ಸುದ್ದಿಗಳು

ರಾಜ್ಯ ಪ್ರಶಸ್ತಿ ಪ್ರದಾನ ಮುಂದೂಡಿಕೆ…

2018 ನೇ ಸಾಲಿನ ರಾಜ್ಯ ಪ್ರಶಸ್ತಿ ಪ್ರದಾನ

ಬೆಂಗಳೂರು,ನ,24: ಮಂಡ್ಯ ಜಿಲ್ಲೆಯ ಪಾಂಡವಪುರದಲ್ಲಿ ನಡೆದ ಬಸ್  ಅಪಘಾತದ ಹಿನ್ನೆಲೆ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಮುಂದೂಡಲಾಗಿದೆ.

ಇಂದು ಸಂಜೆ ಜಿಕೆ ವಿಕೆಯಲ್ಲಿ ಆಯೋಜಿಸಲಾಗಿದ್ದ ಅದ್ಧೂರಿ ಕಾರ್ಯಕ್ರಮದಲ್ಲಿ‌ ರಾಜ್ಯದ ಮುಖ್ಯಮಂತ್ರಿಗಳು ಸೇರಿದಂತೆ ಚಿತ್ರೋದ್ಯಮದ ಗಣ್ಯರನೇಕರು ಭಾಗವಹಿಸಬೇಕಿತ್ತು. ಕಳೆದ ವರ್ಷ ಕನ್ನಡ ಚಿತ್ರರಂಗದಲ್ಲಿ ಅಮೋಘ ಸಾಧನೆ ಮಾಡಿದಂಥ ಚಂದನವನದ  ಕಲಾವಿದರು ಹಾಗು ತಂತ್ರಜ್ಞ ಪ್ರತಿಭೆಗಳಿಗೆ ಪ್ರಶಸ್ತಿ ವಿತರಿಸುವ ಸಮಾರಂಭ ನಿಗದಿಯಾಗಿತ್ತು.

Image result for hebbattu ramakka

2018 ನೇ ಸಾಲಿನ ರಾಜ್ಯ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಖುದ್ದಾಗಿ ಮುಖ್ಯಮಂತ್ರಿ ಕುಮಾರ ಸ್ವಾಮಿಯವರು ನೀಡಲಿದ್ದರು. ಆದರೆ ಪಾಂಡವುರದಲ್ಲಿ ನಿಜಕ್ಕೂ ದೊಡ್ಡ ಮಟ್ಟದಲ್ಲಿ ದುರಂತ ನಡೆದಿರುವ ಕಾರಣ ಸರ್ಕಾರವು ಇಂದಿನ ಕಾರ್ಯಕ್ರಮವನ್ನು  ರದ್ಸುಗೊಳಿಸಿರುವುದಾಗಿ ತಿಳಿದು ಬಂದಿದೆ

ಮುಖ್ಯಮಂತ್ರಿಗಳಪ್ರಕಟಣೆ

ಬೆಂಗಳೂರು, ನವೆಂಬರ್ 24- ಮುಖ್ಯಮಂತ್ರಿಗಳು ತಮ್ಮ ಇಂದಿನ ಎಲ್ಲ ಕಾರ್ಯಕ್ರಮಗಳನ್ನೂ ರದ್ದು ಪಡಿಸಿ ಪಾಂಡವಪುರ ತಾಲ್ಲೂಕು ಕನಗನಮರಡಿ ಗ್ರಾಮದ ಬಸ್ ಅಪಘಾತ ನಡೆದ ಸ್ಥಳಕ್ಕೆ ಧಾವಿಸಲಿದ್ದಾರೆ. ಇಂದು ಸಂಜೆ ನಡೆಯ ಬೇಕಿದ್ದ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಮುಂದೂಡುವಂತೆ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಸೂಚಿಸಿದ್ದಾರೆ.

 

Tags

Related Articles