ಸುದ್ದಿಗಳು

ಕಲೈಘ್ನಾರ್ ಆರೋಗ್ಯಕ್ಕೆ ತಲೈವಾ ಪ್ರಾರ್ಥನೆ

ಚೆನ್ನೈ, ಆ.01: ತಮಿಳು ಚಿತ್ರರಂಗದ ಸೂಪರ್ ಸ್ಟಾರ್  ಮತ್ತು ಇತ್ತೀಚಿನ ರಾಜಕಾರಣಿ ರಜನಿಕಾಂತ್ ಅವರು ನಿನ್ನೆ, ಮಂಗಳವಾರ ರಾತ್ರಿ ಕಾವೇರಿ ಆಸ್ಪತ್ರೆಗೆ ಭೇಟಿ ನೀಡಿ, ‘ದ್ರಾವಿಡ ಮುನ್ನೇತ್ರ ಕಳಗಂ’ (ಡಿಎಂಕೆ) ಮುಖ್ಯಸ್ಥ ಎಂ.ಕರುಣಾನಿಧಿಯವರ ಆರೋಗ್ಯದ ಬಗ್ಗೆ ವಿಚಾರಿಸಿದ್ದಾರೆ.

ಹಲವು ನಾಯಕರಿಂದ ಪ್ರಾರ್ಥನೆ 

ಅಲ್ಲಿನ ರಾಜಕೀಯ ಹಿರಿಯ ಮುಖಂಡ, ಚಿತ್ರರಂಗ ಕಂಡ ಅದ್ಬುತ ಕವಿ ಕರುಣಾನಿಧಿಯವರು ತೀವ್ರ ರಕ್ತದೊತ್ತಡದ  ಹಿನ್ನೆಲೆಯಲ್ಲಿ ಚೆನ್ನೈನ ಕಾವೇರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.  ರಜಿನಿಯವರು, ಮಂಗಳವಾರ ಆಸ್ಪತ್ರೆಗೆ ಭೇಟಿ ನೀಡಿ ಮಗ ಸ್ಟಾಲಿನ್ ಅವರ ಜೊತೆ ಕರುಣಾನಿಧಿಯವರ ಆರೋಗ್ಯದ ಕುರಿತು ವಿಚಾರಿಸಿದ್ದಾರೆ. ಜೊತೆಗೆ ಅವರ ಶೀಘ್ರ ಚೇತರಿಕೆಗೋಸ್ಕರ ದೇವರಲ್ಲಿ ಪ್ರಾರ್ಥಿಸಿದ್ದಾರೆ ಎಂದು ತಿಳಿಸಲಾಗಿದೆ.

ಜುಲೈ 27 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಸೇರಿದಂತೆ ಹಲವು ರಾಜಕೀಯ ಮುಖಂಡರು ಕೂಡಾ ಕರುಣಾನಿಧಿಯವರ ಅನಾರೋಗ್ಯದ ಕುರಿತು ವಿಚಾರಿಸಿದ್ದಾರೆ.

Tags