ಸುದ್ದಿಗಳು

4 ಕೋಟಿ ರೂ.ಗೆ ಬೇಡಿಕೆಯಿಟ್ಟ ರಾಖಿ ಸಾವಂತ್ ಮಾಜಿ ಗೆಳೆಯ

ಬಾಲಿವುಡ್ ನಟಿ ರಾಖಿ ಸಾವಂತ್ ರಹಸ್ಯ ಮದುವೆಯನ್ನು ಟಿವಿಯಲ್ಲಿ ನೋಡುವುದಕ್ಕೆ ಆಗದಿದ್ದರೂ ಸುದ್ದಿಯನ್ನು ಈಗಾಗಲೇ ಕೇಳಿದ್ದೀರಿ. ರಾಖಿ ಮದುವೆ ಮುಂಬೈನ ಪ್ರಮುಖ ಹೋಟೆಲ್‌ನಲ್ಲಿ ಇತ್ತೀಚೆಗೆ ನಡೆದಿದೆ. ಆದರೆ ಮದುವೆಗೆ ಮಾಧ್ಯಮಗಳಿಗೆ ಆಹ್ವಾನ ಕೊಡದ ಕಾರಣ ಇದರ ಬಗ್ಗೆ ಯಾರಿಗೂ ನಿಜವಾಗಿಯೂ ತಿಳಿದಿರಲಿಲ್ಲ.

ಅಂದಹಾಗೆ ರಾಖಿ ಪತಿ ರಿತೇಶ್ ಎನ್‌ಆರ್‌ಐ ಆಗಿದ್ದು, ಯುಕೆ ನಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಒಡೆತನದ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಇದೀಗ ಮದುವೆಯ ಬಗ್ಗೆ ತಿಳಿದ ರಾಖಿಯ ಮಾಜಿ ಗೆಳೆಯ ದೀಪಕ್ ಕಲಾಲ್ ತನಗೆ ಮೋಸ ಮಾಡಿದ್ದಕ್ಕಾಗಿ 4 ಕೋಟಿ ರೂ.ಕೊಡಬೇಕೆಂದು ರಾಖಿಗೆ ಬೇಡಿಕೆಯಿಟ್ಟಿದ್ದಾನಂತೆ.

Image result for rakhi sawant deepak kalal

ಹೌದು, ರಾಖಿ ದೀಪಕ್ ಅವರನ್ನು ಮದುವೆಯಾಗದ ಕಾರಣ ಪರಿಹಾರ ನೀಡಬೇಕಿದೆ ಎಂದು ದೀಪಕ್ ಡಿಮ್ಯಾಂಡ್ ಮಾಡಿದ್ದಾರೆ. ಇದೀಗ ಈ ವಿಚಾರವಾಗಿ ಪ್ರತಿಕ್ರಿಯಿಸಿರುವ ರಾಖಿ ವಿಡಿಯೋ ಮೆಸೇಜ್ ನಲ್ಲಿ ದೀಪಕ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ವಿಡಿಯೋದಲ್ಲಿ ತನ್ನ ಮಾಜಿ ಗೆಳೆಯನನ್ನು ನಿಂದಿಸಿರುವ ರಾಖಿ, ಎಚ್ಚರಿಕೆ ನೀಡಿದ್ದಾಳೆ.

ನೀವು ರಾಖಿ ಮಾತನಾಡಿರುವ ವಿಡಿಯೋ ಮೆಸೇಜ್ ನೋಡಬೇಕೆಂದರೆ ಈ ಕೆಳಗಿನ ಇನ್ ಸ್ಟಾಗ್ರಾಂ ಲಿಂಕ್ ಕ್ಲಿಕ್ ಮಾಡಿ…

 

View this post on Instagram

 

A post shared by Rakhi Sawant (@rakhisawant2511) on

ರಾಶಿ ಖನ್ನಾ ಜೊತೆ ಮಾಸ್‌ ಮಹಾರಾಜ ರವಿ ತೇಜ ರೋಮ್ಯಾನ್ಸ್?

#balkaninews #rakhisawant #deepakkalal #wedding

Tags