ಸುದ್ದಿಗಳು

ರಾಜೀವ’ ಸಿನಿಮಾ ಪೋಸ್ಟರ್ ಬಿಡುಗಡೆ…

‘ಬಂಗಾರದ ಮನುಷ್ಯ’ ಚಿತ್ರದ ನಾಯಕನ ಹೆಸರು ನೆನಪಾಗುವುದು ಸಹಜ

ಬೆಂಗಳೂರು,ಡಿ.9: ಮಯೂರ್ ಪಟೇಲ್ ನಾಯಕರಾಗಿರುವ ಹೊಸ ಚಿತ್ರ ‘ರಾಜೀವ’ದ ಪೋಸ್ಟರ್  ಬಿಡುಗಡೆಯಾಗಿದೆ.ರಾಜೀವ ಎನ್ನುವ ಹೆಸರು ಕೇಳಿದಾಕ್ಷಣ ‘ಬಂಗಾರದ ಮನುಷ್ಯ’ ಚಿತ್ರದ ನಾಯಕನ ಹೆಸರು ನೆನಪಾಗುವುದು ಸಹಜ. ಈ ಚಿತ್ರದಲ್ಲಿ ಕೂಡ ನಾಯಕ ರೈತ ಎನ್ನುವುದು ಅದಕ್ಕೆ ಪೂರಕವಾದ ಅಂಶ.

ಚಿತ್ರದ ನಿರ್ಮಾಪಕ ರಮೇಶ್ ಮಾತನಾಡಿ’ಯುವಕರು ಬೇರೆ ಬೇರೆ ಕೆಲಸಗಳನ್ನು ಆಯ್ಕೆ ಮಾಡಿಕೊಂಡು ಬೇರೆಯದರ ಹಿಂದೆ ಓಡುತ್ತಾರೆ. ಆದರೆ ರೈತವೃತ್ತಿಗೆ ಮರಳುವುದು ಎಷ್ಟು ಮುಖ್ಯವಾಗಿದೆ ಎನ್ನುವುದನ್ನು ಚಿತ್ರದ ಮೂಲಕ ತೋರಿಸಲಾಗಿದೆ’ ಎಂದರು.

ರೈತರ ಕಷ್ಟನಷ್ಟಗಳಕುರಿತಾದ  ಸಿನಿಮಾ

ನಿರ್ದೇಶಕ ಫೈಕಿಂಗ್ ಮಂಜು ನಿರ್ಮಾಪಕರು ತಮ್ಮ  ಮರ್ಮಾಂಗ ಕಿರುಚಿತ್ರ ನೋಡಿ ಅವರೇ ಚಾನ್ಸ್ ಕೊಟ್ಟಿದ್ದಾಗಿ ಹೇಳಿದರು. ಇದು ಹಳ್ಳಿಯಲ್ಲಿ ನಡೆಯುವ ರೈತರ ಕಷ್ಟನಷ್ಟಗಳ ‌ಕುರಿತಾದ  ಸಿನಿಮಾ ಎಂದು ಅವರು ತಿಳಿಸಿದರು.

ಚಿತ್ರದ ಪ್ರಮುಖ ಎಳೆ

ಚಿತ್ರದ ನಾಯಕ ಮಯೂರ್ ಪಟೇಲ್ ತಾವು ತಂದೆ ಮತ್ತು ಮಗನಾಗಿ ದ್ವಿಪಾತ್ರದಲ್ಲಿ ನಟಿಸಿರುವುದಾಗಿ ಹೇಳಿದರು. ರೈತ ತಂದೆಯ ಸಾವಿನ ನಂತರ ಆತನ ಪುತ್ರ ಏನೆಲ್ಲ ಮಾಡುತ್ತಾನೆ ಎನ್ನುವುದೇ ಚಿತ್ರದ ಪ್ರಮುಖ ಎಳೆ ಎಂದು ಅವರು ತಿಳಿಸಿದರು. ರೈತ ಸಂಘದ‌ ಅಧ್ಯಕ್ಷರಾದ ಕೋಡಿಹಳ್ಳಿ ಚಂದ್ರಶೇಖರ್ ಚಿತ್ರದ ಆಡಿಯೋ ಬಿಡುಗಡೆಗೊಳಿಸಿ ಶುಭ ಹಾರೈಸಿದ್ದು ಕಾರ್ಯಕ್ರಮದ ವಿಶೇಷತೆಯಾಗಿತ್ತು.

 

Tags