ಸುದ್ದಿಗಳು

ಸೂಪರ್ ಸ್ಟಾರ್ ರಜನಿಕಾಂತ್ ಅತ್ತಿಗೆ ನಿಧನ..

ಕಷ್ಟದ ದಿನಗಳಲ್ಲಿ ನನ್ನ ಒಡ ಹುಟ್ಟಿದ ಅಣ್ಣ ಮತ್ತು ಅತ್ತಿಗೆ ಒಬ್ಬ ತಂದೆಯ ಸ್ಥಾನದಲ್ಲಿ ನಿಂತಿದ್ದರು..

ರಜನಿ ಅವರ ಹಿರಿಯ ಸೋದರನಾದ ಸತ್ಯನಾರಾಯಣ ರಾವ್ ಗಯೇಕ್ವಾಡ್ ಅವರ ಪತ್ನಿಯಾಗಿದ್ದ ಅವರು, ಹಿರಿಯ ಚಲನಚಿತ್ರ ನಟನಿಗೆ ಆರ್ಥಿಕ ನೆರವು ನೀಡುತ್ತಿದ್ದರು.

ಚೆನ್ನೈ,ಸೆ.03: ನಟ ರಜನಿಕಾಂತ್ ಅವರ ಅತ್ತಿಗೆ ಕಲಾವತಿ (72) ಭಾನುವಾರ ರಾತ್ರಿ 11 ಗಂಟೆಗೆ ನಿಧನರಾಗಿದ್ದಾರೆ.

ರಜನಿ ಅವರ ಹಿರಿಯ ಸೋದರನಾದ ಸತ್ಯನಾರಾಯಣ ರಾವ್ ಗಯೇಕ್ವಾಡ್ ಅವರ ಪತ್ನಿಯಾಗಿದ್ದ ಅವರು, ಹಿರಿಯ ಚಲನಚಿತ್ರ ನಟನಿಗೆ ಆರ್ಥಿಕ ನೆರವು ನೀಡುತ್ತಿದ್ದರು.

ರಜನಿ ತನ್ನ ನಟನಾ ವೃತ್ತಿಯ ಆರಂಭದಲ್ಲಿದ್ದಾಗ ಈ ಅತ್ತಿಗೆ ಬಹಳಷ್ಟು ಮಟ್ಟಿಗೆ ಹಣ ಮತ್ತು ಮಾನಸಿಕ ಸ್ಥೈರ್ಯಗಳನ್ನು  ತುಂಬಿ ಕೊಡಲು ಸಮಯೋಚಿತ ಸಹಾಯಗಳನ್ನು ಮಾಡಿದ್ದರಂತೆ.

ಏಳೆಂಟು ಬಾರಿ ಮಾತ್ರ ಭೇಟಿ

ತಮ್ಮ ಇತ್ತೀಚಿನ ಸಾರ್ವಜನಿಕ ಭಾಷಣದಲ್ಲಿ ತಲೈವಾ ಈ ಬಗ್ಗೆ ಅನೌಪಚಾರಿಕವಾಗಿ ಹೇಳಿಕೊಂಡಿದ್ದಲ್ಲದೆ ಆ ನನ್ನ ಕಷ್ಟದ ದಿನಗಳಲ್ಲಿ ನನ್ನ ಒಡ ಹುಟ್ಟಿದ ಅಣ್ಣ ಮತ್ತು ಅತ್ತಿಗೆ ಒಬ್ಬ ತಂದೆಯ ಸ್ಥಾನದಲ್ಲಿ ನಿಂತು ನನ್ನನ್ನು ಬೆಂಬಲಿಸಿದ್ದರು.. ಇದುವರೆಗೆ ಏಳೆಂಟು ಬಾರಿ ಮಾತ್ರ ನನ್ನನ್ನು ಭೇಟಿ ಮಾಡಲು ಚೆನ್ನೈಗೆ ಬಂದ ಇವರು ಆಗ ನೀಡಿದ್ದ ಸಹಾಯಕ್ಕೆ ಬದಲಾಗಿ ಈ ತನಕ ಯಾವ ಪ್ರತಿಫಲವನ್ನು ನಿರೀಕ್ಷಿಸಿಲ್ಲ. ಇದೇ ಅವರ ದೊಡ್ಡ ಗುಣ ಎಂದು ಮುಕ್ತವಾಗಿ ಹೇಳಿಕೊಂಡಿದ್ದರು..

ತಮ್ಮ 165ನೇ ಸಿನಿಮಾದ ಚಿತ್ರೀಕರಣದಲ್ಲಿ ಸಕ್ರಿಯರಾಗಿರುವ ರಜನಿ ನಿರ್ದೇಶಕ ಸುಬ್ಬರಾಜುವಿಗೆ ತಿಳಿಸಿ ಮರುಕ್ಷಣ ಬೆಂಗಳೂರಿಗೆ ಧಾವಿಸಿದ್ದಾರೆ.

ಕಾಶ್ಮೀರದ ಲಡಾಖ್

ಹಠಾತ್ ನೇ ಬಂದ ಈ ಸುದ್ದಿಯ ಫಲಿತಾಂಶವಾಗಿ ‘ಬನ್ನಿ ಮಿಲ್ಸ್’ ಒಳಾಂಗಾಣದಲ್ಲಿ ನಡೆಯುತ್ತಿದ್ದ ಚಿತ್ರೀಕರಣವನ್ನು ಸುಬ್ಬರಾಜು ಪ್ಯಾಕ್ ಅಪ್ ಮಾಡಿದ್ದಾರೆ. ಇನ್ನೇನು ಕೆಲವೇ ದಿನಗಳಲ್ಲಿ ತಮ್ಮ ಮಹಾನ್ ಚಿತ್ರದ ಮುಂದಿನ ಶೆಡ್ಯೂಲ್ ಕಾಶ್ಮೀರದ ಲಡಾಖ್ ಪ್ರಾಂತ್ಯದಲ್ಲಿ ನಡೆಸುವ ಯೋಜನೆ ಇಟ್ಟುಕೊಂಡು ಸುಬ್ಬರಾಜು ಪ್ರಸ್ತುತ ಶೆಡ್ಯೂಲ್ ಅನ್ನು ಮೊಟಕುಗೊಳಿಸಿ ಲಡಾಖ್ ಗೆ ತಮ್ಮ ಸಮಗ್ರ ಯುನೀಟ್ ರವಾನೆ ಮಾಡಿದ್ದಾರೆ.

ತಮ್ಮ ಕುಟುಂಬದಲ್ಲಿ ಜರುಗಿದ ೀ ಅನಿರೀಕ್ಷಿತ ಸಾವಿನಿಂದಾಗಿ ಕೊಂಚ ವಿಚಲಿತರಂತೆ ಕಂಡು ಬಂದ ಸೂಪರ್ ಸ್ಟಾರ್, ನಿರ್ದೇಶಕ ಸುಬ್ಬರಾಜು ಮತ್ತು ತಂಡ ಮುಂದಿನ 5 ದಿನಗಳಲ್ಲಿ ಲಡಾಖ್ ನಲ್ಲಿ ಸೇರಿಕೊಳ್ಳಲಿದ್ದಾರೆ…

 

 

Tags

Related Articles