ಸುದ್ದಿಗಳು

ರಜಿನಿಕಾಂತ್ ಸುಮಲತಾ ಪರ ಪ್ರಚಾರಕ್ಕೆ ಬರಲ್ಲ..!

ಬೆಂಗಳೂರು, ಏ.16:

ಮಂಡ್ಯ ಲೋಕಸಭಾ ಚುನಾವಣೆಯ ಕಾವು ಜೋರಾಗಿದೆ. ಇಂದು ಬಹಿರಂಗ ಪ್ರಚಾರಕ್ಕೆ ಕೊನೆಯ ದಿನ. ಕೊನೆಯ ದಿನವಾಗಿರೋದ್ರಿಂದ ಅಬ್ಬರದ ಪ್ರಚಾರ ಎಲ್ಲೆಡೆ ನಡೆಯುತ್ತಿದೆ. ಈಗಾಗಲೇ ಅಭ್ಯರ್ಥಿಗಳು ಕೂಡ ರಸ್ತೆಗಿಳಿದು ಇವತ್ತೊಂದು ದಿನ ಪ್ರಚಾರ ಮಾಡುತ್ತಿದ್ದಾರೆ. ಇಂದು ಕೊನೆಯ ದಿನ ಆಗಿರೋದ್ರಿಂದ ರಜಿನಿಕಾಂತ್ ಸುಮಲತ ಪರ ಪ್ರಚಾರ ಮಾಡುತ್ತಾರೆ ಎನ್ನಲಾಗಿತ್ತು. ಆದರೆ ಇದೀಗ ರಜಿನಿ ಪ್ರಚಾರಕ್ಕೆ ಬರಲ್ಲವಂತೆ.

ರಜಿನಿ ಪ್ರಚಾರಕ್ಕೆ ನೋ ಕಮ್ಮಿಂಗ್

ಬಾರೀ ಜಿದ್ದಾ ಜಿದ್ದಿನ ಕ್ಷೇತ್ರ. ಇಡೀ ರಾಜ್ಯದ ಚಿತ್ತವೇ ಹರಿಸಿರುವ ಮಂಡ್ಯ ಕ್ಷೇತ್ರದಲ್ಲಿ ಈಗಾಗಲೇ ಅಬ್ಬರದ ಪ್ರಚಾರ ಜೋರಾಗಿದೆ. ಇನ್ನೂ ಈಗಾಗಲೇ ಜೋಡೆತ್ತುಗಳ ಪ್ರಚಾರ ಹಾಗೂ ಮಂಡ್ಯ ಸೊಸೆಯ ಪ್ರಚಾರ ಜೋರಾಗಿ ನಡೆಯುತ್ತಿದೆ. ಇಂದು ಬಹಿರಂಗ ಪ್ರಚಾರಕ್ಕೆ ಕೊನೆಯ ದಿನ. ಇಂದು ರಜಿನಿಕಾಂತ್ ಸುಮಲತ ಪರ ಪ್ರಚಾರಕ್ಕೆ ಬರ್ತಾರೆ ಅಂತಾ ಹೇಳಲಾಗಿತ್ತು. ಆದರೆ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ ಸುಮಲತ.

ಸಮಾವೇಶಕ್ಕೆ ರಜಿನಿಕಾಂತ್ ಬರುವುದಿಲ್ಲ

ಹೌದು, ರಜಿನಿಕಾಂತ್ ಚುನಾವಣಾ ಪ್ರಚಾರಕ್ಕೆ ಆಗಮಿಸುವುದಿಲ್ಲ. ಅವರನ್ನು ನಾನು ಸಂಪರ್ಕ ಮಾಡಿಲ್ಲ. ಇಂದು ನಡೆಯುವ ಸಮಾವೇಶದಲ್ಲಿ ದರ್ಶನ್ ಯಶ್ ನಾನು ಇರುತ್ತೇವೆ. ಸಮಾವೇಶಕ್ಕೆ ರಜಿನಿಕಾಂತ್ ಬರುವುದಿಲ್ಲ ಎಂದು ಹೇಳಿದ್ದಾರೆ. ಈ ಮೂಲಕ ರಜಿನಿಕಾಂತ್ ಬರುತ್ತಾರೆಂಬ ಲೆಕ್ಕಾಚಾರಕ್ಕೆ ಸುಮಲತ ಫುಲ್ ಸ್ಟಾಪ್ ನೀಡಿದ್ದಾರೆ.

ಮೈಸೂರಿನಲ್ಲಿ ಶ್ರೀ ಮುರುಳಿ- ಶ್ರೀ ಲೀಲಾ ಡ್ಯೂಯೆಟ್

#rajinikanth #balkaninews #sumalatha #sumalathamandyapolitics #rajinikanth

Tags