ಸುದ್ದಿಗಳು

ಅಂದು ಡಾ. ರಾಜ್ ಮೆಚ್ಚಿದ್ದ ಕಥೆ ಈಗ ಸಿನಿಮಾವಾಗ್ತಿದೆ

ಡಾ. ರಾಜ‍ಕುಮಾರ್ ಅವರು ಅಂದು ಮೆಚ್ಚಿದ್ದ ಕಥೆಯೊಂದು ಇದೀಗ ‘ಅಕಳಂಕ’ ಎಂಬ ಹೆಸರಿನಲ್ಲಿ ಸಿನಿಮಾ ಮಾಡಿದ್ದಾರೆ ನಿರ್ದೇಶಕರಾದ ಸಿ.ವಿ. ಶಿವಶಂಕರ್ ರವರು. ಇವರು ಗೀತ ರಚನೆಕಾರರೂ ಹೌದು.

ಕೆಲವು ವರ್ಷಗಳ ಹಿಂದೆಯಷ್ಟೇ ಡಾ. ರಾಜ್ ಅವರು ಮೆಚ್ಚಿದ್ದ ಅರಸು ಚಿತ್ರದ ಕಥೆಯು ಪುನೀತ್ , ರಮ್ಯಾ, ಮೀರಾ ಜಾಸ್ಮೀನ್ ಅಭಿನಯದಲ್ಲಿ ಚಿತ್ರವಾಗಿ ಮೂಡಿ ಬಂದಿತ್ತ. ಅದರಂತೆ ಇದೀಗ ಬರುತ್ತಿರುವ ‘ಅಕಳಂಕ’ ಚಿತ್ರದ ಕಥೆಯನ್ನೂ ಸಹ ಮೆಚ್ಚಿಕೊಂಡಿದ್ದರು.

‘ಒಳ್ಳೇ ಸಿನಿಮಾ’ ಎಂಬ ಹೆಸರಿನಲ್ಲಿ ಚಿತ್ರವನ್ನು ಸದ್ಯದಲ್ಲೇ ನಿರ್ದೇಶಿಸುವುದಾಗಿ ಕಳೆದ ನಿರ್ದೇಶಕರಾದ ಸಿ ವಿ ಶಿವಶಂಕರ್ ಅವರು ಅಕಳಂಕ ಎಂದು ಟೈಟಲ್ ಬದಲಿಸಿದ್ದುಅಲ್ಲದೇ ಚಿತ್ರವನ್ನು ಸದ್ದಿಲ್ಲದೆ ಮಾಡಿ ಮುಗಿಸಿದ್ದಾರೆ.

ಒಮ್ಮೆ ರಾಜಕುಮಾರ್, ರಜನಿಕಾಂತ್, ಶಿವರಾಮ್ ಮುಂತಾದವರೆಲ್ಲಾ ಶಬರಿಮಲೆಗೆ ಹೋದ ಸಂದರ್ಭದಲ್ಲಿ ಅವರನ್ನು ನೋಡುವುದಕ್ಕೆ ಸಾವಿರಾರು ಜನ ಸೇರಿದ್ದರು. ಆಗ ನಾನು ಬೇರೆ ದಾರಿಯಿಂದ ರಾಜಕುಮಾರ್ ಅವರನ್ನು ದರ್ಶನಕ್ಕೆ ಕರೆದುಕೊಂಡು ಹೋದೆ. ನಂತರ ದರ್ಶನ ಮಾಡಿದೆವು. ನಾವು ಉಳಿದುಕೊಂಡಿದ್ದ ಜಾಗಕ್ಕೆ ವಾಪಸ್ಸು ಹೋದರೆ ತುಂಬಾ ಜನ ಇರುತ್ತಾರೆಂದು ಇಬ್ಬರೇ ಕಾಂತಮಲೈ ಬೆಟ್ಟಕ್ಕೆ ಹೋದೆವು. ಆ ಸಂದರ್ಭದಲ್ಲಿ ಡಾ. ರಾಜಕುಮಾರ್ ಅವರಿಗೆ ಒಂದು ಕಥೆ ಹೇಳಿದ್ದೆ. ಧರ್ಮರಾಯ ವೈಕುಂಠಕ್ಕೆ ಹೋಗುವಾಗಿನ ಕಥೆಯನ್ನು ಈಗಿನ ಕಾಲಕ್ಕೆ ಮಾರ್ಪಾಡು ಮಾಡಿ ಹೇಳಿದೆ. ಆ ಕಥೆ ಕೇಳಿ ಡಾ. ರಾಜಕುಮಾರ್ ಅವರು ಬಹಳ ಖುಷಿಪಟ್ಟರು. ಆ ಕಥೆಯೇ ಈಗ `ಅಕಳಂಕ’ವಾಗಿದೆ’ ಎನ್ನುತ್ತಾರೆ ಸಿ.ವಿ. ಶಿವಶಂಕರ್.

ಚಿತ್ರದಲ್ಲಿ ನಿರ್ದೇಶಕರ ಮಗನಾದ ಲಕ್ಷ್ಮಣ್ ಶಿವಶಂಕರ್ ಪ್ರಮುಖ ಪಾತ್ರವನ್ನು ಮಾಡಿದ್ದು, ಗಿರಿಜಾ ಲೋಕೇಶ್, ದೊಡ್ಡಣ್ಣ, ದತ್ತಣ್ಣ, ಆಂಜನಪ್ಪ, ಜಿಮ್ ಶಿವು, ಗಣೇಶ್ ರಾವ್ ಸೇರಿದಂತೆ ಅನೇಕರು ತಾರಾಬಳಗದಲ್ಲಿದ್ದಾರೆ.
‘ಅಕಳಂಕ’ ಚಿತ್ರಕ್ಕೆ ಸಿ.ವಿ. ಶಿವಶಂಕರ್ ಅವರೇ ಕಥೆ, ಚಿತ್ರಕಥೆ, ಸಂಭಾಷಣೆ ಮತ್ತು ಸಾಹಿತ್ಯ ರಚಿಸಿದ್ದು, ಶಿವಸತ್ಯ ಸಂಗೀತ, ವೆಂಕಟ್ ಅವರ ಛಾಯಾಗ್ರಹಣವಿದೆ. ಎಲ್ಲವೂ ಅಂದುಕೊಂಡಂತಾದರೆ ಅತೀ ಶೀಘ್ರದಲ್ಲಿಯೇ ಈ ಚಿತ್ರವು ತೆರೆಗೆ ಬರಲಿದೆ.

 

@ sunil javali

Tags

Related Articles

Leave a Reply

Your email address will not be published. Required fields are marked *