ಸುದ್ದಿಗಳು

ಒಂದೇ ವೇದಿಕೆಯಲ್ಲಿ ರಾಕಿಂಗ್ ಸ್ಟಾರ್ ಹಾಗೂ ರಾಜಮೌಳಿ ಸಮಾಗಮ!!

‘ಕೆಜಿಎಫ್ ಪ್ರೀ’ ರಿಲೀಸ್ ಕಾರ್ಯಕ್ರಮ ಮುಂದಕ್ಕೆ…

ಹೈದರಾಬಾದ್,ಡಿ.6: ಕೆಜಿಎಫ್ ಚಿತ್ರದ 2 ನೇ ಟ್ರೇಲರ್  ನಿನ್ನೆಯಷ್ಟೇ ಬಿಡುಗಡೆಯಾಗಿದ್ದು ಭಾರತದಾದ್ಯಂತ ಯಶ್ ಹವಾ ಹಾಗೂ ಕೆಜಿಎಫ್ ಹವಾ ಜೋರಾಗಿಯೇ ಇದೆ… ಇನ್ನು ತೆಲುಗಿನಲ್ಲಿ ‘ಕೆಜಿಎಫ್ ಪ್ರೀ’ ರಿಲೀಸ್ ಕಾರ್ಯಕ್ರಮ ಇಂದು ನಡೆಯಬೇಕಿತ್ತು.. ಆದರೆ ಅದು ಡಿ.9 ಕ್ಕೆ ಮುಂದೂಡಲಾಗಿದೆ…

ಕೆಜಿಎಫ್ ಪ್ರೀ ರಿಲೀಸ್

ವಿಶೇಷವೆಂದರೆ ಯಶ್​ ಅಭಿನಯದ ‘ಕೆಜಿಎಫ್’ ಚಿತ್ರದ ಪ್ರಮೋಷನ್​ ಗೆ  ರಾಜಮೌಳಿ ಸಾಥ್ ನೀಡುತ್ತಿದ್ದಾರೆ.  ಹೌದು ಇದೇ ಡಿ. 9 ರಂದು ಹೈದರಾಬಾದ್​​ ನಲ್ಲಿ ನಡೆಯಲಿರುವ ‘ಕೆಜಿಎಫ್​’ ಪ್ರೀ ರಿಲೀಸ್ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ನಿರ್ದೇಶಕ ರಾಜಮೌಳಿ ಆಗಮಿಸಲಿದ್ದಾರೆ..

 ಒಂದೇ ವೇದಿಯಲ್ಲಿ ಇವರಿಬ್ಬರು

ಇನ್ನು ಇತ್ತೀಚೆಗೆಯಷ್ಟೇ ರಾಜಮೌಳಿ ಹಾಗೂ ಯಶ್  ಒಂದಾಗಲಿದ್ದಾರೆ.. ಆರ್ ಆರ್ ಆರ್ ಚಿತ್ರದಲ್ಲಿ ಯಶ್ ನಟಿಸುತ್ತಾರೆ ಎಂಬ ಗುಲ್ಲು ಎಲ್ಲೆಡೆ ಹಬ್ಬಿತ್ತು.. ಆದರೆ ಯಶ್ ಮಾತ್ರ ಇದನ್ನು ನಿರಾಕರಿಸಿದ್ದರು..  ಆದರೆ ಈಗ ವಿಧಿಯಾಟ ನೋಡಿ, ಯಶ್ ಹಾಗೂ ನಿರ್ದೇಶಕ ರಾಜಮೌಳಿ ಒಂದೇ ವೇದಿಕೆಯಲ್ಲಿ ಸಮಾಗಮವಾಗಲಿದ್ದಾರೆ..

 

Tags