ಸುದ್ದಿಗಳು

ಫ್ಲ್ಯಾಶ್ ಬ್ಯಾಕ್: ವೈರಲ್ ಆಯ್ತು 41 ವರ್ಷಗಳ ಹಿಂದಿನ ಡಾ|| ರಾಜ್ ಕುಟುಂಬದ ಈ ಫೋಟೋ!!

ಹಳೆಯ ಮಧುರ ನೆನಪುಗಳೇ ಹಾಗೆ. ಅದನ್ನು ಅಳಿಸಲಾಗದು. ಅದರಲ್ಲೂ ಹಳೆ ಫೋಟೋಗಳನ್ನು ಕಂಡರೆ ಅದೆಷ್ಟೋ ನೆನಪುಗಳು ಮತ್ತೆ ನಮ್ಮನ್ನ ಮರುಕಳಿಸುತ್ತವೆ. ಅದರಲ್ಲೂ ಹಳೆ ಪೋಟೋಗಳನ್ನು ನೋಡೋದೇ ಒಂಥರಾ ಥ್ರಿಲ್.  ಅದರಲ್ಲೂ ಆ ಫೋಟೋ ಹಿಂದಿನ ಕಥೆ ನೆನಸಿದರೆ ಸಾಕು ನಗು, ಬೇಸರ ಎಲ್ಲವೂ ಒಮ್ಮೆಲೇ ಉಕ್ಕಿ ಬರುತ್ತವೆ. ಯಾಕೆಂದರೆ ಕಳೆದು ಹೋದ ದಿನಗಳೇ ನಮಗೆ ತುಂಬಾ ಖುಷಿ ಕೊಟ್ಟಿರುತ್ತವೆ. ಆಗಿನ ಕಾಲದಲ್ಲಿ ಬ್ಲ್ಯಾಕ್ ಆ್ಯಂಡ್ ವೈಟ್ ಫೋಟೋ ಫೇಮಸ್.

ಈಗ ಇಂತಹದೇ ಒಂದು ಫೋಟೋ ವೈರಲ್ ಆಗಿದೆ.
ಕನ್ನಡದ ಕಣ್ಮಣಿ ಡಾ.ರಾಜ್‍ಕುಮಾರ್ ಅವರ ಒಂದು ಅಪರೂಪದ ಫೋಟೋ  ವೈರಲ್ ಆಗಿದೆ. ಅಂದಹಾಗೆ ಈ ಫೋಟೋ ತೆಗೆದಿದ್ದು 41 ವರ್ಷಗಳ ಹಿಂದೆ. ಹಿರಿಯ ಪತ್ರಕರ್ತ ಜೆ.ಕುಮಾರ್ ಎಂಬುವವರು ಈ ಫೋಟೋ ತೆಗೆದಿದ್ದಾರೆ.

ಈ ಫೋಟೋ ತೆಗೆದ ಸಮಯದಲ್ಲಿ ಡಾ.ರಾಜ್‍ಕುಮಾರ್ ಕುಟುಂಬ, ಚೆನ್ನೈನ ಟಿ.ನಗರದಲ್ಲಿ ವಾಸಿಸ್ತಾ ಇತ್ತು.
ಒಂದು ಭಾನುವಾರ ಜೆ.ಕುಮಾರ್ ಅಣ್ಣಾವರ ಮನೆಗೆ ಊಟಕ್ಕೆ ಹೋಗಿದ್ದರಂತೆ. ಮಧ್ಯಾಹ್ನದ ಊಟ ಮುಗಿಸಿ ಎಲ್ಲರೂ ಟಿವಿ ಹಾಲ್‍ನಲ್ಲಿ ಟಿವಿ ನೋಡೋದು ಅಣ್ಣಾವರ ಕುಟುಂಬದ ಪ್ರತೀತಿ. ಅದರಂತೆ ಅವತ್ತೂ ಕೂಡ ಮನೆಮಂದಿ ಎಲ್ಲ ಟಿವಿ ಹಾಲ್‍ನಲ್ಲಿ ಕೂತು ಟಿವಿ ನೋಡುತ್ತಾ ಇದ್ದರು. ಡಾ.ರಾಜ್‍ಕುಮಾರ್ ಆ ಫೋಟೋದಲ್ಲಿ ಎಷ್ಟು ಸರಳವಾಗಿ. ಆದರೆ ನಿಜ ಜೀವನದಲ್ಲಿ ಅವರು ಯಾವತ್ತೂ ಈ ಫೊಟೋದಲ್ಲಿರುವಷ್ಟೆ ತುಂಬಾ ಸರಳವಾಗಿ ನಿಂತಿದ್ದಾರೆ. ಇನ್ನು ಈ ಫೋಟೋದಲ್ಲಿ ಶಿವರಾಜ್‍ಕುಮಾರ್, ರಾಘವೇಂದ್ರ ರಾಜ್‍ಕುಮಾರ್, ಮಗಳು ಲಕ್ಷ್ಮೀ ಇದಾರೆ.

ಶಿವರಾಜ್ ಕುಮಾರ್, ರಾಘವೇಂದ್ರ ರಾಜ್‍ಕುಮಾರ್ ಹೇರ್ ಸ್ಟೈಲ್  ಹಿಪ್ಪಿ ಕಟ್ಟಿಂಗ್ ಆಗಿನ ಕಾಲಕ್ಕೆ ಅದು ಟ್ರೆಂಡ್ ಆಗಿತ್ತು. ಈ ಫೋಟೋವನ್ನು ಪುನೀತ್ ರಾಜ್ ಕುಮಾರ್ ಸಾಮಾಜಿಕ ಜಾಲಾತಾಣಗಳಲ್ಲಿ ಶೇರ್ ಮಾಡಿದ್ದರು ಇದು ಈಗ ಫುಲ್ ವೈರಲ್ ಆಗಿದೆ

Tags