ಸುದ್ದಿಗಳು

ರಜನಿಕಾಂತ್ ಪುತ್ರಿಯ ಅದ್ದೂರಿ ಆರತಾಕ್ಷತೆ

ಚೆನೈ, ಫೆ.09:

ತಲೈವಾ ರಜಿನಿ ಮನೆಯಲ್ಲಿ ಮತ್ತೆ ಮಂಗಳ ವಾದ್ಯ ಮೊಳಗುತ್ತಿದೆ. ಮಗಳು ಸೌಂದರ್ಯರ ಎರಡನೇ ಮದುವೆ ಸಮಾರಂಭ ಜೋರಾಗಿಯೇ ನಡೆಯುತ್ತಿದೆ. 2017ರಲ್ಲಿ ಮೊದಲನೇ ಪತಿಯಿಂದ ವಿಚ್ಛೇಧನ ಪಡೆದಿದ್ದ ಸೌಂದರ್ಯ ಈಗ ಮತ್ತೆ ಎರಡನೇ ಮದುವೆಯಾಗುತ್ತಿದ್ದಾರೆ. ಇದೀಗ ಇವರ ಮದುವೆಯ ಆರತಾಕ್ಷತೆ ಕಾರ್ಯಕ್ರಮ ನಿನ್ನೆ ಸಂಜೆ ಅದ್ಧೂರಿಯಾಗಿ ನಡೆದಿದೆ.

ಅದ್ದೂರಿಯಾಗಿ ನಡೆದ ಸೌಂದರ್ಯ ಆರತಾಕ್ಷತೆ

ರಜಿನಿಕಾಂತ್  ಮಗಳು ಸೌಂದರ್ಯ, ವಿಷಗನ್ ವನಂಗಮುಡಿ ಜೊತೆ ಸಪ್ತಪದಿ ತುಳಿಯೋಕೆ ಸಜ್ಜಾಗಿದ್ದಾರೆ. ಇದೇ ತಿಂಗಳು 11 ರಂದು ಸೌಂದರ್ಯಾ ರಜಿನಿಕಾಂತ್ ಹಾಗೂ ವಿಷಗನ್ ಕಲ್ಯಾಣ ನಡೆಯಲಿದೆ. ಇಬ್ಬರಿಗೂ ಇದು ಎರಡನೇ ಮದುವೆ ಅನ್ನೋದು ವಿಶೇಷ. ಇದೀಗ ಇವರ ಆರತಾಕ್ಷತೆ ರಾಘವೇಂದ್ರ ಕಲ್ಯಾಣ ಮಂಟಪದಲ್ಲಿ ನಡೆದಿದೆ.

ರೇಷ್ಮೆ ಸೀರೆಯಲ್ಲಿ ಮಿಂಚಿದ ಸೌಂದರ್ಯ

ಇನ್ನು ಈ ಕಾರ್ಯಕ್ರಮದಲ್ಲಿ ರಾಜಕೀಯ ಗಣ್ಯರು ಹಾಗೂ ಸಿನಿಮಾ ಮಂದಿ ಭಾಗಿಯಾಗಿದ್ದರು. ಇನ್ನು ಸೌಂದರ್ಯ ನೀಲಿ ಹಾಗೂ ಗೋಲ್ಡ್ ಬಣ್ಣದ ಸೀರೆಯಲ್ಲಿ ಮಿಂಚಿದ್ರೆ, ಮದುಮಗ ಬಿಳಿ ಹಾಗೂ ರೇಷ್ಮೆ ಪಂಚೆಯಲ್ಲಿ ಮಿಂಚಿದರು. ಇನ್ನು ರಜಿನಿ ಈ ಮದುವೆಯಲ್ಲಿ ತುಂಬಾ ಸರಳವಾಗಿ ಬಿಳಿಯ ಜುಬ್ಬಾ ಪೈಜಾಮ್ ಹಾಕಿದ್ದರು.

ರಜಿನಿಕಾಂತ್ ಆಕ್ಟ್ ಮಾಡೋದು ಸಾಕು ಎಂದ ರಜಿನಿ ಪುತ್ರಿ !

#kollywood #soundarya #rajinikanthseconddaughtersoundaryawedding #balkaninews #soundaryarajinikanthdaughtermarriage

Tags