ಸುದ್ದಿಗಳು

ಡಾ. ರಾಜ್ ಹಾಗೂ ಡಾ. ವಿಷ್ಣು, ಅಭಿಮಾನಿಗಳಿಗೆ ಬರೆದಿದ್ದ ಅಪರೂಪದ ಪತ್ರ ಇಲ್ಲಿದೆ

ಸಿನಿಮಾ ಅಭಿಮಾನಿಗಳು ತಮ್ಮ ಮೆಚ್ಚಿನ ಕಲಾವಿದರಿಗೆ ಪತ್ರಗಳನ್ನು ಬರೆಯುತ್ತಿದ್ದ ಕಾಲವದು. ಆಗ ಅಭಿಮಾನಿಯೊಬ್ಬರು ತಮ್ಮ ಮೆಚ್ಚಿನ ಕಲಾವಿದರಾದ ಡಾ. ರಾಜ್ ಕುಮಾರ್ ಹಾಗೂ ಡಾ. ವಿಷ್ಣುವರ್ಧನ್ ಅವರಿಗೆ ಪತ್ರಗಳನ್ನು ಬರೆದಿದ್ದಾರೆ. ಅವರೂ ಸಹ ಪತ್ರಗಳಿಗೆ ಪ್ರತಿ ಉತ್ತರವನ್ನು ಬರೆದಿದ್ದಾರೆ. ಇದೀಗ ಈ ಪತ್ರಗಳನ್ನು ನಟ ಜಗ್ಗೇಶ್ ಅವರು ತಮ್ಮ ಟ್ವಿಟರ್ ನಲ್ಲಿ ಹಾಕಿಕೊಂಡು ಸಂತೋಷ ವ್ಯಕ್ತಪಡಿಸಿದ್ದಾರೆ.

ಡಾ. ರಾಜ್ ಕುಮಾರ್

ನಟ ಸಾರ್ವಭೌಮ, ರಸಿಕರ ರಾಜ ,ವರನಟ ಡಾ. ಡಾ.ರಾಜ್​​​ಕುಮಾರ್ ಅವರು ಮೂರನೇ ಕ್ಲಾಸ್ ಮಾತ್ರ ಓದಿದ್ದರು. ಆದರೂ ಅವರ ನಟನೆ, ಗಾಂಭೀರ್ಯ, ಹಾಡುಗಾರಿಕೆ, ಸರಳತೆ ಎಲ್ಲವೂ ರಾಜ್ ಕುಮಾರ್ ಅವರಿಗೆ ರಾಜ್ ಕುಮಾರ್ ಅವರೇ ಸಾಟಿ.

ಡಾ. ವಿಷ್ಣುವರ್ಧನ್

ಡಾ. ರಾಜ್ ಅವರಂತೆಯೇ ಮತ್ತೊಬ್ಬ ಪ್ರತಿಭಾನ್ವಿತ ನಟರೆಂದರೆ ಅವರು ಡಾ. ವಿಷ್ಣುವರ್ಧನ್. ನಟಿಸಿದ ಮೊದಲ ಚಿತ್ರ ನಾಗರಹಾವಿನಿಂದ ಹಿಡಿದು, ಕೊನೆಯ ಚಿತ್ರ ‘ಆಪ್ತರಕ್ಷಕ’ ವರೆಗೂ ಸಿನಿ ಪ್ರೇಕ್ಷಕರನ್ನು ತಮ್ಮ ಅಭಿನಯದಿಂದ ರಂಜಿಸಿದ್ದಾರೆ.

ನವರಸ ನಾಯಕ ಜಗ್ಗೇಶ್

ನಟ ನವರಸ ನಾಯಕ ಜಗ್ಗೇಶ್ ಅವರು ತಮ್ಮ ಟ್ವಿಟ್ಟರ್ ​​​ನಲ್ಲಿ ಡಾ. ರಾಜ್ ಅವರು ಬರೆದಿದ್ದ ಪತ್ರಗಳನ್ನುಪೋಸ್ಟ್ ಮಾಡಿದ್ದಾರೆ. ಜೊತೆಗೆ ಅವರ ಅಭಿಮಾನಿಯೊಬ್ಬರು, ಡಾ. ವಿಷ್ಣುವರ್ಧನ್ ಅವರು ಬರೆದಿದ್ದ ಪತ್ರವೊಂದನ್ನು ಅವರಿಗೆ ‘ರೀ ಪೋಸ್ಟ್’ ನೀಡಿದ್ದಾರೆ. ಹೀಗಾಗಿ ಈ ಎರಡೂ ಪತ್ರಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ನೋಡುಗರಿಂದ ಮೆಚ್ಚುಗೆಗೆ ಪಾತ್ರವಾಗಿವೆ.

​​ ‘ ಅಭಿಮಾನಿಗಳಲ್ಲಿ ದೇವರನ್ನ ಕಂಡ ದೇವರಮಗ ರಾಜಣ್ಣ.. ಆ ದೇವರಿಗೆ ಪ್ರೀತಿಯಿಂದ ಬರೆದ ಅಭಿಮಾನದ ಪತ್ರ..ಮುತ್ತು ಪೋಣಿಸಿದ ರೀತಿಯ ಕೈಬರಹ ಅವರ ಮುತ್ತಿನಂತ ಮನದ ಪ್ರತೀಕ..ಯತಃಮನಃತಥಃಬರವಣಿಗೆ..ಇಂಥ ಮಾನಸಿಕ ಗುರು ಪಡೆದ ನಾವೇ ಧನ್ಯ..ಭಾವುಕನಾದೆ ಈ ಪತ್ರ ನೋಡಿ’ ಎಂದು ಬರೆದಿದ್ದಾರೆ ಜಗ್ಗೇಶ್​.

ಡಾ.ರಾಜ್ ಮತ್ತು ಡಾ. ವಿಷ್ಣುಕೈಬರಹ

ಈ ಎರಡೂ ಪತ್ರಗಳಲ್ಲೂ ಡಾ. ರಾಜ್ ಮತ್ತು ಡಾ. ವಿಷ್ಣು ಅವರ ಕೈ ಬರಹವನ್ನು ಇವತ್ತಿನ ಯುವ ಪೀಳಿಗೆಗೆ ನಟ ನವರಸ ನಾಯಕ ಜಗ್ಗೇಶ್ ಪತ್ರದ ಮೂಲಕ ಪರಿಚಯ ಮಾಡಿಸಿದ್ದಾರೆ.

 

 

Tags