ಸುದ್ದಿಗಳು

ಐದನೇ ತರಗತಿ ಶಾಲಾ ಮಕ್ಕಳ ಪಠ್ಯಪುಸ್ತಕದಲ್ಲಿ ರಜಿನಿಕಾಂತ್ ಜೀವನಗಾಥೆ..!!?!!

ಕಾಲಿವುಡ್ ಸೂಪರ್ ಸ್ಟಾರ್ ರಜಿನಿಕಾಂತ್ ಸಿನಿಮಾ ರಂಗಕ್ಕೆ ಬಂದು ಬಹಳಷ್ಟು ವರ್ಷಗಳೇ ಕಳೆದಿದ್ದು. ವಿಭಿನ್ನ ಕಥೆಗಳ್ಳುಳ್ಳ ಸಿನಿಮಾಗಳನ್ನು ಮಾಡುತ್ತಾ ಜನಮನ ಗೆದ್ದ ಈ ನಟ ಇಂದಿಗೂ ಎನರ್ಜೆಟಿಕ್ ಆಗಿಯೇ ನಟನೆಯಲ್ಲಿ ಮುಂದುವರೆದಿದ್ದಾರೆ. ಅಷ್ಟೇ ಅಲ್ಲ ಅನೇಕ ವಿಭಿನ್ನ ಪಾತ್ರಗಳನ್ನು ಮಾಡ್ತಿರುವ ಈ ನಟ ಅನೇಕ ಸಾಮಾಜಿಕ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುತ್ತಾರೆ. ಸದ್ಯ ಈ ನಟನ ಹಿಂದಿನ ಕಷ್ಟಗಳನ್ನು ನೆನೆದುಕೊಂಡರೆ ಎಂಥವರಿಗೂ ಕಣ್ಣೀರು ಬರುವಂತಿದೆ.

ಪಠ್ಯದಲ್ಲಿಯೂ ರಜಿನಿ ದರ್ಬಾರ್

ಸದ್ಯ ದರ್ಬಾರ್ ಸಿನಿಮಾದಲ್ಲಿ ಬ್ಯುಸಿಯಾಗಿರುವ ಈ ನಟನ ಬಗ್ಗೆ ಸುದ್ದಿಯೊಂದು ಹೊರಬಿದ್ದಿದೆ. ಈ ನಟನ ಜೀವನಕಥೆ ಇನ್ಮುಂದೆ ಪಠ್ಯದಲ್ಲಿ ಬರಲಿದೆಯಂತೆ. ತಮಿಳುನಾಡಿನಲ್ಲಿ ಇನ್ಮುಂದೆ ಶಾಲಾಮಕ್ಕಳಿಗೆ ರಜನಿಕಾಂತ್​ ಜೀವನ ಪಠ್ಯವಾಗಲಿದೆ ಎಂಬ ಮಾಹಿತಿ ಹೊರ ಬಿದ್ದಿದೆ. ರಜನಿಕಾಂತ್ ಜೀವನ ಮತ್ತು ಸಾಧನೆ ಕುರಿತಂತೆ 5ನೇ ತರಗತಿಯ ಶಾಲಾ ಮಕ್ಕಳ ಪಠ್ಯಕ್ರಮದಲ್ಲಿ ಸೇರಿಸಲು ತಮಿಳುನಾಡಿನ ಶಿಕ್ಷಣ ಇಲಾಖೆ ನಿರ್ಧರಿಸಿದೆಯಂತೆ. ಹೀಗೊಂದು ಸುದ್ದಿ ವರದಿಗಳಾಗಿವೆ.

ಐದನೇ ತರಗತಿ ವಿದ್ಯಾರ್ಥಿಗಳಿಗೆ ರಜಿನಿ ಜೀವನ ಪಾಠ

ಬಡತನದಲ್ಲೇ ಹುಟ್ಟಿ ಬೆಳೆದ ರಜಿನಿಕಾಂತ್ ಬಹಳಷ್ಟು ಕಷ್ಟಗಳನ್ನು ಮೆಟ್ಟಿಕೊಂಡು ಸಾಧನೆ ಮಾಡಿದ್ದಾರೆ. ಅವರ ಬದುಕು, ವೃತ್ತಿ ಜೀವನ ,ಸಾಧನೆ ಅವರ ಕಠಿಣ ಪರಿಶ್ರಮ ಸಾಧನೆಯ ಹಾದಿಯನ್ನು ತಿಳಿಸುವ ಸಲುವಾಗಿ 5ನೇ ತರಗತಿಯ ಮಕ್ಕಳ ಪಠ್ಯಕ್ರಮದಲ್ಲಿ Rags to Riches stories ಎಂಬ ಶೀರ್ಷಿಕೆಯಲ್ಲಿ ಪಠ್ಯ ಬರೆಯಲಾಗುತ್ತಿದೆಯಂತೆ. ಆದರೆ ಇನ್ನೂ ಇಲಾಖೆ ಇದನ್ನು ಅಧಿಕೃತ ಮಾಡಿಲ್ಲ. ಸದ್ಯ ಬಹಳಷ್ಟು ಮಂದಿಗೆ ಮಾಧರಿಯಾಗಿರುವ ಈ ನಟನ ಜೀವನ ಇನ್ಮುಂದೆ ಪಠ್ಯದಲ್ಲಿ ಬರುತ್ತಿದೆ ಎಂಬುದು ಅಭಿಮಾನಿಗಳಲ್ಲಿ ಖುಷಿ ಮೂಡಿಸಿದೆ.

Image result for Rajinikanth life story in school textbook .. !!? !!

ಕನ್ನಡಕ್ಕೆ ರಿಮೇಕ್ ಆಗಿರುವ ಪರಭಾಷಾ ಧಾರಾವಾಹಿಗಳು!!

#balkaninews #kollywood #kollywoodsuperstarrajinikanth #rajinikanthmovies #rajinnikanthlifestory

Tags