ಚಿತ್ರ ವಿಮರ್ಶೆಗಳುಬಾಲ್ಕನಿಯಿಂದಸುದ್ದಿಗಳು

ಸಾಹಸಮಯ ಮನರಂಜನೆಯನ್ನು ನೀಡುವ ‘ರಾಜಣ್ಣನ ಮಗ’

ಪ್ರೇಕ್ಷಕರ ಮನ ಗೆಲ್ಲುವಲ್ಲಿ ಯಶಸ್ವಿಯಾದ ಸಿನಿಮಾ

ಬೆಂಗಳೂರು.ಮಾ.16: ಈ ಹಿಂದೆ ‘ಜಸ್ಟ್ ಮದ್ವೆಲಿ’ ಚಿತ್ರದ ಮೂಲಕ ಎಲ್ಲರ ಗಮನ ಸೆಳೆದಿದ್ದ ನಟ ಹರೀಶ್ ಜಲಗೆರೆ ಈಗ ‘ರಾಜಣ್ಣನ ಮಗ’ನಾಗಿ ಚಿತ್ರರಂಗಕ್ಕೆ ಮರಳಿ ಬಂದಿದ್ದಾರೆ. ಈ ಚಿತ್ರದ ಮೂಲಕ ಅವರು ಮತ್ತೊಮ್ಮೆ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.

ಅಂದ ಹಾಗೆ ಚಿತ್ರದ ಹೆಸರು ಕೇಳಿದರೆ ತಕ್ಷಣ ಡಾ. ರಾಜ್ ಕುಮಾರ್ ನೆನಪಾಗುತ್ತಾರೆ. ಹಾಗಂತಾ ಅವರಿಗೂ ಈ ಚಿತ್ರಕ್ಕೂ ಇಲ್ಲಿ ಯಾವುದೇ ಸಂಬಂಧವಿಲ್ಲ. ಇಲ್ಲಿ ನಾಯಕ ರಾಜಣ್ಣನ ಮಗನಾಗಿರುತ್ತಾನೆ. ಚಿತ್ರದಲ್ಲಿ ಸಾಕಷ್ಟು ಸಾಹಸಮಯ ದೃಶ್ಯಗಳಿದ್ದರೂ ಸಹ ಅಪ್ಪ-ಮಗನ ಸೆಂಟಿಮೆಂಟ್ ಮೂಲಕ ನಿರ್ದೇಶಕ ಕೋಲಾರ ಸೀನು ಪ್ರೇಕ್ಷಕರಿಗೆ ಉಣಬಡಿಸಿದ್ದಾರೆ.

ಆಕಸ್ಮಿಕವಾಗಿ ತನ್ನ ತಂದೆಯ ಮೇಲೆ ಕೈ ಮಾಡಿದ ಪ್ರಭಾವಿ ವ್ಯಕ್ತಿಯನ್ನು ಕೊಲೆ ಮಾಡಿದ ಆರೋಪ ಹೊತ್ತು ಜೈಲಿಗೆ ಹೋದ ಕಥಾ ನಾಯಕ ಗೌರಿ ಅಲಿಯಾಸ್ ಗೌರಿಶಂಕರ್ ನಿಗೆ ವ್ಯವಸ್ಥೆಯಿಂದ ಸಿಕ್ಕಿದ್ದು ರೌಡಿ ಪಟ್ಟ. ಅವನು ಜೈಲಿಂದ ಬಂದ ನಂತರ ಅವನು ರೌಡಿಯಾಗಿಯೇ ಮುಂದುವರೆಯಬೇಕಾಗುತ್ತದೆ. ಹಾಗಾದರೆ, ಮುಂದೇನು ಎಂಬುದಕ್ಕೆ ಚಿತ್ರವನ್ನು ಚಿತ್ರಮಂದಿರದಲ್ಲಿಯೇ ನೋಡಬೇಕು.

ಇನ್ನು ಚಿತ್ರದಲ್ಲಿ ನಟಿಸಿರುವ ಹರಿಶ್ ಸೇರಿದಂತೆ ಚರಣ್ ರಾಜ್ ನಟನೆಯು ಇಷ್ಟವಾಗುತ್ತದೆ. ಅವರೊಬ್ಬ ಪ್ರಾಮಾಣಿಕ ವ್ಯಾಪಾರಿಯಾಗಿ, ಕುಟುಂಬವನ್ನು ಪ್ರೀತಿಸುವ ಅಪ್ಪನಾಗಿ ಗಮನ ಸೆಳೆಯುತ್ತಾರೆ. ಇನ್ನು ನಾಯಕಿ ಅಕ್ಷತಾ ಸಹ ಗಮನ ಸೆಳೆಯುತ್ತಾರೆ. ಉಳಿದಂತೆ ರಾಜೇಶ್ ನಟರಂಗ, ಕರಿಸುಬ್ಬು, ಮೈಕೋ ನಾಗರಾಜ್, ಅರುಣಾ ಬಾಲರಾಜ್, ರಾಜೀವ್ ರೆಡ್ಡಿ ನಟನೆ ಪಾತ್ರಕ್ಕೆ ತಕ್ಕಂತಿದೆ.

ಇದೇ ರೀತಿ ಮುಂದಿನ ಸಲವೂ ಒಳ್ಳೆಯ ಅವಕಾಶಗಳು ಹರೀಶ್ ರಿಗೆ ಸಿಗಲಿ. ಅವರ ಬಾಡಿ ಲಾಂಗ್ವೇಜ್, ನಟನೆ, ಸಾಹಸಮಯ ಎಲ್ಲವೂ ಚಂದವಿದೆ. ಇನ್ನು ಸಿದ್ದಪ್ಪಾಜಿ ಸಂಭಾಷಣೆ, ಪ್ರಮೋದ್ ಛಾಯಾಗ್ರಹಣ ಹಾಗೂ ರವಿ ಬಸ್ರೂರು ಸಂಗೀತ.. ಈ ಚಿತ್ರವನ್ನು ನೋಡುವಂತೆ ಮಾಡುತ್ತದೆ.

ಮತ್ತೆ ಸಿನಿಮಾ ಮಾಡಲಿರುವ ‘ಸ್ವಯಂಕೃಷಿ’ ವೀರೇಂದ್ರ

#rajannanamaga, #filmreviews, #balkaninews #filmnews, #kannadasuddigalu, #harishjalagere, #akshatha

Tags