ಸುದ್ದಿಗಳು

ಅಣ್ಣಾವ್ರಿಗೆ ಪ್ರಶಸ್ತಿಗಳು ಬಂದಾಗ…ದೊಡ್ಡತನ ಮೆರೆದ ಬಗೆ

ಡಾ. ರಾಜ್ ಅರಸಿ ಬಂದ ಬಿರುದು ಬಾವುಲಿಗಳು, ಅದರ ಹಿಂದೋಡದ ಅಣ್ಣಾ..!!

ಬೆಂಗಳೂರು, ಸ.10: ಕರ್ನಾಟಕ ಸರಕಾರ ಪ್ರಪ್ರಥಮವಾಗಿ ಅಣ್ಣಾವ್ರಿಗೆ “ಕರ್ನಾಟಕ ರತ್ನ” ಪ್ರಶಸ್ತಿಯನ್ನು ಕೊಡಲು ಹೊರಟಾಗ ಅಣ್ಣಾವ್ರು ನನಗಿ೦ತ ಮೊದಲು ಕವಿ ಕುವೆ೦ಪು ರವರಿಗೆ ಸಿಗಬೇಕೆ೦ದು ಹೇಳಿ ಬಿಟ್ಟರು.

ರಾಜ್ ಅವರ ವ್ಯಕ್ತಿತ್ವ

ರಾಜ್ ಕುಮಾರ್ ಅವರ ಬಗ್ಗೆ ಪ್ರಸ್ತಾಪಿಸಿದ, ಯು. ಆರ್. ಅನ೦ತ್ ಮೂರ್ತಿಯವರು ‘ ಸಿನಿಮಾ ಪ್ರಪ೦ಚದಲ್ಲಿದ್ದರೂ ಅಣ್ಣಾವ್ರಿಗೆ ಕನ್ನಡದ ಸಾಹಿತ್ಯ ಪ್ರಪ೦ಚದ ಅಸ್ತಿತ್ವದ ಅರಿವಿತ್ತು ಹಾಗೂ ಈ ಘಟನೆ ಅವರ ನಮ್ರತೆಯನ್ನು ತೋರಿಸುತ್ತದೆ” ಎಂದರು.

ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯ ಹಣವನ್ನು ಅಣ್ಣಾವ್ರು ಕನ್ನಡ ಸಾಹಿತ್ಯ ಪರಿಷತ್ತಿಗೆ ನೀಡಿದರು. ಆ ಮೂಲಕ ಒಂದು ಸಾಹಿತ್ಯ ದತ್ತಿ ಸ್ಥಾಪನೆಗೆ ಕಾರಣರಾದರು.

ಸಾಮಾಜಿಕ ಕಾರ್ಯ

ಕರ್ನಾಟಕದ ಜನರು 1961ರಲ್ಲಿ ಪ್ರವಾಹ ಪೀಡಿತರಾಗಿ ಕಷ್ಟನಷ್ಟಗಳಿಗೆ ಒಳಗಾದಾಗ ‘ಪ್ರಜಾವಾಣಿ’ ಪತ್ರಿಕೆಯ ಆಶಯದಂತೆ ಅಣ್ಣಾವ್ರು ಕನ್ನಡದ ಎಲ್ಲ ಚಲನಚಿತ್ರ ಕಲಾವಿದರ ನೇತೃತ್ವವಹಿಸಿ ರಾಜ್ಯಾದ್ಯಂತ ಪ್ರವಾಸ ಮಾಡಿ ಸಂತ್ರಸ್ತ ಜನರಿಗಾಗಿ ನಿಧಿ ಸಂಗ್ರಹ ಮಾಡಿದರು. ಇದೊಂದು ಅಪರೂಪದ ಸಾಮಾಜಿಕ ಕಾರ್ಯವಾಗಿತ್ತು.

ಇನ್ನು ರಾಜ್ಯ, ದೇಶ ಮಾತ್ರವಲ್ಲದೇ ಅಂತರಾಷ್ಟ್ರಿಯ ಮಟ್ಟದಲ್ಲೂ ಡಾ. ರಾಜ್ ಗುರುತಿಸಿಕೊಂಡು ಸುಮಾರು 179 ಪ್ರಶಸ್ತಿಗಳಿಗೆ ಬೋಜನರಾಗಿದ್ದರು. ಇನ್ನು ಡಾಕ್ಟರೇಟ್ ಪದವಿ ಪಡೆದ ಭಾರತೀಯ ಮೊದಲ ನಟರಾಗಿದ್ದರು. ಹಾಗೂ ಯು.ಎಸ್.ಎ ‘ಕೆಂಟಕಿ ಕೊಲೆನಲ್’ ನೀಡುವ ಕೆಂಟಕಿ ಕೊಲೆನಲ್’ ಪ್ರಶಸ್ತಿಯನ್ನು ಪಡೆದ ಭಾರತೀಯ ಮೊದಲ ನಟರಾಗಿದ್ದರು.

ಹೀಗೆ ಅಭಿಮಾನಿಗಳ ಪಾಲಿಗೆ ತುಂಬಾ ದೊಡ್ಡ ನಟರಾಗಿದ್ದ ರಾಜ್ ಕುಮಾರ್ ಅವರು, ಪ್ರೇಕ್ಷಕರಿಂದಲೂ ‘ಗಾನ ಗಂಧರ್ವ’,’ರಸಿಕರ ರಾಜ’,’ವರನಟ’, ‘ಅಣ್ಣಾವ್ರು’.. ಹೀಗೆ ಅನೇಕ ಬಿರುದುಗಳನ್ನು ಪಡೆದಿದ್ದಾರೆ.

Tags