ಸುದ್ದಿಗಳು

ವಿಧಾನಸಭಾ ಚುನಾವಣೆಗೆ ರಜಿನಿಕಾಂತ್ ಸ್ಪರ್ಧೆ…!!?!!

ಚೆನೈ, ಏ.20:

ರಜಿನಿಕಾಂತ್ ಚುನಾವಣೆಗೆ ಬರುತ್ತಾರೆಂಬ ವಿಚಾರ ಹಳೆಯದಾದರೂ ಊಹಾ ಪೋಹದಲ್ಲಿಯೇ ಇತ್ತು. ತಲೈವಾ ಅಭಿಮಾನಿಗಳು ಇವರ ರಾಜಕೀಯ ಜೀವನ ನೋಡಲು ಕಾತುರರಾಗಿದ್ದರೂ ಕೂಡ ತಲೈವಾ ಈ ಬಗ್ಗೆ ಅಷ್ಟಾಗಿ ತಲೆಕೆಡಿಸಿಕೊಂಡಿರಲಿಲ್ಲ. ಆದರೆ ಇದೀಗ ತಲೈವಾ ಅಭಿಮಾನಿಗಳಿಗೊಂದು ಸಿಹಿ ಸುದ್ದಿ ನೀಡಿದ್ದಾರೆ ರಜಿನಿಕಾಂತ್.

ಅಭಿಮಾನಿಗಳಿಗೆ ನಿರಾಸೆ ಮಾಡಲು ಇಷ್ಟವಿಲ್ಲ

ಹೌದು, ನಿನ್ನೆಯಷ್ಟೆ ಈ ನಟ ಚೆನ್ನೈನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ್ದಾರೆ. ತಮಿಳುನಾಡು ಚುನಾವಣೆ ಯಾವಾಗ ಘೋಷಣೆಯಾದರೂ ತಾವು ಸ್ಪರ್ಧಿಸೋಕೆ ಸಿದ್ಧ. ಈಗಾಗಲೇ ಅಭಿಮಾನಿಗಳು ಬಹಳಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಇನ್ನೂ ಅಭಿಮಾನಿಗಳಿಗೆ ನಿರಾಸೆ ಮಾಡುವುದಿಲ್ಲವೆಂದು ಹೇಳುವ ಮೂಲಕ ತಾವು ಚುನಾವಣೆಗೆ ಸ್ಪರ್ಧೆ ಮಾಡುತ್ತೇವೆ ಎಂದಿದ್ದಾರೆ.

ವರ್ಷಾಂತ್ಯಕ್ಕೆ ಚುನಾವಣೆ..?

ಸದ್ಯ ತಮಿಳುನಾಡಿನ 18 ಕ್ಷೇತ್ರಗಳಿಗೆ ಏಪ್ರಿಲ್ 18ರಂದು ಬೈ ಎಲೆಕ್ಷನ್ ನಡೆದಿದೆ. ಮೇ 23ಕ್ಕೆ ಫಲಿತಾಂಶ ಬರಲಿದೆ. ಉಳಿದಂತೆ ಏನಾದರೂ ಸರ್ಕಾರ ವಿಸರ್ಜನೆಯಾದರೆ ತಮಿಳುನಾಡಿನಲ್ಲಿ ಈ ವರ್ಷಾಂತ್ಯಕ್ಕೆ ಎಲೆಕ್ಷನ್ ನಡೆಯಬಹುದು ಎಂಬ ಚರ್ಚೆ ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿವೆ. ಹಾಗೇನಾದ್ರೂ ಆದರೆ ಡಿಸೆಂಬರ್ ನಲ್ಲಿಯೇ ರಜಿನಿ ಸ್ಪರ್ಧೆ ಮಾಡುತ್ತಾರೆ ಎಂದು ವರದಿಗಳಾಗಿವೆ.

ಫಲಿತಾಂಶಕ್ಕೂ ಮೊದಲೇ ನಿಖಿಲ್ ಸಂಸದ..!!?!!

#rajinikanth #rajinikanthpolitics #chennai #kollywood #tamilmovies

Tags