ಸುದ್ದಿಗಳು

“ನಮ್ಮ ಗುರಿ ವಿಧಾನಸಭಾ ಚುನಾವಣೆಗಳು, ನನ್ನ ಬೆಂಬಲ ಯಾವುದೇ ಪಕ್ಷಕ್ಕೆ ಅಲ್ಲ”: ಸೂಪರ್ಸ್ಟಾರ್

ಚೆನ್ನೈ,ಫೆ.17:

ನಟ ಹಾಗೂ ರಾಜಕಾರಣಿ ‘ಸೂಪರ್​ ಸ್ಟಾರ್​’  ರಜನಿಕಾಂತ್​  ಈಗ ಬ್ರೇಕಿಂಗ್ ನ್ಯೂಸ್ ನೀಡಿದ್ದಾರೆ. ತಾವಾಗಲೀ ತಮ್ಮ ಪಕ್ಷವಾಗಲೀ ಮುಂದಿನ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಸ್ವಷ್ಟೀಕರಣ ನೀಡಿದ್ದಾರೆ..

ನಾನು ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಹೋಗುತ್ತಿಲ್ಲ

“ನಾನು ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಹೋಗುತ್ತಿಲ್ಲ, ನಮ್ಮ ಗುರಿ  ವಿಧಾನಸಭಾ ಚುನಾವಣೆಗಳು ನನ್ನ ಬೆಂಬಲ ಯಾವುದೇ ಪಕ್ಷಕ್ಕೆ ಅಲ್ಲ, ಅಭಿಮಾನಿಗಳು ಯಾರು ಸೂಕ್ತ ಎನಿಸುತ್ತಾರೋ ಅವರಿಗೆ ಮತ ಹಾಕಲಿ,”  ಆದ್ದರಿಂದ ಯಾವುದೇ ಪಕ್ಷ ನನ್ನ ಫೋಟೋ ಅಥವಾ ಅಭಿಯಾನದಲ್ಲಿ ನನ್ನ ಉಡುಪಿನ ಲಾಂಛನವನ್ನು ಬಳಸಬಾರದು” ಎಂದು ಹೇಳಿಕೆಯಲ್ಲಿ ಅವರು ಹೇಳಿದರು.

Related image

ಡಿಸೆಂಬರ್ 2017 ರಲ್ಲಿ ರಾಜಕಾರಣಕ್ಕೆ ಪ್ರವೇಶ

ಲೋಕಸಭಾ ಚುನಾವಣೆಯಲ್ಲಿ ರಜನಿಕಾಂತ್​ ಸ್ಪರ್ಧಿಸುವುದಿಲ್ಲ ಎಂದಾದರೆ, ಯಾವುದಾದರೂ ಪಕ್ಷದ ಬೆಂಬಲಕ್ಕೆ ಅವರು ನಿಲ್ಲಲಿದ್ದಾರೆ ಎನ್ನಲಾಗಿತ್ತು. ಆದರೆ, ಅದು ಈಗ ಸುಳ್ಳಾಗಿದೆ

ರಜನಿಕಾಂತ್(68), ಡಿಸೆಂಬರ್ 2017 ರಲ್ಲಿ ರಾಜಕಾರಣಕ್ಕೆ ತಮ್ಮ ಪ್ರವೇಶವನ್ನು ಘೋಷಿಸಿದರು.. ರಜನಿಕಾಂತ್​ ಪಕ್ಷ ಸ್ಥಾಪನೆಗೆ ವೇದಿಕೆಯಾಗಿ ನಿಂತಿರುವ ‘ರಜನಿ ಮಕ್ಕಳ್​ ಮಂದ್ರಮ್’ (ಆರ್​ಎಂಎಂ)​ ಚುನಾವಣೆಗೆ ಸ್ಪರ್ಧಿಸುವ ವಿಚಾರಕ್ಕೆ ಸಂಬಂಧಿಸಿ ಸುತ್ತೋಲೆ ಹೊರಡಿಸಿದೆ.

Tags

Related Articles