ಸುದ್ದಿಗಳು

ಮಗಳ ಮದುವೆಯಲ್ಲಿ ಕುಣಿದು ಕುಪ್ಪಳಿಸಿದ ರಜನಿಕಾಂತ್

ಚೆನೈ, ಫೆ.11:

ಸೂಪರ್ ಸ್ಟಾರ್ ರಜನಿಕಾಂತ್ ಅವರ ಪುತ್ರಿ ಸೌಂದರ್ಯ ರಜನಿಕಾಂತ್ ಅವರ ವಿವಾಹ ಸಮಾರಂಭ ಇತ್ತೀಚೆಗೆ ಚೆನ್ನೈನ ಎಂ ಆರ್ ಸಿ ನಗರದಲ್ಲಿರುವ ಲೀಲಾ ಪ್ಯಾಲೇಸ್ ಹೋಟೆಲ್ ನಲ್ಲಿ ಅದ್ದೂರಿಯಾಗಿ ನೆರವೇರಿತು. ನಟ ಹಾಗೂ ಉದ್ಯಮಿ ವಿಶಾಕನ್ ವಾನಂಗಮುಡಿಯವರೊಂದಿಗೆ ಸಪ್ತಪದಿ ತುಳಿದ ಸೌಂದರ್ಯ ಅವರ ವಿವಾಹ ಕಾರ್ಯಕ್ರಮಕ್ಕೆ ಸಿನಿಮಾರಂಗದ ಗಣ್ಯರು ಸೇರಿದಂತೆ ಗಣ್ಯಾತಿಗಣ್ಯರು ಭಾಗವಹಿಸಿ ವಧುವರರಿಗೆ ಶುಭಕೋರಿದರು.

ವಧು ಡಿಸೈನರ್ ಅಬುಜಾನಿ ಸಂದೀಪ್ ಖೋಸ್ಲಾ ವಿನ್ಯಾಸದ ಸೀರೆಯಲ್ಲಿ ಕಂಗೊಳಿಸಿದರೆ. ರಜನಿಕಾಂತ್ ಅವರು ಪಂಚೆ ಹಾಗೂ ಶರ್ಟ್ ಧರಿಸಿ ಕಂಗೊಳಿಸುತ್ತಿದ್ದರು. ಬಂದವರನ್ನು ಉಪಚರಿಸುತ್ತಾ, ಜವಾಬ್ದಾರಿ ನಿರ್ವಹಿಸುತ್ತಿದ್ದರು ರಜನಿಕಾಂತ್. ಮದುವೆ ಮನೆಯಲ್ಲಿ ಮಾಡಿದ ಡಾನ್ಸ್ ವಿಡಿಯೋ ಇದೀಗ ವೈರಲ್  ಆಗಿದೆ.

ಮೆಹಂದಿ ಹಾಗೂ ಸಂಗೀತ ಕಾರ್ಯಕ್ರಮದಲ್ಲಿ ರಜನಿ ಡಾನ್ಸ್

ಸೌಂದರ್ಯ ರಜನಿಕಾಂತ್ ವಿವಾಹ ಸಮಾರಂಭದ ಮೆಹಂದಿ ಹಾಗೂ ಸಂಗೀತ ಕಾರ್ಯಕ್ರಮದಲ್ಲಿ ರಜನಿಕಾಂತ್ ಕುಣಿದು ಕುಪ್ಪಳಿಸಿದ್ದು ಅವರ ನೃತ್ಯದ ವಿಡಿಯೋ ಇದೀಗ ವೈರಲ್ ಆಗಿದೆ.  ಒರುವ್ ಒರುವನ್ ಮುದಲೈ ಎಂಬ ಸೂಪರ್ ಹಿಟ್ ಹಾಡಿಗೆ ಅವರು ಹೆಜ್ಜೆ ಹಾಕಿದ್ದು. ಈ ಹಾಡು ಬ್ಲಾಗ್ ಬಸ್ಟರ್ ಸಿನಿಮಾ ಮುತ್ತುವಿನ ಹಾಡಾಗಿದೆ.  ಶುಕ್ರವಾರ ಚೆನ್ನೈನ ನಿವಾಸದಲ್ಲಿ ಸೌಂದರ್ಯ ಅವರ ಪ್ರೀ ವೆಡ್ಡಿಂಗ್ ರಿಸೆಪ್ಷನ್ ನೆರವೇರಿತ್ತು.

ಚೆನ್ನೈನಲ್ಲಿರುವ ರಾಘವೇಂದ್ರ ಕಲ್ಯಾಣ ಮಂಟಪದಲ್ಲಿ ನಡೆದ ಈ ಕಾರ್ಯಕ್ರಮಕ್ಕೆ ಕುಟುಂಬ ಸದಸ್ಯರು, ಬಂಧುಮಿತ್ರರನ್ನು ಆಹ್ವಾನಿಸಲಾಗಿತ್ತು. ಅಂದಹಾಗೆ ರಜನಿಕಾಂತ್ ಮಗಳು ಸೌಂದರ್ಯಗೆ ಇದು  ಎರಡನೇ ಮದುವೆಯ ಮಧುಮಗ ವಿಶಾಖನ್ ಗೂ ಇದು ಎರಡನೇ ಮದುವೆಯ ಮ್ಯಾಗಜಿನ್ ಒಂದರ ಸಂಪಾದಕಿ ಕನಿಖಾ ಕುಮಾರನ್ ಅವರನ್ನು ವಿಶಾಕನ್ ಮದುವೆಯಾಗಿ ವಿಚ್ಛೇದನ ಪಡೆದಿದ್ದರು. ಸೌಂದರ್ಯ ಕೂಡ ಉದ್ಯಮಿ ಅಶ್ವಿನ್ ಅವರನ್ನು ವರಿಸಿದ್ದರು. ಭಿನ್ನಭಿಪ್ರಾಯಗಳ ಕಾರಣ ಇವರಿಬ್ಬರು 2017ರಲ್ಲಿ ದೂರವಾದರು.

ರಜನಿಕಾಂತ್ ಪುತ್ರಿಯ ಅದ್ದೂರಿ ಆರತಾಕ್ಷತೆ

#rajinikanth #rajinikanthdaughterwedding #soundaryarajinikanthwedding #balkaninews

Tags