ಸುದ್ದಿಗಳು

‘ಕೆ.ಜಿ.ಎಫ್’ ಅಣ್ಣಾವ್ರ ವರ್ಶನ್: ಮಿಸ್ ಮಾಡದೇ ವಿಡಿಯೋ ನೋಡಿ..!!!

ಕಳೆದ ವರ್ಷ ತೆರೆ ಕಂಡು ಭರ್ಜರಿ ಯಶಸ್ವಿಯಾಗಿದ್ದ ರಾಕಿಂಗ್ ಸ್ಟಾರ್ ಯಶ್ ಅಭಿನಯಿಸಿದ್ದ  ‘ಕೆಜಿಎಫ್’ ಚಿತ್ರವು ಕನ್ನಡ ಚಿತ್ರರಂಗದ ಕಂಪನ್ನು ಎಲ್ಲೆಡೆ ಹರಡಿತು. ಅಲ್ಲದೇ ಈ ಸಿನಿಮಾ ಅನೇಕ ಪ್ರಶಸ್ತಿಗಳನ್ನು ಸಹ ಪಡೆದುಕೊಂಡಿತು.

ಅಂದ ಹಾಗೆ ಈ ಚಿತ್ರದ ಟ್ರೈಲರ್ ಅನ್ನು ವರನಟ ಡಾ. ರಾಜ್ ಕುಮಾರ್ ನಟಿಸಿರುವ ‘ಮಯೂರ’ ಚಿತ್ರಕ್ಕೆ ಅಭಿಮಾನಿಗಳು ಅಳವಡಿಸಿದ್ದಾರೆ. ಈ ವಿಡಿಯೋವೀಗ ‘ಕೆ.ಜಿ.ಎಫ್’ ಅಣ್ಣಾವ್ರ ವರ್ಶನ್ ಎಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಬಾರೀ ಮೆಚ್ಚುಗೆ ಪಡೆಯುತ್ತಿದೆ.

‘ಕೆ.ಜಿಎಫ್’ ಚಿತ್ರದಲ್ಲಿ ಅಣ್ಣಾವ್ರು ಅಭಿನಯಿಸಿದ್ದರೆ, ಹೇಗಿರುತ್ತಿತ್ತು ಎನ್ನುವುದನ್ನು ‘ಮಯೂರ’ ಚಿತ್ರದ ಮೂಲಕವೇ ತೋರಿಸಿರುವುದು ಅಭಿಮಾನಿಗಳಿಗೆ ಖುಷಿಯಾಗಿದೆ. ಅಲ್ಲದೇ ಎಡಿಟಿಂಗ್ ಸಹ ಮೆಚ್ಚುಗೆಗೆ ಪಾತ್ರವಾಗಿದೆ.

ಕಾದಂಬರಿ ಆಧಾರಿತ ಸಿನಿಮಾಗಳಲ್ಲಿ ನಟಿಸುತ್ತಿಲ್ಲ: ನಟ ಪುನೀತ್ ರಾಜ್ ಕುಮಾರ್

#Rajkumar #KgfVersion #yash, #mayura #sandalwoodmovies  ‍#kannadasuddigalu

Tags