ಸುದ್ದಿಗಳು

ಡಾ. ರಾಜ್ ಓಡಾಡಿದ ಕಾರಲ್ಲೇ ದೇವರನ್ನು ಕಾಣುತ್ತಿರುವ ಅಭಿಮಾನಿ

ವರನಟ ಡಾ. ರಾಜ್ ಕುಮಾರ್ ಅವರನ್ನು ಕಂಡರೆ ಯಾರಿಗೆ ಇಷ್ಟವಿಲ್ಲ ಹೇಳಿ, ಅಭಿಮಾನಿಗಳೇ ದೇವರು ಎನ್ನುವ ರಾಜ್ ರನ್ನು ಅಭಿಮಾನಿಗಳು ದೇವರಂತೆ ಪೂಜಿಸುತ್ತಾರೆ. ಅವರು ನಮ್ಮನ್ನಗಲಿ ತುಂಬಾ ವರ್ಷಗಳೇ ಕಳೆದರೂ ಕೂಡ ಇನ್ನೂ ಅವರು ನಮ್ಮೊಂದಿಗೆಯೇ ಇದ್ದಾರೆ ಅನ್ನೋ ಭಾವನೆಯಿಂದ ಅವರನ್ನು ಅಭಿಮಾನಿಗಳು ಪೂಜಿಸುತ್ತಿದ್ದಾರೆ. ಅವರ ಚಿತ್ರಗಳು ಸಹ ಜೀವನ ಪಾಠವನ್ನು ತಿಳಿಸಿಕೊಡುತ್ತವೆ. ಅವರಿಗೆ ಕೋಟ್ಯಾಂತರ ಅಭಿಮಾನಿ ಜನರೇ ಇದ್ದಾರೆ. ಇಂತಹ ಕೋಟ್ಯಾಂತರ ಜನರ ಅಭಿಮಾನಿಗಳ ನಡುವೆ ಧಾರವಾಡದ ಸಾಧಿಕ್ ಧನ್ನುನವರ್ ಎಂಬುವವರು ಸ್ವಲ್ಪ ಭಿನ್ನವಾಗಿ ಕಂಡು ಬರುತ್ತಾರೆ.

ಸಾಧಿಕ್ ಧನ್ನುನವರ್, ಇವರು ಧಾರವಾಡದ ನಿವಾಸಿ, ಹಾಗೂ ರಾಜಕುಮಾರ್ ಅವರ ಅಪ್ಪಟ ಅಭಿಮಾನಿ. ಇದೀಗ ಅವರು ಡಾ. ರಾಜ್ ಕುಮಾರ್ ಅವರು ಓಡಾಡಿರುವ ಕಾರನ್ನೇ ಖರೀದಿ ಮಾಡಿ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಅಷ್ಟೇ ಅಲ್ಲಾ ದಿನನಿತ್ಯ ಕಾರಿನಲ್ಲಿ ಓಡಾಡುತ್ತಾ, ಕಾರಿನಲ್ಲಿಯೇ ರಾಜ್ ರನ್ನು ಕಾಣುತ್ತಾ ಹೆಮ್ಮೆ ಪಡುವಂತೆ ಮಾಡುತ್ತಿದ್ದಾರೆ.

ಇನ್ನು ಡಾ. ರಾಜ್ ಅವರ ಜನುಮದಿನದಂದು, ಕಾರಿನ ಮೇಲೆ ಅಣ್ಣಾವ್ರ ಭಾವಚಿತ್ರವಿಟ್ಟು ಕೇಕ್ ಕಟ್ ಮಾಡುತ್ತಾರೆ. ಇದು ರಾಜ್ ಬಳಸುತ್ತಿದ್ದ 1960 ರ ಮಾಡೆಲ್ ಅಂಬಾಸಿಟರ್ ಕಾರನ್ನು ಖರೀದಿಸಿರುವ ಇವರು ಅತ್ಯಂತ ಪ್ರೀತಿಯಿಂದ ಮತ್ತು ಕಳಕಳಿಯಿಂದ ಕಾರಿನ ಸೇವೆಯನ್ನು ಮಾಡುತ್ತಿದ್ದಾರೆ.

ಈ ಮೂಲಕ ತಮ್ಮ ಅಭಿಮಾನವನ್ನು ತೋರುತ್ತಿರುವ ಸಾಧಿಕ್ ಅವರಿಗೆ ಡಾ. ರಾಜ್ ಅವರೆಂದರೆ ಪಂಚಪ್ರಾಣವಂತೆ. ಅವರ ಎಲ್ಲಾ ಚಿತ್ರಗಳನ್ನು ಇಷ್ಟಪಡುತ್ತಿದ್ದ ಸಾಧಿಕ್ ಅವರು ಈ ಕಾರ್ ನಲ್ಲಿ ರಾಜ್ ರನ್ನು ಕಾಣುವ ಮೂಲಕ ತಮ್ಮ ಅಭಿಮಾನವನ್ನು ವ್ಯಕ್ತಪಡಿಸುತ್ತಾರೆ.

 

@ ಸುನೀಲ ಜವಳಿ

Tags

Related Articles

Leave a Reply

Your email address will not be published. Required fields are marked *