹೇಳುತ್ತಿದೆ.   ಸನ್ ಪಿಕ್ಚರ್ಸ್ ನಿರ್ಮಿಸುತ್ತಿರುವ ಇನ್ನೂ ಹೆಸರಿಡದ ಈ ಚಿತ್ರದಲ್ಲಿ  ವಿಜಯ್ ಸೇತುಪತಿ, ಬಾಲಿವುಡ್‌ ನಟ ನವಾಜುದ್ದಿನ್ ಸಿದ್ಧಕಿ, ಬಾಬಿ ಸಿಂಹಾ, ಮೇಘಾ ಆಕಾಶ್ ಸೇರಿದಂತೆ ದೊಡ್ಡ ತಾರಗಣವಿದೆ.

Tags